*ಗೋಣಿಕೊಪ್ಪ, ಮೇ ೨೭: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಅಧೀನದ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚೊಚ್ಚಲ ಪದಗ್ರಹಣ ಕಾರ್ಯಕ್ರಮ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಅಧ್ಯಕ್ಷತೆಯಲ್ಲಿ ಕಕೂನ್ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು. ಅಧ್ಯಕ್ಷರಾಗಿ ಸಣ್ಣುವಂಡ ಕಿಶೋರ್ ನಾಚಪ್ಪ, ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ. ವಿ. ಅರುಣ್, ನಿರ್ದೇಶಕರಾದ ಜಗದೀಶ್ ಜೋಡುಬೀಟಿ, ಚಿಮ್ಮಣಮಾಡ ದರ್ಶನ್ ದೇವಯ್ಯ, ಎಚ್.ಆರ್. ಸತೀಶ್, ಎಂ. ಎಂ. ಚನ್ನನಾಯಕ, ಸದಸ್ಯರಾದ ಕುಪ್ಪಂಡ ದತ್ತಾತ್ರಿ, ಅಣ್ಣೀರ ಹರೀಶ್ ಮಾದಪ್ಪ, ಎಚ್.ಕೆ. ಜಗದೀಶ್, ಡಿ. ನಾಗೇಶ್, ರೇಖಾ ಗಣೇಶ್ ಹಾಗೂ ಮನೋಜ್ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.
ಜಿಲ್ಲಾಧ್ಯಕ್ಷೆ ಬಿ. ಆರ್. ಸವಿತಾ ರೈ ಸದÀಸ್ಯರಿಗೆ ಪ್ರಮಾಣ ಪತ್ರ ಹಸ್ತಾಂತರ ಮಾಡಿ ಶುಭ ಕೋರಿದರು. ಸಂಘ ಚಟುವಟಿಕೆಗೆ ಮತ್ತಷ್ಟು ಒತ್ತು ನೀಡುವಂತೆ ಮನವಿ ಮಾಡಿಕೊಂಡರು.
ಪೊನ್ನAಪೇಟೆ ವಕೀಲ ಸಂಘದ ಅಧ್ಯಕ್ಷ ಕಳಕಂಡ ಡಿ. ಮುತ್ತಪ್ಪ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿ ರುವವರು ದೇಶದ ಹೆಮ್ಮೆ. ವೃತ್ತಿ ನಿಭಾಯಿಸಲು ದೈರ್ಯ, ಸಾಹಸ ಬೇಕು. ಸಮಾಜಮುಖಿಯಾಗಿ ನಿರ್ಭೀತಿಯಾಗಿ ಸುದ್ದಿ ಮಾಡುವ ಪ್ರಾಮಾಣಿಕ ಪತ್ರಕರ್ತನನ್ನು ವ್ಯಾಜ್ಯಕ್ಕೆ ತಂದು ಕಟ್ಟಿ ಹಾಕುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘದ ಒಂದು ವರ್ಷದ ಕಾರ್ಯಕ್ರಮಗಳಾದ ಪಂಚ ಕಾರ್ಯಕ್ರಮವನ್ನು ಬಿಜೆಪಿ ಕೃಷಿ ಮೋರ್ಚ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ ಬಿಡುಗಡೆಗೊಳಿಸಿದರು. ಪಂಚ ಕಾರ್ಯಕ್ರಮಗಳಾದ ಸದಸ್ಯರಿಗೆ ಸವಲತ್ತು ಯೋಜನೆ, ಕ್ರೀಡಾಕೂಟ, ಅಧ್ಯಯನ ಪ್ರವಾಸ, ಆರೋಗ್ಯ, ಕಾನೂನು ಅರಿವು, ತರಬೇತಿ ಕಾರ್ಯಾಗಾರ, ಸಂಘದ ಆರ್ಥಿಕ ಬಲವರ್ಧನೆಗಾಗಿ ನೆರವು ಕಾರ್ಯಕ್ರಮ, ಸಮಾಜದೊಂದಿಗಿನ ಸಹಭಾಗಿತ್ವಕ್ಕಾಗಿ ಜನ ಭೇಟಿ ಕಾರ್ಯಕ್ರಮವನ್ನು ಘೋಷಣೆ ಮಾಡಿದರು. ನಂತರ ಮಾತನಾಡಿ, ಮಾಧ್ಯಮದಿಂದ ಸಮಾಜಕ್ಕೆ ಆಗುತ್ತಿರುವ ಪರಯೋಜನೆಗಳ ಬಗ್ಗೆ ಗಮನ ಸೆಳೆದರು. ಸಾರ್ವಜನಿಕರ ಸಹಕಾರ ಮಾಧ್ಯಮಕ್ಕೆ ಅವಶ್ಯ ಎಂದರು. ರಾಜ್ಯ ಸಮಿತಿ ಸದಸ್ಯ ಟಿ.ಎನ್. ಮಂಜುನಾಥ್, ವೀರಾಜಪೇಟೆ ತಾಲೂಕು ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ, ಕುಶಾಲನಗರ ತಾಲೂಕು ಅಧ್ಯಕ್ಷ ಚಂದ್ರಮೋಹನ್ ಉಪಸ್ಥಿತರಿದ್ದರು.