ಮಡಿಕೇರಿ, ಮೇ ೨೭: ಗೋಣಿಕೊಪ್ಪದಲ್ಲಿ ಇದೀಗ ನಿರ್ಮಾಣಗೊಳ್ಳುತ್ತಿರುವ ಕೊಡವ ಸಮಾಜದ ನೂತನ ಆಡಳಿತ ಮಂಡಳಿಯನ್ನು ಇತ್ತೀಚೆಗೆ ನಡೆದ ಸಂಸ್ಥೆಯ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಸಂಸ್ಥೆಯ ಮುಂದಿನ ಸಾಲಿನ ಅಧ್ಯಕ್ಷರನ್ನಾಗಿ ಪಾಲಿಬೆಟ್ಟದ ಅಜ್ಜಿಕುಟ್ಟೀರ ಸಿ. ಪೂಣಚ್ಚ ಶಾಂತು ಅವರನ್ನು ನೇಮಕಮಾಡಲಾಗಿದ್ದು, ಕಾನೂರಿನ ಚೆಪ್ಪುಡೀರ ಪ್ರಥ್ವಿ ಪೂಣಚ್ಚರವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಚೊಟ್ಟೆಯಂಡಮಾಡ ಡಿ. ಮಾದಪ್ಪ, ಗೌರವ ಕಾರ್ಯದರ್ಶಿಯಾಗಿ ಪುನಾರಾಯ್ಕೆಗೊಂಡಿದ್ದು, ಬಾಳಾಜಿ ಗ್ರಾಮದ ಬಲ್ಲಣಮಾಡ ರೀಟಾ ದೇಚಮ್ಮ, ಜಂಟಿ ಗೌರವ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.

ಹಾತೂರು ಗ್ರಾಮದ ಕೊಕ್ಕಂಡ ಕುಶ ಬಿದ್ದಪ್ಪರವರು ಖಜಾಂಚಿಯಾಗಿ ಆಯ್ಕೆಯಾಗಿದ್ದು, ಮಹಿಳಾ ನಿರ್ದೇಶಕರನ್ನಾಗಿ ಚಿರಿಯಪಂಡ ಇಮ್ಮಿ ಉತ್ತಪ್ಪ, ಬಿದ್ದಂಡ ಪ್ರೇಮಗಣಪತಿ ಹಾಗೂ ಕೊಣಿಯಂಡ ಬೋಜಮ್ಮ ಉತ್ತಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಸಾಮಾನ್ಯ ನಿರ್ದೇಶಕರ ಸ್ಥಾನಕ್ಕೆ ಕಂಜಿತAಡ ಪೊನ್ನಪ್ಪ, ಕಟ್ಟೇರ ಎನ್. ಅಚ್ಚಪ್ಪ, ಕುಪ್ಪಂಡ ಗಿರಿಪೂವಣ್ಣ, ಚಿಲ್ಲವಂಡ ದರ್ಶನ್, ಪೊನ್ನಿಮಾಡ ಸುರೇಶ್ ಹಾಗೂ ಸಣ್ಣುವಂಡ ಯಂ. ವಿಶ್ವನಾಥ್ (ಆಂತರಿಕ ಲೆಕ್ಕ ಪರಿಶೋಧಕರು) ಹಾಗೂ ಜಮ್ಮಡ ಸಿ. ಮೋಹನ್ ಅವರುಗಳನ್ನು ಆಯ್ಕೆ ಮಾಡಲಾಗಿದೆ. ಸಂಸ್ಥೆಯ ಸ್ಥಾಪನೆಗೆ ಮೂಲ ಕಾರಣಕರ್ತರಾದ ಪೂಮಾಲೆ ಬೊಳಚೆ ಕೂಟದ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರನ್ನು ಖಾಯಂ ಆಹ್ವಾನಿತರನ್ನಾಗಿ ಮುಂದುವರಿಸಲಾಗಿದೆ.

ಗೋಣಿಕೊಪ್ಪ ಪಕ್ಕದ ಕೈಕೇರಿ ಗ್ರಾಮದಲ್ಲಿ ಒಟ್ಟು ಐದು ಎಕರೆ ವಿಸ್ತಾರವಾದ ಜಾಗದಲ್ಲಿ ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕಟ್ಟಡಕ್ಕೆ ಕೊಡವಾಭಿಮಾನಿ ಧಾನಿಗಳು ಸಹಾಯ ನೀಡುವಂತೆ ಆಡಳಿತ ಮಂಡಳಿಯವರು ಮತ್ತು ಸಂಸ್ಥೆಯ ಸದಸ್ಯತ್ವವನ್ನು ಪಡೆದುಕೊಂಡು ಸಹಕರಿಸುವಂತೆ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.