ಕುಶಾಲನಗರ, ಮೇ. ೩೦: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಪ್ರವಾಹ ತಡೆಗಟ್ಟುವ ಹಿನ್ನೆಲೆಯಲ್ಲಿ ಕಾವೇರಿ ನದಿ ನಿರ್ವಹಣೆಯ ಮೂರನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ.
ಜಿಲ್ಲಾಧಿಕಾರಿಗಳ ಮೂಲಕ ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ರೂ. ೫೦ ಲಕ್ಷ ವೆಚ್ಚದಲ್ಲಿ ನದಿಯ ನಿರ್ವಹಣೆ ಕಾಮಗಾರಿಗೆ ಇತ್ತೀಚೆಗೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ಮಾದಾಪಟ್ಟಣ ಗ್ರಾಮ ವ್ಯಾಪ್ತಿಯ ಕಾವೇರಿ ನಿಸರ್ಗಧಾಮ ಬಳಿಯಿಂದ ಬೈಚನ ಹಳ್ಳಿ ತನಕ ಮೂರು ಹಂತದಲ್ಲಿ ಕಾಮಗಾರಿ ಕಳೆದ ಕೆಲದಿನಗಳಿಂದ ನಡೆಯುತ್ತಿದೆ.
ನಿಸರ್ಗಧಾಮ ಬಳಿಯಿಂದ ಮಾದಾಪಟ್ಟಣ ನಂತರ ಗಂಧದ ಕೋಟೆ ತದನಂತರ ಬೈಚನಹಳ್ಳಿ ತನಕ ನದಿ ನಿರ್ವಹಣೆ ಕಾಮಗಾರಿ ಭರದಿಂದ ಸಾಗುತ್ತಿದೆ. ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಮಹೇಂದ್ರ ಕುಮಾರ್, ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣ ಹಿನ್ನೆಲೆಯಲ್ಲಿ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸು ವುದು, ನದಿ ನಡುವೆ ತುಂಬಿರುವ ಹೂಳನ್ನು ತೆರವುಗೊಳಿಸುವ ಕೆಲಸವೂ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸತತವಾಗಿ ಕುಶಾಲನಗರ ಮತ್ತು ಮಾದಾಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಕ್ಷೇತ್ರದ ಶಾಸಕರಾದ ಎಂ ಪಿ ಅಪ್ಪಚ್ಚುರಂಜನ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕಾರಣ ತಕ್ಷಣ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ ಪರಿಣಾಮ ಈ ಕಾಮಗಾರಿ ನಡೆದಿದೆ.
ಮಾದಾಪಟ್ಟಣ ವ್ಯಾಪ್ತಿಯಲ್ಲಿ ಸುಮಾರು ಒಂದು ಕಿಲೋಮೀಟರ್ ದೂರದ ತನಕ ನದಿ ನಡುವೆ ಕಳೆದ ಹಲವು ವರ್ಷಗಳಿಂದ ಭಾರಿ ಗಾತ್ರದ ಗಿಡಗಂಟೆಗಳು ಬೆಳೆದು ನಿಂತಿದ್ದು ಮಳೆಗಾಲ ಸಂದರ್ಭ ನೀರು ನದಿಯಿಂದ ಉಕ್ಕಿ ಅಪಾಯದ ಮಟ್ಟ ಮೀರಿ ಸಮೀಪದ ರಾಷ್ಟಿçÃಯ ಹೆದ್ದಾರಿ ಮೇಲೆ ಹರಿಯುವ ಕಾರಣ ದಿಂದ ನದಿ ತಟದ ಮನೆ ಕಟ್ಟಡಗಳು ಮುಳುಗುವುದರೊಂದಿಗೆ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.
ಶಾಸಕರ ನೇತೃತ್ವದಲ್ಲಿ ಕಳೆದ ೩ ವರ್ಷಗಳ ಅವಧಿಯಲ್ಲಿ ಕುಶಾಲನಗರದ ಬೈಚನಹಳ್ಳಿ, ಕುಶಾಲನಗರ- ಕೊಪ್ಪ ಸೇತುವೆ ಕೆಳಭಾಗ ಮತ್ತು ವ್ಯಾಪ್ತಿಯಲ್ಲಿ ನದಿಯ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕಳೆದ ಬಾರಿ ಪ್ರವಾಹದಿಂದ ತತ್ತರಿಸಿರುವ ಹಲವು ಬಡಾವಣೆ ಮತ್ತು ಗ್ರಾಮಗಳ ಜನರು ನಿಟ್ಟುಸಿರು ಬಿಡುವಂತಾಗಿತ್ತು.
ಇದರೊAದಿಗೆ ಕುಶಾಲನಗರ ಪಟ್ಟಣದ ಶೈಲಜಾ ಬಡಾವಣೆ ನಿವಾಸಿಗಳು ಶಾಸಕರಲ್ಲಿ ಮನವಿ ಮಾಡಿದ ಹಿನ್ನೆಲೆ ಶಾಸಕರ ೫ ಲಕ್ಷ ರೂ. ಅನುದಾನದಿಂದ ನದಿ ತಟದಲ್ಲಿ ಕುಶಾಲನಗರ ಆರ್ ಎಂ ಸಿ ಹತ್ತಿರ ಬಂಡು ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ.
ಒಟ್ಟಾರೆ ಈ ಮಳೆಗಾಲದಲ್ಲಿ ಪ್ರವಾಹದ ಭೀತಿ ತಪ್ಪಿಸುವ ನಿಟ್ಟಿನಲ್ಲಿ ನದಿ ನಿರ್ವಹಣೆ ಕಾಮಗಾರಿ ಭರದಿಂದ ಸಾಗುತ್ತಿದ್ದು ಜನತೆ ಬಹುತೇಕ ಆತಂಕದಿAದ ಹೊರ ಬರುವಂತಾಗಿದೆ ಎನ್ನಬಹುದು.
-ಚಂದ್ರಮೋಹನ್