ಸೋಮವಾರಪೇಟೆ, ಮೇ ೨೬: ಇಲ್ಲಿನ ಶ್ರೀಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಮುಖಮಂಟಪವÀನ್ನು ವಿವಿಧ ಧಾರ್ಮಿಕ ಕೈಂಕರ್ಯ ಗಳೊಂದಿಗೆ ದೇವರಿಗೆ ಸಮರ್ಪಿಸಲಾಯಿತು.
ಕೇರಳ ಕಾಳೇಘಾಟ್‌ನ ಬ್ರಹ್ಮಶ್ರೀ ನಾರಾಯಣನ್ ನಂಬೂದರಿ ಅವರ ನೇತೃತ್ವದಲ್ಲಿ ಮುಖಮಂಟಪಕ್ಕೆ ಕಳಶ ಪ್ರತಿಷ್ಠಾಪನೆ ನೆರವೇರಿಸಿದ ನಂತರ ರೇವತಿ ನಕ್ಷತ್ರದ ೨ನೇ ಪಾದದ ವೃಷಭರಾಶಿಯ ಶುಭ ಮುಹೂರ್ತ ದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಮರ್ಪಿಸಲಾಯಿತು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಿಂದೂ ಮಲಯಾಳಿ ಸಂಘದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಬೇಳೂರು ಗ್ರಾಪಂ ಅಧ್ಯಕ್ಷ ಬಿ.ಎಂ.ಪ್ರಶಾAತ್, ಉದ್ಯಮಿಗಳಾದ ಬಿ.ಎಸ್.ಶ್ರೀಧರ್, ಬಾಲಕೃಷ್ಣ ನಂಬಿಯಾರ್, ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್, ಪದಾಧಿಕಾರಿಗಳು ಮತ್ತು ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ, ಮುತ್ತಪ್ಪಸ್ವಾಮಿ ದೇವಾಲಯದ ಮಡೆಯನ್ ಸುಧೀಶ್ ಮತ್ತಿತರರು ಉಪಸ್ಥಿತರಿದ್ದರು.
ಗಣಪತಿ ಹೋಮದೊಂದಿಗೆ ಪೂಜಾ ಕೈಂಕರ್ಯಗಳು ಆರಂಭವಾಯಿತು. ಭುವನೇಶ್ವರಿ ದೇವಿ, ಶ್ರೀ ಅಯ್ಯಪ್ಪಸ್ವಾಮಿ, ಗಣಪತಿ, ನಾಗದೇವರುಗಳಿಗೆ ಅಷ್ಟಬಂಧ ಕಲಶಾಭಿಷೇಕವನ್ನು ನೆರವೇರಿಸ ಲಾಯಿತು. ನಂತರ ಭಕ್ತಾದಿಗಳಿಗೆ ಪೂಜಾ ಪ್ರಸಾದೊಂದಿಗೆ ಅನ್ನಪ್ರಸಾದವನ್ನು ವಿತರಿಸಲಾಯಿತು.
ಇಂದು ಬ್ರಹ್ಮಕಲಶೋತ್ಸವ: ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಬ್ರಹ್ಮಕಳಶೋತ್ಸವ ಕಾರ್ಯಕ್ರಮವು ತಾ.೨೭ರಂದು (ಇಂದು) ಜರುಗಲಿದೆ.
ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀತಿರುವಪ್ಪ, ಶ್ರೀವಿಷ್ಣುಮೂರ್ತಿ ಮತ್ತು ಪರಿವಾರ ದೇವರುಗಳಿಗೆ ಅಷ್ಪಬಂಧ ಕಳಶಾಭಿಷೇಕ ನಡೆಯಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನದಾನ ನೆರವೇರಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್ ತಿಳಿಸಿದ್ದಾರೆ.