ಕೂಡಿಗೆ, ಮೇ ೨೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪಟ್ಟಣ ಪಂಚಾಯಿತಿಯ ಕಸ ಸಂಗ್ರಹದ ಘಟಕದಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಕಸವನ್ನು ವಿಂಗಡಣೆ ಮಾಡಲಾಗದೆ ಒಂದೇ ಜಾಗದಲ್ಲಿ ಸುರಿಯಲಾಗಿತ್ತು. ಇದೀಗ ಜೆ ಸಿ ಬಿ ಯಂತ್ರದ ಮೂಲಕ ಕಸವನ್ನು ಕಸ ವಿಲೇವಾರಿ ಘಟಕದ ಬೃಹತ್ ಗುಂಡಿಗೆ ಹಾಕುವ ಮೂಲಕ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಲಾಗುತ್ತಿದೆ.
ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಕಸವನ್ನು ವಿಂಗಡಣೆ ಮಾಡಲು ಸಾಧ್ಯವಾಗದೆ ಬಾರಿ ಕಷ್ಟವಾಗಿತ್ತು. ಇದೀಗ ಕಸ ವಿಲೇವಾರಿ ಘಟಕದಲ್ಲಿ ಕಸವನ್ನು ಬೇರ್ಪಡಿಸುವುದರ ಮೂಲಕ ಸಾವಯುವ ಘಟಕಕ್ಕೆ ಹಾಕಲು ಅನುಕೂಲವಾಗುತ್ತಿದೆ.
ಈ ಸಂದರ್ಭದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜರ್ಯವರ್ಧನ್, ಆರೋಗ್ಯ ಅಧಿಕಾರಿ ಉದಯಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.