ಪೊನ್ನಂಪೇಟೆ, ಮೇ ೩೦: ಪೊನ್ನಂಪೇಟೆ ಕೊಡವ ಸಮಾಜಕ್ಕೆ ನಿನ್ನೆ ಸ್ಪರ್ಧಾತ್ಮಕ ರೀತಿಯಲ್ಲಿ ಚುನಾವಣೆ ನಡೆದಿದ್ದು, ಭಾರೀ ಪೈಪೋಟಿಯ ನಡುವೆ ೧೨ ಮಂದಿ ನಿರ್ದೇಶಕರು ಚುನಾಯಿತರಾಗಿದ್ದಾರೆ. ೯ ಮಂದಿ ಪುರುಷ ಸ್ಥಾನದ ನಿರ್ದೇಶಕರು ಹಾಗೂ ಮೂವರು ಮಹಿಳಾ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿತ್ತು. ಎರಡು ಗುಂಪುಗಳಾಗಿ ಆಕಾಂಕ್ಷಿಗಳು ಸ್ಪರ್ಧೆಯಲ್ಲಿದ್ದರಿಂದ ಚುನಾವಣೆ ಈ ಹಿಂದೆAದಿಗಿAತಲೂ ಕುತೂಹಲಕಾರಿ ಯಾಗಿತ್ತು. ನಿನ್ನೆ ತಡರಾತ್ರಿ ಫಲಿತಾಂಶ ಹೊರಬಿದ್ದಿದ್ದು, ಒಂದು ಗುಂಪಿನಿAದ ಏಳು ಹಾಗೂ ಮತ್ತೊಂದು ಗುಂಪಿನಿAದ ಐದು ಮಂದಿ ನೂತನ ನಿರ್ದೇಶಕರುಗಳಾಗಿ ಚುನಾಯಿತ ರಾಗಿದ್ದಾರೆ.

ಪುರುಷ ವಿಭಾಗದ ವಿಜೇತರು

ಆಲೆಮಾಡ ಡಿ. ಸುಧೀರ್ (೭೮೪), ಕಳ್ಳಿಚಂಡ ಕಟ್ಟಿ ಪೂಣಚ್ಚ (೯೧೬), ಕಾಳಿಮಾಡ ಎಂ. ಮೋಟಯ್ಯ (೯೭೩) , ಕೊಣಿಯಂಡ ಸಂಜು ಸೋಮಯ್ಯ (೮೧೬), ಕೋಟೆರ ಕಿಶನ್ ಉತ್ತಪ್ಪ (೮೨೧), ಮೂಕಳಮಾಡ ಅರಸು ನಂಜಪ್ಪ (೭೪೦), ಅಡ್ಡಂಡ ಸುನಿಲ್ ಸೋಮಯ್ಯ (೮೩೯), ಚೀರಂಡ ಕಂದಾ ಸುಬ್ಬಯ್ಯ (೮೧೪), ಚೆಪ್ಪುಡೀರ ಡಿ. ರಾಕೇಶ್ ದೇವಯ್ಯ (೮೪೭).

ಮಹಿಳಾ ಸ್ಥಾನ

ಚಿರಿಯಪಂಡ ಭೋಜಮ್ಮ ಇಮ್ಮಿ ಉತ್ತಪ್ಪ -(೯೧೧), ಮೂಕಳೆರ ಕಾವ್ಯ ಕಾವೇರಮ್ಮ (೮೭೮), ಆಶಾಪ್ರಕಾಶ್ ಚೊಟ್ಟೆಕಾಳಪಂಡ (೭೧೦) ಚುನಾವಣಾಧಿಕಾರಿಗಳಾಗಿ ಕಟ್ಟೇರ ಲಾಲಪ್ಪ ಹಾಗೂ ಕಳ್ಳೇಂಗಡ ಶಂಭು ಗಣಪತಿ ಕಾರ್ಯ ನಿರ್ವಹಿಸಿದರು.