ಚೆಟ್ಟಳ್ಳಿ ಮೇ ೩೦: ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ಕಳೆದ ೮ ದಿನಗಳಿಂದ ನಡೆಯುತ್ತಿರುವ ಜಿಲ್ಲಾ ಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ದ್ವಿತೀಯ ಸ್ಥಾನವನ್ನು ಕುಶಾಲನಗರ ಎಫ್.ಸಿ. ತಂಡ ಪಡೆದುಕೊಂಡಿದೆ.
ಜಿದ್ದಾಜಿದ್ದಿನಿAದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಮೊದಲ ಗೋಲು ಬಾರಿಸಿ ಕ್ಯಾಪ್ಟನ್ಸ್ ೧೧ ತಂಡವು ಮುನ್ನಡೆ ಕಾಯ್ದುಕೊಂಡಿತು. ಮೊದಲಾರ್ಧದ ಕೊನೆಯ ಕ್ಷಣದಲ್ಲಿ ಕುಶಾಲನಗರ ಎಫ್.ಸಿ ತಂಡವು ಸಮಬಲದ ಗೋಲು ಬಾರಿಸಿತು. ದ್ವಿತೀಯಾರ್ಧ ಕೊನೆಯ ಕ್ಷಣದಲ್ಲಿ ಕ್ಯಾಪ್ಟನ್ಸ್ ೧೧ ತಂಡವು ಗೋಲು ಬಾರಿಸಿ ೨-೧ ಗೋಲುಗಳ ಅಂತರದಿAದ ಗೆದ್ದು ಜಿಲ್ಲಾ ಫುಟ್ಬಾಲ್ ಲೀಗ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ಹಾಗೂ ರೋಜಾರಿಯನ್ಸ್ ಗೋಣಿಕೊಪ್ಪ ತಂಡಗಳ ನಡುವೆ ನಡೆಯಿತು. ಮೊದಲಾರ್ಧದಲ್ಲಿ ಎರಡು ತಂಡಗಳು ಸಮಬಲದ ಹೋರಾಟ ನಡೆಸಿತು. ದ್ವಿತೀಯಾರ್ಧದ ಕೊನೆಯ ಕ್ಷಣದಲ್ಲಿ ಕ್ಯಾಪ್ಟನ್ ೧೧ ಪಾಲಿಬೆಟ್ಟ ತಂಡದ ಮುನ್ನಡೆ ಆಟಗಾರ ದೀಕ್ಷಿತ್ ಅವರ ಎರಡು ಗೋಲುಗಳ ನೆರವಿನಿಂದ ೨-೦ ಗೋಲುಗಳ ಅಂತರದಿAದ ಕ್ಯಾಪ್ಟನ್ ೧೧ ತಂಡ ರೋಜಾರಿಯನ್ಸ್ ಗೋಣಿಕೊಪ್ಪ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು. ದ್ವಿತೀಯ ಸೆಮಿಫೈನಲ್ ಪಂದ್ಯವು ಕೆ.ಎಫ್.ಸಿ ಕುಶಾಲನಗರ ಹಾಗೂ ಸಿ.ಸಿ.ಬಿ. ವೀರಾಜಪೇಟೆ ತಂಡಗಳ ನಡುವೆ ನಡೆಯಿತು. ಕೆ.ಎಫ್.ಸಿ ತಂಡವು ೨-೧ ಗೋಲುಗಳ ಅಂತರದಿAದ ಗೆದ್ದು ಫೈನಲ್ ಪ್ರವೇಶಿಸಿತು.
ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಶೈನಿಂಗ್ ಬರ್ಡ್ಸ್ ತಂಡದ ಪ್ರವೀಣ್, ಅತ್ಯುತ್ತಮ ಆಟಗಾರ ಕುಶಾಲನಗರ ಎಫ್.ಸಿ ತಂಡದ ವಿಜಯ್, ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಕ್ಯಾಪ್ಟನ್ಸ್ ೧೧ ತಂಡದ ಸಿಜೇಶ್ ಪಡೆದುಕೊಂಡರು. ಕಳೆದ ೨೫ ವರ್ಷಗಳ ಕಾಲದಿಂದ ಜಿಲ್ಲೆಯ ಫುಟ್ಬಾಲ್ ಬೆಳವಣಿಗೆ ದುಡಿಯುತ್ತಿರುವ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಜಗದೀಶ್ ಅವರನ್ನು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕರಾದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಅಂತರರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಜಗದೀಶ್, ಮಿಲನ್ಸ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಸಿಜು,ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಖಜಾಂಚಿ ದೀಪು ಮಾಚಯ್ಯ ಇದ್ದರು. ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.