ನಾಪೋಕ್ಲು ಮೇ. ೩೦ : ಸಂಘನೆಯಿAದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯ ಪಟ್ಟರು ಅವರು ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಕೊಳಕೇರಿ ಸ. ಶಾಲÁ ಮೈದಾನದಲ್ಲಿ ಏರ್ಪಡಿಸಲಾಗಿದ್ದ ವಜ್ರಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೊಳಕೇರಿ ನೂತನ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ಗ್ರಾಮದ ಜನರು ತಮ್ಮ ಪೀತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡದೇ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಸರಕಾರದ ಮಾಜಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ನೂತನ ಸಭಾ ಭವನವನ್ನು ಉದ್ಘಾಟಿಸಿ ಮಾತನಾಡಿ ಊರಿನ ದೇವಾಲಯದ ಅಭಿವೃದ್ದಿಯಿಂದ ಗ್ರಾಮೀಣ ಜನರ ಅಭಿವೃದ್ದಿ ಸಾಧ್ಯ ಎಂದರು. ಮತ್ತೊಬ್ಬ ಮುಖ್ಯ ಅತಿಥಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ ಕಳೆದ ೭೫ ವರ್ಷಗಳಿಂದ ಈ ಸಂಘವು ಜನಪರ ಮತ್ತು ಗ್ರಾಮದ ಅಭಿವೃದ್ಧಿಗೆ ಹೋರಾಡುತ್ತಾ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದÀರು ಇಂದು ನಾವು ನಮ್ಮ ಭಾಷೆ ಸಂಸ್ಕೃತಿಯನ್ನು ಮರೆಯುತ್ತಿದ್ದೀವಿ ಕೊಡವ ಭಾಷೆಯನ್ನು ಆಡುವವರು ಕಡಿಮೆಯಾಗುತ್ತಿದ್ದು ಇದನ್ನು ಕಾಪಾಡಲು ಸಂಘ ಸಂಸ್ಥೆಗಳು ಮುಂದೆ ಬರಬೇಕೆಂದರು.
ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಗ್ರಾಮಾಭಿವೃದ್ಧಿ ಸಂಘÀದ ಅಧ್ಯಕ್ಷ ಕೇಟೋಳಿರ ಎಸ್.ಕುಟ್ಟಪ್ಪ ಮಾತನಾಡಿ ೭೫ ವರ್ಷಗಳಿಂದ ಗ್ರಾಮ ಅಭಿವೃದ್ದಿ ಕಂಡಿದೆ. ಗ್ರಾಮಾಭಿವೃದ್ದಿ ಸಂಘದ ಸದಸ್ಯರು ಗ್ರಾಮದಲ್ಲಿ ಆಗುವ ರಸ್ತೆ ಸೇತುವೆ ಮೋರಿ ಮೊದಲಾದ ಕಾಮಗಾರಿಗಳತ್ತ ಗಮನ ಹರಿಸಿದರೆ ಉತ್ತಮ ಕೆಲಸ ಕಾರ್ಯಗಳು ನಡೆಯಲಿವೆ. ಸಂಘ ಜಿಲ್ಲೆಗೆ ಮಾದರಿ ಸಂಘ ಆಗಲಿದೆ ಎಂದರು. ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾತನಾಡಿ ಕಳೆದ ೭೫ ವರ್ಷಗಳ ಇತಿಹಾಸವನ್ನು ನಮ್ಮ ಸಂಘವು ಹೊಂದಿದ್ದು ಎಲ್ಲರ ಸಹಕಾರದಿಂದ ಇಂದು ವಜ್ರಮಹೋತ್ಸವ ಆಚರಿಸುವ ಹಂತಕ್ಕೆ ಬಂದಿದ್ದೇವೆ. ಕಾರ್ಯಕ್ರಮದ ಅಂಗವಾಗಿ ಕ್ರೀಡಾಕೂಟವನ್ನು ಏರ್ಪಾಡಿಸಲಾಗಿತ್ತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕಲಿಯಂಡ ಡಾಲು ಕಾಳಪ್ಪ, ಬೊಟ್ಟೋಳಂಡ ಅಪ್ಪಣ್ಣ, ಬೊಟ್ಟೋಳಂಡ ಡಾಲು ಸೋಮಯ್ಯ, ಕಾಂಡAಡ ಸುಬ್ಬಯ್ಯ, ಕನ್ನಂಬೀರ ಬೆಳ್ಯಪ್ಪ, ಕುಂಬಾರರ ಶಂಕರ, ಉಪಸ್ಥಿತರಿದ್ದರು.
ಮೊದಲಿಗೆ ದುಡಿಕೊಟ್ಟು ಪಾಟಿನೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು. ರೇಖಾ ಪೊನ್ನಣ್ಣ ಪ್ರಾರ್ಥಿಸಿ ಕಾಂಡAಡ ಪೊನ್ನಣ್ಣ, ರೇಖಾಪೊನ್ನಣ್ಣ ನಿರೂಪಿಸಿ ಕೆಟೋಳಿರ ಹರೀಶ್ ಪೂವಯ್ಯ ಸ್ವಾಗತಿಸಿದರು. ಕನ್ನಂಬೀರ ಸುಧಿ ತಿಮ್ಮಯ್ಯ ವಂದಿಸಿದರು. ಸಭಾ ಕಾರ್ಯಕ್ರಮದ ನಡುವೆ ನಡೆದ ಉಮ್ಮತ್ತಾಟ್, ಉರುಟ್ಟಿಕೊಟ್ ಆಟ್ ಸಭಿಕರನ್ನು ರಂಜಿಸಿತು. ಕಾರ್ಯಕ್ರಮದ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿ ಶುಭ ಕೋರಿದರು. ಊಟೋಪಚಾರದ ನಂತರ ಅಪರಾಹ್ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.