ಮಡಿಕೇರಿ, ಮೇ ೨೮: ದೇಶದ ನೈಜ ಇತಿಹಾಸ ಮುಚ್ಚಿಡುವ ಯತ್ನವಾಗುತ್ತಿದೆ. ಇಂದಿನ ಯುವಪೀಳಿಗೆಗೆ ಸತ್ಯಾಂಶವನ್ನು ಅರಿತುಕೊಳ್ಳುವ ಅವಶ್ಯಕತೆ ಇದ್ದು, ಪ್ರತಿಯೊಬ್ಬರು ದೇಶದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕೆಂದು ಚಿಕ್ಕಮಗಳೂರಿನ ವಾಗ್ಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಸಿ.ಆರ್. ಪ್ರೇಮ್ ಕುಮಾರ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಅಮೃತ ಭಾರತಿಗೆ ಕನ್ನಡದ ಆರತಿ' ಅಭಿಯಾನದಲ್ಲಿ ಮುಖ್ಯ ಭಾಷಣ ಗಾರರಾಗಿ ಆಗಮಿಸಿ ಮಾತನಾಡಿದ ಅವರು, ೭೫ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಕೇಂದ್ರ ಸರಕಾರ ದೇಶದ ೭೫ ಸ್ಥಳಗಳಲ್ಲಿ ಆಯಾ ಜಿಲ್ಲೆಯ ಸ್ವಾತಂತ್ರö್ಯ ಹೋರಾಟಗಾರಿಗೆ ಗೌರವ ಸಲ್ಲಿಸುವ ಅಭಿಯಾನವನ್ನು ನಡೆಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಸಾವಿರಾರೂ ಹೋರಾಟಗಾರರು ಜೀವ ತೆತ್ತಿದ್ದಾರೆ. ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಅಣು ಬಾಂಬ್ ದಾಳಿಯಿಂದ ತಲೆಎತ್ತಲಾಗದ ಸ್ಥಿತಿಯಲ್ಲಿದ್ದ ಜಪಾನ್ ಕೇವಲ ೧೦ ವರ್ಷದಲ್ಲಿ ಯಾರು ಮುಟ್ಟಲಾಗದ ಎತ್ತರಕ್ಕೆ ಬೆಳೆಯಿತು. ಇದಕ್ಕೆ ಜಪಾನ್ ಪ್ರಜೆಗಳಲ್ಲಿದ್ದ ದೇಶಭಿಮಾನ ಕಾರಣವಾಯಿತು. ಜೊತೆಗೆ ಅಲ್ಲಿನ ಇತಿಹಾಸ ತಿಳಿಸಿ ಯುವಕರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಕೆಲವೇ ವರ್ಷದಲ್ಲಿ ಜಾಗತಿಕ ಮಟ್ಟದಲ್ಲಿ ಜಪಾನ್ ಮನ್ನಣೆ ಗಳಿಸಿತು. ಇತಿಹಾಸದ ಬಗ್ಗೆ ಸತ್ಯ ಹೇಳಿದರೆ ಮಾತ್ರ ದೇಶ ಸರ್ವತೋಮುಖವಾಗಿ ಸಾಧನೆ ಮಾಡಲು ಸಾಧ್ಯ. ೧೮೫೭ ರಲ್ಲಿ ನಡೆದ ಸ್ವಾತಂತ್ರö್ಯ ಚಳುವಳಿಯನ್ನು ಸಿಪಾಯಿ ದಂಗೆ ಎಂದು ಇತಿಹಾಸ ಹೇಳಿದೆ. ಅದು ಮೊದಲ ಸ್ವಾತಂತ್ರ್ಯ ಹೋರಾಟವಾಗಿತ್ತು. ದೇಶದ ನೈಜ ಇತಿಹಾಸವನ್ನು ಮರೆಮಾಚಬಾರದು. ಇದರಿಂದ ದೇಶ ಪರೋಕ್ಷವಾಗಿ ಹಿನ್ನಡೆ ಅನುಭವಿಸಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದ ಸ್ವಾತಂತ್ರ್ಯಕ್ಕೆ ಒಬ್ಬರು ಕಾರಣರಲ್ಲ ಸಾವಿರಾರೂ ಮಂದಿಯ ಬಲಿದಾನ ಕಾರಣವಾಗಿದೆ. ಹೋರಾಟದ ಕಾವು ಕಡಿಮೆ ಮಾಡಲು ಬ್ರಿಟಿಷರು ಕಾಂಗ್ರೆಸ್ ಪಕ್ಷ ಸ್ಥಾಪಿಸಿ ಹೋರಾಟಗಾರರನ್ನೇ ಸೇರಿಸಿಕೊಂಡು ಇಲ್ಲಿನ ಬೇಡಿಕೆಗಳ ಪಟ್ಟಿ ಪಡೆದು ಚಳುವಳಿಯನ್ನು ಹತ್ತಿಕುವ ಯತ್ನ ಕೂಡ ನಡೆದಿದೆ ಎಂದು ಅವರು, ಧಾರ್ಮಿಕ ಕಾರ್ಯಗಳ ಮೂಲಕ ಸ್ವಾತಂತ್ರ್ಯ ಹೋರಾಟವನ್ನೂ ಮಾಡಬಹುದು ಎಂಬುದನ್ನು ಬಾಲ ಗಂಗಾಧರ ತಿಲಕ್ ತೋರಿಸಿದ್ದಾರೆ. ಪಂಜಾಬ್ ಸಿಂಹ ಲಾಲ ಲಜಪಾತ ರಾಯ್ ಬ್ರಿಟಿಷರ ದಾಳಿಯನ್ನು ಲೆಕ್ಕಿಸದೆ ಹೋರಾಡಿದರು. ಛಡಿ ಏಟಿಗೂ ಬಗ್ಗದೆ ಚಂದ್ರಶೇಖರ್ ಅಜಾದ್ ಸ್ವಾತಂತ್ರ್ಯ ಕಿಚ್ಚು ಹಚ್ಚಿದರು. ಸಾವರ್ಕರ್ ಬರೆದ ಪುಸ್ತಕಕ್ಕೆ ಭಾರತದಲ್ಲಿ ನಿರ್ಬಂಧ ಹೇರಲಾಗಿತ್ತು. ಅದರ ನಡುವೆಯೂ ಪುಸ್ತಕ ಭಾರತಕ್ಕೆ ತಂದು ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸಿದರು. ಮಹಾತ್ಮ ಗಾಂಧಿ ಅಹಿಂಸೆ ಮೂಲಕ ಸ್ವಾತಂತ್ರö್ಯ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರ ಬಲಿದಾನದ ಪರಿಣಾಮ ಇಂದು ಸ್ವಾತಂತ್ರö್ಯ ಭಾರತದಲ್ಲಿದ್ದೇವೆ ಎಂದು ಹೇಳಿದರು.
ಭಾರತ ಸೇನೆಯ ಮೊದಲ ಮಹಾದಂಡನಾಯಕ ಫೀ.ಮಾ. ಕಾರ್ಯಪ್ಪ ಅವರದ್ದು ಧೀಮಂತ ವ್ಯಕ್ತಿತ್ವ. ಅಸ್ಪೃಶ್ಯತೆ ವಿರುದ್ಧ ಹೋರಾಟಕ್ಕೆ ಕೊಡಗಿನ ಗೌರಮ್ಮ ಚಿನ್ನಾಭರಣ ಕೊಡಗೆಯಾಗಿ ನೀಡಿದರು. ಅವರು ಧೀರ ಕನ್ಯೆ ಎಂದು ಬಣ್ಣಿಸಿದ ಅವರು ಕೊಡಗು ಜಿಲ್ಲೆ ಭಾರತೀಯ ಸೇನೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಭಾರತ ವಿಶ್ವ ಗುರು - ರಂಜನ್
ಮಡಿಕೇರಿ ವಿಧಾಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ಸ್ವಾತಂತ್ರö್ಯ
(ಮೊದಲ ಪುಟದಿಂದ) ಸೇನಾನಿಗಳನ್ನು ಸ್ಮರಿಸುವ ಕಾರ್ಯಕ್ರಮವಾಗಿದೆ. ವೀರ ಸಾವರ್ಕರ್, ಮಹಾತ್ಮ ಗಾಂಧೀಜಿ ಚಂದ್ರಶೇಖರ್ ಅಜಾದ್, ಬಾಲಗಂಗಾಧರ್ ತಿಲಕ್, ಸರ್ದಾರ್ ವಲ್ಲಬಾಯ್ ಪಾಟೀಲ್, ಸೇರಿದಂತೆ ಅನೇಕರು ಸ್ವಾತಂತ್ರö್ಯಕ್ಕಾಗಿ ಹೋರಾಡಿದ್ದಾರೆ. ಅಂಡಮಾನ್ ‘ಸೆಲ್ಯುಲರ್’ ಜೈಲಿನಲ್ಲಿ ಸಾವರ್ಕರ್ ಅವರಿಗೆ ಬ್ರಿಟಿಷರು ಚಿತ್ರಹಿಂಸೆ ನೀಡಿದ್ದು, ದೇಶದ ಜನರ
ಜೀವ ತೆಗೆದದಲ್ಲದೆ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಆದರೆ,
ಭಾರತ ದೇಶ ಇಂದಿಗೂ ಬಂಜೆಯಾಗಿಲ್ಲ. ಇಂದು ಭಾರತ ವಿಶ್ವ ಗುರುವಾಗಿದೆ. ಇಡೀ ಪ್ರಪಂಚ ಭಾರತದತ್ತ ತಿರುಗಿ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿದೆ. ಮೊದಲೆಲ್ಲ ವಿದೇಶದಲ್ಲಿ ಭಾರತೀಯರನ್ನು ಕೀಳಾಗಿ ನೋಡುತ್ತಿದ್ದರು. ಇವರು ಕಲ್ಲು, ಮರವನ್ನು ಪೂಜಿಸುತ್ತಾರೆ ಎಂದು ವ್ಯಂಗ್ಯವಾಡುತ್ತಿದ್ದರು. ಇದೀಗ ವಿದೇಶಿಗರಿಗೆ ಭಾರತೀಯರು ಪ್ರಕೃತಿ ಆರಾಧಕರು, ಪ್ರಕೃತಿಯಿಂದ ಆಗುವ ಲಾಭ, ಪೂಜೆಯ ಹಿಂದಿನ ನೈಜ ಚಿಂತನೆ ಅವರಿಗೆ ತಿಳಿದುಬಂದಿದೆ ಎಂದರು.
ದೇಶದ ಗೌರವ ಉಳಿಸಬೇಕು - ರವಿ ಕುಶಾಲಪ್ಪ
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಪರಕೀಯರಿಂದ ಸ್ವಾತಂತ್ರö್ಯ ಪಡೆದುಕೊಳ್ಳಲು ಸಾವಿರಾರೂ ಹೋರಾಟಗಾರರು ಜೀವ ಮುಡಿಪಾಗಿಟ್ಟಿದ್ದಾರೆ. ಸ್ವಾತಂತ್ರ್ಯ ಚಳುವಳಿಗೆ ಚಿನ್ನಾಭರಣ ನೀಡಿದ ಕೊಡಗಿನ ಗೌರಮ್ಮ, ಗುಡ್ಡೆಮನೆ ಅಪ್ಪಯ್ಯ ಗೌಡ, ಪಂದ್ಯAಡ ಬೆಳ್ಯಪ್ಪ, ಕುಡಿಯರ ಕರ್ತು ಸೇರಿದಂತೆ ಅನೇಕರು ಜಾತಿ, ಧರ್ಮ ಮೀರಿ ಹೋರಾಡಿದ್ದಾರೆ ಎಂದ ಅವರು, ಸ್ವಾತಂತ್ರö್ಯ ಇದೆ ಎಂದು ದೇಶದ ವ್ಯವಸ್ಥೆ ಹಾಳು ಮಾಡಬಾರದು. ದೇಶದ ಮೇಲೆ ಗೌರವವಿರಬೇಕು. ದೇಶದ ಕೀರ್ತಿ ಹೆಚ್ಚಿಸಬೇಕು. ರಾಷ್ಟçದ ವಿಚಾರದಲ್ಲಿ ಒಗ್ಗಟ್ಟಾಗಿರಬೇಕು. ಅಧಿಕಾರಿಗಳು ಸಮನ್ವಯತೆ ಸಾಧಿಸಿ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಬೇಕು. ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರು ಅನೇಕರು ಸೌಲಭ್ಯ ವಂಚಿತರಾಗಿದ್ದಾರೆ. ಅದು ದೂರವಾಗಬೇಕು. ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭ ಸ್ವಾತಂತ್ರö್ಯ ಹೋರಾಟದ ಬಗೆಗಿನ ಶಿಲಾಫಲಕ ಹಾಗೂ ಕಿರುಹೊತ್ತಿಗೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಸ್ವಸಹಾಯ ಸಂಘ ಸ್ಥಾಪಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸ್ತಿçÃಶಕ್ತಿ ಸಂಘಗಳಿಗೆ ತಲಾ ರೂ. ೧ ಲಕ್ಷ ಸಹಾಯಧನವನ್ನು ಇದೇ ಸಂದರ್ಭ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಮೇಶ್ ಹೊಳ್ಳ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಎಂ. ಅಯ್ಯಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ, ಉಪವಿಭಾಗಧಿಕಾರಿ ಯತೀಶ್ ಉಲ್ಲಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಡಿ. ದರ್ಶನ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಸದಸ್ಯ ಮಹೇಶ್ ಜೈನಿ ಹಾಜರಿದ್ದರು.
ಪ್ರತಿಮೆಗಳಿಗೆ ಪುಷ್ಪ ನಮನ
ಮೊದಲು ನಗರದ ಗಾಂಧಿ ಮೈದಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮೂಲಕ ಅಭಿಯಾನಕ್ಕೆ ಗಣ್ಯರು ಚಾಲನೆ ನೀಡಿದರು.
ಬಳಿಕ ಚೌಡೇಶ್ವರಿ ದೇವಾಲಯ ದಿಂದ ಅಲಂಕೃತ ಮಂಟಪದಲ್ಲಿ ಭಾರತಾಂಭೆ ಸೇರಿದಂತೆ ಸ್ವಾತಂತ್ರö್ಯ ಹೋರಾಟಗಾರರ ಭಾವಚಿತ್ರ ಉಳ್ಳ ಸ್ತಬ್ಧಚಿತ್ರಕ್ಕೆ ಶಾಸಕ ಅಪ್ಪಚ್ಚು ರಂಜನ್ ಡೋಲು ಭಾರಿಸುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು, ಎನ್.ಸಿ.ಸಿ. ವಿದ್ಯಾರ್ಥಿಗಳು ಸಾಗಿ ಬಂದರು. ಗೊಂಬೆ ಕುಣಿತ, ಪೂಜಾ ಕುಣಿತ, ಕೀಲು ಕುದುರೆ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಗಮನ ಸೆಳೆದವು.
ಮೆರವಣಿಗೆ ಸಾಗಿ ಬರುವ ಸಂದರ್ಭ ಅಮರ ಸೇನಾನಿಗಳಾದ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ, ಮಂಗೇರಿರ ಮುತ್ತಣ್ಣ, ಜನರಲ್ ತಿಮ್ಮಯ್ಯ, ಫೀ.ಮಾ. ಕೆ.ಎಂ. ಕಾರ್ಯಪ್ಪ, ಹಾಗೂ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯಗೌಡ ಅವರುಗಳ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.