ಮಡಿಕೇರಿ, ಮೇ ೨೪: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಂಗಮAದಿರ ಕಾಯ್ದಿರಿಸುವಿಕೆ ಮತ್ತು ದತ್ತಾಂಶ ಸಂಗ್ರಹ ನೋಂದಣಿಯನ್ನು ಮಾರ್ಚ್ ೩೧ ರಂದು ಲೋಕಾರ್ಪಣೆಗೊಳಿಸಿದೆ.
ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಯಡಿ ಕೊಡವ ಸಾಹಿತಿ/ ಕಲಾವಿದರುಗಳು ಸೇವಾಸಿಂಧು ಪೋರ್ಟಲ್ sevಚಿsiಟಿಜhu. ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ತಮ್ಮ ಮಾಹಿತಿಯನ್ನು ತಾ. ೩೦ ರೊಳಗೆ ನೋಂದಾಯಿಸಿಕೊಳ್ಳ ಬಹುದಾಗಿದೆ. ನಿಗದಿತ ಅರ್ಜಿಯನ್ನು ಆನ್‌ಲೈನ್‌ನಲ್ಲೇ ಭರ್ತಿ ಮಾಡಬೇಕು. ಸಾಹಿತಿಗಳು ಅರ್ಜಿ ಸಲ್ಲಿಸಲು ಕನಿಷ್ಟ ೮ ವರ್ಷಗಳು, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರಬೇಕು. ಕಲಾವಿದರು ಅರ್ಜಿ ಸಲ್ಲಿಸಲು ಕನಿಷ್ಟ ೫ ವರ್ಷಗಳ ಕಲಾ ಸೇವೆ ಸಲ್ಲಿಸಿರಬೇಕು. ಸಾಹಿತಿಗಳು ಕನಿಷ್ಟ ಒಂದು ಪುಸ್ತಕ ಪ್ರಕಟಿಸಿರಬೇಕು. ಅರ್ಜಿಯಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ವಿವರ ಸ್ಪಷ್ಟವಾಗಿ ನಮೂದಿಸಬೇಕು. ಈ ನೋಂದಣಿಯನ್ನು ಸಮೀಪದ ಸೇವಾ ಸಿಂಧು ಸೇವಾ ಕೇಂದ್ರ ಮೂಲಕ ಮಾಡಬಹುದಾಗಿದೆ.
ಆದ್ದರಿಂದ ಕೊಡವ ಸಾಹಿತಿ ಕಲಾವಿದರುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ದತ್ತಾಂಶ ಸಂಗ್ರಹ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. ಪೂರಕ ದಾಖಲೆಗಳಾದ ಪ್ಯಾನ್, ಆಧಾರ್, ಬ್ಯಾಂಕ್ ವಿವರಗಳು, ಪ್ರಮಾಣಪತ್ರಗಳು, ಛಾಯಾಚಿತ್ರಗಳು, ವೀಡಿಯೋ ಕೊಂಡಿಗಳು ನೋಂದಾವಣೆ ಸಂದರ್ಭದಲ್ಲಿ ಅಗತ್ಯವಾಗಿ ಲಭ್ಯವಿರತಕ್ಕದ್ದು,. ಈ ಬಗ್ಗೆ ತಮ್ಮ ಸಂಪರ್ಕದಲ್ಲಿರುವ ಸಾಹಿತಿ/ ಕಲಾವಿದರಿಗೂ ಮಾಹಿತಿ ನೀಡಿ ಹೆಚ್ಚು ಮಂದಿ ಇದರ ಪ್ರಯೋಜನ ಪಡೆಯಲು ಸಹಕರಿಸಬೇಕಾಗಿ ಕೋರಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಥವಾ ಅಕಾಡೆಮಿ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಅರ್ಹತೆ: ಅನ್ವಯವಾಗುವುದಿಲ್ಲ, ಅರ್ಜಿ ಶುಲ್ಕ ಇಲ್ಲ, ಸೇವಾ ಶುಲ್ಕ (ಆನ್ ಲೈನ್ ಅರ್ಜಿ ಸಲ್ಲಿಕೆಗೆ ಸೇವಾ ಶುಲ್ಕವಿಲ್ಲ) ಇಲ್ಲ, ವಿತರಣಾ ಸಮಯ (ದಿನಗಳು) ೩೦ ಕೆಲಸ ದಿನಗಳು.
ಹೆಚ್ಚಿನ ಮಾಹಿತಿಗೆ ಅಕಾಡೆಮಿಯ ದೂರವಾಣಿ ಸಂಖ್ಯೆ ೦೮೨೭೨-೨೨೯೦೭೪ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ಗಿರೀಶ್ ತಿಳಿಸಿದ್ದಾರೆ.