ವೀರಾಜಪೇಟೆ, ಮೇ ೩೦: ಒಕ್ಕಲಿಗರ ನಿಗಮದ ಯೋಜನೆಯಡಿ ಕಣ್ಣಂಗಾಲ ಒಂಟಿಯAಗಡಿಯಲ್ಲಿ ಒಕ್ಕಲಿಗರ ಭವನ ನಿರ್ಮಿಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ರವೀಂದ್ರ ಹರಪಳ್ಳಿ ಹೇಳಿದರು.

ಕಣ್ಣಂಗಾಲ ಒಕ್ಕಲಿಗರ ಸಂಘದ ವತಿಯಿಂದ ಒಂಟಿಯAಗಡಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಶ್ರದ್ಧಾಭಾವನೆ ಹಾಗೂ ಒಗ್ಗಟ್ಟಿನಿಂದ ಸಮಾಜದಲ್ಲಿ ಕೆಲಸ ಮಾಡಿದರೆ ಯಶಸ್ಸು ಸಾಧ್ಯ. ಕೊಡಗಿನಲ್ಲಿ ಕ್ರೀಡಾಕೂಟಗಳು ಹೆಚ್ಚು ನಡೆಯುವ ಹಿನ್ನೆಲೆ ಸರ್ಕಾರ ಪ್ರೋತ್ಸಾಹ ನೀಡುವಂತಾಗಬೇಕು. ಯುವ ಜನತೆಗೆ ಕೊಡಗಿನಲ್ಲಿ ಕ್ರೀಡಾ ತರಬೇತಿ ಕೇಂದ್ರದ ಅವಶ್ಯವಿದ್ದು ಇದಕ್ಕೆ ನುರಿತ ಆಯೋಜಕರನ್ನು ನೇಮಿಸುವಂತಾಗಬೇಕು ಇದರಿಂದ ಗ್ರಾಮೀಣ ಭಾಗದ ಪ್ರತಿಭಾವಂತರು ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಭಾಗವಹಿಸಲು ಸಹಕಾರಿಯಾಗಲಿದೆ ೆ ಎಂದರು.

ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ ಮಾತನಾಡಿ ಒಕ್ಕಲಿಗರ ಸಂಘ ಪ್ರಾರಂಭಗೊAಡು ಅನೆಕ ವರ್ಷಗಳಾಗಿವೆ. ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ತಾಲೂಕುಗಳಲ್ಲಿ ಸದಸ್ಯರುಗಳು ಕೆಲಸಮಾಡಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ನಾಗರಾಜು ಮಾತನಾಡಿ ಕಳೆದ ಅನೇಕ ವರ್ಷಗಳಿಂದ ಒಕ್ಕಲಿಗರ ಸಂಘದ ಕ್ರೀಡಾಕೂಟವನ್ನು ನಡೆಸಿಕೊಂಡು ಬರುತ್ತಿದ್ದು ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣದಿಂದ ಸಾಧ್ಯವಾಗಿಲ್ಲ. ಮುಂದಿನ ವರ್ಷ ಇನ್ನು ವಿಜೃಂಭಣೆಯಿAದ ನಡೆಸುವುದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಣ್ಣಂಗಾಲ ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಕೆ.ದೇವಲಿಂಗಯ್ಯ ಮಾತನಾಡಿ ಒಕ್ಕಲಿಗರ ಭವನ ನಿರ್ಮಿಸಿ ಕೊಡುವಂತೆಯು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ರಾಜ್ಯ ಸಂಘದ ಕಾರ್ಯಾಧ್ಯಕ್ಷರನ್ನು ಸಭೆಯಲ್ಲಿ ಒತ್ತಾಯಿಸಿದರು.

ಇದೇ ಸಂದರ್ಭ ರಾಜ್ಯ ಸಂಘದ ರವೀಂದ್ರ ಹರಪಳ್ಳಿ ಹಾಗೂ ಜಿಲ್ಲಾ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ನಾಗರಾಜು, ಕಾರ್ಯದರ್ಶಿ ವರುಣ್, ಸಹಕಾರ ಸಂಘದ ವಿ.ಆರ್.ಪ್ರಭವತಿ, ಕೆ.ಎಸ್.ದಿನೇಶ್, ಉಪಾಧ್ಯಕ್ಷ ವಿ.ಆರ್.ಹರೀಶ್, ಉಪಾಧ್ಯಕ್ಷೆ ವಿ.ಆರ್., ಸದಸ್ಯರಾದ ವಿ.ಪಿ. ಜೀವನ್, ವಿ.ಪಿ. ಕಲ್ಪೆಶ್, ಗ್ರೀಷ್ಮ, ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕ್ರೀಡಾಕೂಟದಲ್ಲಿ ಪುರುಷರಿಗೆ ಹಗ್ಗಜಗ್ಗಾಟ, ೧೦೦ ಮೀ.ಓಟದ ಸ್ಪರ್ಧೆ- ಮಹಿಳೆಯರಿಗೆ ಸಂಗೀತ ಕುರ್ಚಿ ವಿಷದ ಚೆಂಡು, ಹಗ್ಗಜಗ್ಗಾಟ- ಪುಟ್ಟ ಮಕ್ಕಳಿಗೆ ಕಾಳು ಹೆಕ್ಕುವುದು ಮತ್ತು ೧೦೦ ಮೀ, ಓಟದ ಸ್ಪರ್ಧೆಗಳು ನಡೆದವು. ೨೦೨೧-೨೨ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.