ವಿನಾಯಕ ದಾಮೋದರ್ ಸಾವರ್ಕರ್ ಅವರು ೨೮ ಮೇ ೧೮೮೩ರಂದು ಮಹಾರಾಷ್ಟçದ ನಾಸಿಕ್ ಜಿಲ್ಲೆಯ ಭಗೂರ್ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ದಾಮೋದರ ಸಾವರ್ಕರ್ ಹಾಗೂ ತಾಯಿ ಯಶೋಧಾ ಸಾವರ್ಕರ್ ಈ ದಂಪತಿಗೆ ೪ ಜನ ಮಕ್ಕಳು.

ವಿನಾಯಕ ದಾಮೋದರ ಸಾವರ್ಕರ್ ಅವರು ೧೨ ವರುಷದ ಬಾಲಕನಿದ್ದಾಗ ಗುಂಪೊAದು ಸಾವರ್ಕರ್ ಅವರ ಗ್ರಾಮದ ಮೇಲೆ ದಾಳಿ ಮಾಡಿದಾಗ, ಸಾವರ್ಕರ್ ಅವರು ವಿದ್ಯಾರ್ಥಿಗಳನ್ನು ಸಂಘಟಿಸಿ ಆ ಗುಂಪನ್ನು ಎದುರಿಸಿದರು.

ಇವರು ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಬಿ.ಎ. ಪದವಿ ಪೂರೈಸಿದರು.

ಸಾವರ್ಕರ್ ಅವರು ಸ್ವಾತಂತ್ರö್ಯ ಹೋರಾಟದ ಸಂದರ್ಭದಲ್ಲಿ ಅಭಿನವ ಭಾರತ ಈಡಿee Iಟಿಜiಚಿ Soಛಿieಣಥಿಯನ್ನು ಸ್ಥಾಪಿಸಿದರು. ದೇಶದ ಸ್ವಾತಂತ್ರö್ಯಕ್ಕಾಗಿ ಕ್ರಾಂತಿಕಾರಿ ಹೋರಾಟ ನಡೆಸಿದರು. ಭಾರತ ಪ್ರಥಮ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಖಿhe Iಟಿಜiಚಿಟಿ Wಚಿಡಿ oಜಿ Iಟಿಜeಠಿeಟಿಜeಟಿಛಿe-೧೮೫೭ ಪುಸ್ತಕವನ್ನು ೧೯೦೯ರಲ್ಲಿ ಬರೆದರು. ಇದರಿಂದಾಗಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಈ ಪುಸ್ತಕ ಅಸಂಖ್ಯಾತ ಸ್ವಾತಂತ್ರö್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿತ್ತು. ಸಾವರ್ಕರ್‌ರವರ ಚಟುವಟಿಕೆಗಳಿಂದ ಕಂಗೆಟ್ಟ ಬ್ರಿಟಿಷರು ಸಾವರ್ಕರ್‌ರವರನ್ನು ೧೯೧೦ ಮಾರ್ಚ್ ೧೩ರಂದು ಬಂದಿಸಿದರು. ಒಟ್ಟು ೫೦ ವರ್ಷಗಳ ಕಾಲ ಎರಡು ಜೀವಾವಧಿ ಶಿಕ್ಷೆ ವಿಧಿಸಿ ಕ್ರೂರ ಶಿಕ್ಷೆಗೆ ಹೆಸರುವಾಸಿಯಾದ ಅಂಡಮಾನ್ ನಿಕೋಬಾರ್ ದ್ವೀಪದ ಸೆಲ್ಯುಲರ್ ಜೈಲಿನಲ್ಲಿ ಬಂಧಿಸಿಟ್ಟರು. ಭಾರತವು ಸ್ವಾತಂತ್ರö್ಯಗೊAಡ ನಂತರವೂ ಸ್ವಾತಂತ್ರö್ಯ ಹೋರಾಟಗಾರರೊಬ್ಬರನ್ನು ಜೈಲಿನಲ್ಲಿ ಬಂದಿಸಿ ಇಟ್ಟಿದ್ದು, ಭಾರತದ ಅಂದಿನ ಆಡಳಿತಾರೂಢ ಸರಕಾರದ ಧಮನಕಾರಿ ಧೋರಣೆಗೆ ಸಾಕ್ಷಿಯಾಯಿತು.

೧೯೬೬ರ ಫೆಬ್ರವರಿ ೨೬ರಂದು ಸಾವರ್ಕರ್ ತಮ್ಮ ೮೩ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು. ಸಾವರ್ಕರ್‌ರ ಕೆಚ್ಚೆದೆಯ ಹೋರಾಟ ಇಂದಿನ ಯುವ ಜನತೆಗೆ ಪ್ರೇರಣೆಯಾಗಿದೆ. ಸಾವರ್ಕರ್‌ರ ಜನ್ಮದಿನ ಮೇ ೨೮ರಂದು .ಅವರನ್ನು ಸ್ಮರಣೆ ಮಾಡಿ ಗೌರವಿಸಬೇಕಿರುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯವಾಗಿದೆ.

-ತೃಪ್ತ ಟಿ.ಕೆ., ೮ನೇ ತರಗತಿ, ಬಿ.ವಿ.ಬಿ.ಕೆ.ವಿ ಶಾಲೆ, ಮಡಿಕೇರಿ. ಮೊ.೮೯೦೪೮೨೭೨೪೭