\*ಗೋಣಿಕೊಪ್ಪ, ಮೇ ೨೬: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ, ವಾರ್ಷಿಕ ಪ್ರಶಸ್ತಿ ಪ್ರದಾನ ಸನ್ಮಾನ ಮತ್ತು ವಿಭಜಿತ ಪೊನ್ನಂಪೇಟೆ ತಾಲೂಕಿನ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಬುಧವಾರ ತಾಲೂಕು ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಅಧ್ಯಕ್ಷತೆಯಲ್ಲಿ ಕುಕೂನ್ ಸಭಾಂಗಣದಲ್ಲಿ ನಡೆಯಿತು.

ಪ್ರಶಸ್ತಿ ಪ್ರದಾನ

ಅತ್ಯುತ್ತಮ ಪರಿಸರ ಕುರಿತ ವರದಿ ಪ್ರಶಸ್ತಿಯನ್ನು ವಿಜಯ ಕರ್ನಾಟಕ ವರದಿಗಾರ ಕೆ. ಬಿ. ಜಗದೀಶ್ ಜೋಡುಬೀಟಿ, ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ ಶಕ್ತಿ ವರದಿಗಾರ ಕಿಶೋರ್ ಶೆಟ್ಟಿ, ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯ ಎಚ್. ಕೆ. ಜಗದೀಶ್, ಕ್ರೀಡಾ ವರದಿ ಪ್ರಶಸ್ತಿಯನ್ನು ಮೈಸೂರು ಮಿತ್ರ ವರದಿಗಾರ ಚಿಮ್ಮಣಮಾಡ ದರ್ಶನ್ ದೇವಯ್ಯ, ಕನ್ನಡಪ್ರಭ ವರದಿಗಾರ ಆರ್. ಸುಬ್ರಮಣಿ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ, ಉಪಾಧ್ಯಕ್ಷ ಎಚ್. ಕೆ. ಜಗದೀಶ್, ಪಳೆಯಂಡ ಪಾರ್ಥ ಚಿಣ್ಣಪ್ಪ, ಪ್ರ. ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಕಾರ್ಯದರ್ಶಿ ಎ. ಎನ್. ವಾಸು, ರಾಜ್ಯ ಸಮಿತಿ ಸದಸ್ಯ ಟಿ. ಎನ್. ಮಂಜುನಾಥ್, ರಾಷ್ಟಿçÃಯ ಸಮಿತಿ ಸದಸ್ಯ ಎಚ್. ಜೆ. ರಾಕೇಶ್, ಡಿ. ನಾಗೇಶ್, ರೇಖಾ ಗಣೇಶ್ ಹಾಗೂ ಕೋಲತಂಡ ರಘು ಮಾಚಯ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಬೀಳ್ಕೊಡುಗೆ

ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ. ವಿ. ಅರುಣ್, ನಿರ್ದೇಶಕರಾದ ಜಗದೀಶ್ ಜೋಡುಬೀಟಿ, ಚಿಮ್ಮಣಮಾಡ ದರ್ಶನ್ ದೇವಯ್ಯ, ಎಚ್. ಆರ್. ಸತೀಶ್, ಎಂ. ಎಂ. ಚನ್ನನಾಯಕ, ಸದಸ್ಯರಾದ ಕುಪ್ಪಂಡ ದತ್ತಾತ್ರಿ, ಅಣ್ಣೀರ ಹರೀಶ್ ಮಾದಪ್ಪ, ಎಚ್. ಕೆ. ಜಗದೀಶ್, ಡಿ. ನಾಗೇಶ್, ರೇಖಾ ಗಣೇಶ್ ಹಾಗೂ ಮನೋಜ್‌ಕುಮಾರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಬೀಳ್ಕೊಡುಗೆ ನೀಡಲಾಯಿತು.

ಮಹಾಸಭೆಯಲ್ಲಿ ಪ್ರ. ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ವಿ. ವಿ. ಅರುಣ್‌ಕುಮಾರ್ ಲೆಕ್ಕಪತ್ರ ಮಂಡಿಸಿದರು. ವೀರಾಜಪೇಟೆ ತಾಲೂಕು ಸಂಘದಲ್ಲಿನ ಗ್ರಾಮೀಣ, ಪರಿಸರ ಮತ್ತು ಕ್ರೀಡಾ ವರದಿ ದತ್ತಿನಿಧಿಯನ್ನು ಪೊನ್ನಂಪೇಟೆ ತಾಲೂಕು ಸಂಘಕ್ಕೆ ವರ್ಗಾಯಿಸುವಂತೆ ನಿರ್ಧರಿಸಲಾಯಿತು. ಗೋಣಿಕೊಪ್ಪ ದಲ್ಲಿರುವ ವೀರಾಜಪೇಟೆ ತಾಲೂಕು ಸಂಘದ ಕಚೇರಿ ಕಟ್ಟಡವನ್ನು ಪೊನ್ನಂಪೇಟೆ ತಾಲೂಕು ಸಂಘಕ್ಕೆ ನೀಡಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

ಅತಿಥಿಯಾಗಿ ಬಿಜೆಪಿ ಮುಖಂಡ ತೇಲಪಂಡ ಶಿವಕುಮಾರ್ ನಾಣಯ್ಯ ಪಾಲ್ಗೊಂಡು ಮಾತನಾಡಿ, ದೇಶಕ್ಕೆ ಮಾಧ್ಯಮದ ಕೊಡುಗೆ ಅಪಾರ. ತೆರೆ ಮರೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಧ್ಯಮದಿಂದ ಹೆಚ್ಚಾಗಬೇಕಿದೆ. ಹೊಸ ಪತ್ರಿಕೆಗಳ ಹುಟ್ಟು ಮುಖ್ಯ ಎಂದರು.

ಹಾಕಿ ಒಲಿಂಪಿಯನ್, ನಿವೃತ್ತ ಸೇನಾಧಿಕಾರಿ ಲೆ. ಕ. ಬಾಳೆಯಡ ಕೆ ಸುಬ್ರಮಣಿ ಮಾತನಾಡಿ, ನನ್ನ ಸಾಧನೆಯ ಹಿಂದೆ ಮಾಧ್ಯಮದ ಕೊಡುಗೆ ಸಾಕಷ್ಟಿದೆ. ಪತ್ರಿಕೆಗಳು ಹಿಂದಿನಿAದಲೇ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುತ್ತಾ ಬಂದಿವೆ. ದೇಶದ ಬೆನ್ನೆಲುಬಾಗಿ ಮಾಧ್ಯಮ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಪೊನ್ನAಪೇಟೆ ಜೆಸಿಐ ಗೋಲ್ಡನ್ ಅಧ್ಯಕ್ಷ ಚೆಪ್ಪುಡೀರ ಬೋಪಣ್ಣ, ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾಧ್ಯಕ್ಷೆ ಬಿ. ಆರ್. ಸವಿತಾ ರೈ, ರಾಜ್ಯ ಸಮಿತಿ ಸದಸ್ಯ ಮಂಜುನಾಥ್, ಪ್ರ. ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ತಾಲೂಕು ಉಪಾಧ್ಯಕ್ಷ ಆರ್. ಸುಬ್ರಮಣಿ, ವೀಕ್ಷಕ ಮಂಜು ಇದ್ದರು.