ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಶಂಕಿತ ಐವರ ಬಂಧನ
ಡೆಹ್ರಾಡೂನ್, ಮೇ ೩೦: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಶಂಕಿತ ಆರೋಪಿಯನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಂಜಾಬ್ ಮತ್ತು ಉತ್ತರಾಖಂಡ್ ಜಂಟಿ ಪೊಲೀಸ್ ತಂಡವು ಅವನನ್ನು ಬಂಧಿಸಿದಾಗ ಶಂಕಿತನು ಪರ್ವತಗಳಲ್ಲಿ ಹೇಮಕುಂಡ್ ಸಾಹಿಬ್ ಯಾತ್ರೆಯ ಭಾಗವಾಗಿರುವ ಯಾತ್ರಾರ್ಥಿಗಳ ನಡುವೆ ಅಡಗಿಕೊಂಡಿದ್ದನು. ಇಂದು ಡೆಹ್ರಾಡೂನ್‌ನಿಂದ ಬಂಧಿತನಾಗಿರುವ ಶಂಕಿತ ವ್ಯಕ್ತಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನಾಗಿದ್ದು, ಗಾಯಕನ ಹತ್ಯೆಯ ಹೊಣೆಯನ್ನು ಅವನು ಹೊತ್ತುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಉತ್ತರಾಖಂಡದಿAದ ಇನ್ನೂ ಐವರು ಶಂಕಿತರನ್ನು ಬಂಧಿಸಲಾಗಿದೆ. ಅವರನ್ನೆಲ್ಲ ಪಂಜಾಬ್‌ಗೆ ಕರೆದೊಯ್ಯಲಾಗುತ್ತಿದೆ. ನಿನ್ನೆ ಪಂಜಾಬ್‌ನ ಮಾನ್ಸಾದಲ್ಲಿ ಸಿಧು ಮೂಸ್ ವಾಲಾ ಅವರು ಎಸ್‌ಯುವಿ ಚಲಾಯಿಸುತ್ತಿದ್ದಾಗ ಗುಂಡು ಹಾರಿಸಿದ್ದರು. ಈ ವರ್ಷದ ಆರಂಭದಲ್ಲಿ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಗಾಯಕ ಸಿಧು ಮೂಸೆ ವಾಲಾರ ಮೇಲೆ, ಸ್ವಯಂಚಾಲಿತ ಆಕ್ರಮಣಕಾರಿ ರೈಫಲ್‌ನಿಂದ ೩೦ ಬಾರಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ: ಮೂವರ ಬಂಧನ
ಬೆಂಗಳೂರು, ಮೇ ೩೦: ರೈತ ಮುಖಂಡ ರಾಕೇಶ್ ಟಿಕಾಯತ್ ಅವರ ಮುಖಕ್ಕೆ ಕಪ್ಪು ಮಸಿ ಎರಚಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಈವರೆಗೆ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ತಿಳಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಟಿಕಾಯತ್ ಮೇಲೆ ಹಲ್ಲೆ ವಿಚಾರ ಕುರಿತು ಮಾತನಾಡಿದ ಅವರು, ರೈತ ಮುಖಂಡನ ಮೇಲೆ ಪತ್ರಕರ್ತರ ಸೋಗಿನಲ್ಲಿ ಬಂದು ಮಸಿ ಹಾಕಿದ್ದಾರೆ. ಅವರು ಯಾವ ಪಕ್ಷದವರೆ ಆದರೂ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಇಂತಹ ಘಟನೆ ರಾಜ್ಯದಲ್ಲಿ ಆಗಬಾರದಿತ್ತು ಎಂದ ಗೃಹ ಸಚಿವರು, ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾವ ಪಕ್ಷದವರು ಕೂಡ ಇಂತಹ ಕೃತ್ಯ ಮಾಡಲು ಹೇಳಲ್ಲ. ಯಾರೆ ಆದ್ರು ಕೂಡ ಬಂಧನ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇನ್ನು ಪಠ್ಯ ವಿಚಾರ ಮರೆಮಾಚಲು ಈ ಪ್ರಕರಣ ಅಂತ ಡಿಕೆಶಿ ಆರೋಪ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನೊಂದು ವರ್ಷದಲ್ಲಿ ಚುನಾವಣೆ ಬರಲಿದೆ. ಹಾಗಾಗಿ ಕಾಂಗ್ರೆಸ್ ಆರೋಪ ಮಾಡುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿದೆ. ಜನರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಮಾತಿಗೆ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ ಎಂದರು.