ಪೊನ್ನAಪೇಟೆ, ಮೇ.೨೪: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.) ವತಿಯಿಂದ ದಿವಂಗತ ಕುವೆಂಡ ಆಯಿಷಾ ಹಜ್ಜುಮ್ಮ ಅವರ ಅನುಸ್ಮರಣೆ ಮತ್ತು ವಿಶೇಷ ದುಹಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೀರಾಜಪೇಟೆ ಸಮೀಪದ ಪೆರುಂಬಾಡಿಯ ಸಂಶುಲ್ ಉಲಮಾ ಬನಾತ್ ಯತೀಂಖಾನ(ಅನಾಥ ಮತ್ತು ಬಡ ಮಕ್ಕಳ ವಿದ್ಯಾಸಂಸ್ಥೆ) ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ಭಾನುವಾರ ನಿಧನರಾದ ಕೆ.ಎಂ.ಎ. ಸ್ಥಾಪಕಾಧ್ಯಕ್ಷ ಕುವೆಂಡ ವೈ. ಹಂಝತುಲ್ಲಾ ಅವರ ಪತ್ನಿ ದಿ. ಆಯಿಷಾ ಹಜ್ಜುಮ್ಮ ಅವರಿಗಾಗಿ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.) ವತಿಯಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಮಗ್ರಿಬ್ ನಮಾಝಿನ ಮುಂಚಿತವಾಗಿ ನಡೆದ ಕಾರ್ಯಕ್ರಮದಲ್ಲಿ ಯತೀಂಖಾನದ ವಿದ್ಯಾರ್ಥಿಗಳಿಂದ ನಡೆದ ಭಕ್ತಿ ನಿರ್ಭರವಾದ ದುಹಾ ಸಂಗಮದಲ್ಲಿ ಆಯಿಷಾ ಹಜ್ಜುಮ್ಮ ಅವರಿಗಾಗಿ ವಿಶೇಷವಾಗಿ ಪ್ರಾರ್ಥಿಸಲಾಯಿತು.
ಇದಕ್ಕೂ ಮೊದಲು ಕೆ.ಎಂ.ಎ. ಅಧ್ಯಕ್ಷ ಜ. ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅನುಸ್ಮರಣೆ ಕಾರ್ಯಕ್ರಮದಲ್ಲಿ ದಿ. ಆಯಿಷಾ ಹಜ್ಜುಮ್ಮ ಅವರನ್ನು ಅನುಸ್ಮರಿಸಲಾಯಿತು. ಅವರ ಸೇವಾ ಮನೋಭಾವನೆ, ಸಂಸ್ಥೆಯೊAದಿಗಿನ ಬಹುಕಾಲದ ಒಡನಾಟ, ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಅವರ ಪತಿಯವರಿಗೆ ನೀಡಿದ ಸಹಕಾರ ಸದಾ ಸ್ಮರಣೀಯ ಎಂದು ಸೂಫಿ ಹಾಜಿ ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯ ಧಾರ್ಮಿಕ ವಿದ್ವಾಂಸರು ಮತ್ತು ಸಂಸ್ಥೆಯ ಹಿರಿಯ ಸಲಹೆಗಾರರಾದ ಪಾಯಡತಂಡ ಹುಸೈನ್ ಅಲ್ ಖಾಸಿಮಿ ಉಸ್ತಾದ್ ಅವರು, ಮಿತಭಾಷಿಯಾಗಿದ್ದ ಸ್ನೇಹಜೀವಿ ಆಯಿಷಾ ಹಜ್ಜುಮ್ಮ ಅವರ ಅತಿಥಿ ಸತ್ಕಾರದ ಕುರಿತು ಅನುಸ್ಮರಿಸಿದರಲ್ಲದೆ ಕೊನೆಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ಕೆ.ಎಂ.ಎ. ಸ್ಥಾಪಕ ಅಧ್ಯಕ್ಷ ಕುವೆಂಡ ವೈ. ಹಂಝತುಲ್ಲಾ, ಪದಾಧಿಕಾರಿಗಳಾದ ಪೇನತೋಡ್ ಅಬ್ದುಲ್ ರಹಿಮಾನ್, ಚಿಮ್ಮಿಚೀರ ಇಬ್ರಾಹಿಂ (ಉಮ್ಮಣಿ) ಕುವೆಂಡ ವೈ. ಆಲಿ, ಪುದಿಯತಂಡ ಸಂಶುದ್ದೀನ್, ಮೀತಲತಂಡ ಎಂ. ಇಸ್ಮಾಯಿಲ್, ಪುದಿಯಾಣರ ಹನೀಫ್, ಮಂಡೆAಡ ಎ. ಮೊಯ್ದು, ಈತಲತಂಡ ರಫೀಕ್ ತೂಚಮಕೇರಿ, ಶಂಸುಲ್ ಉಲಮಾ ವಿದ್ಯಾಸಂಸ್ಥೆಯ ವಿದ್ವಾಂಸರಾದ ಇಸ್ಮಾಯಿಲ್ ಮುಸ್ಲಿಯಾರ್, ಗುಂಡಿಕೆರೆಯ ಅಹಮದ್ ಮದನಿ, ಇಸ್ಮಾಯಿಲ್ ಮುಸ್ಲಿಯರ್, ಹಂಝತುಲ್ಲಾ ಅವರ ಪುತ್ರ ಕೆ. ಎಚ್. ಹಬೀಬುಲ್ಲಾ, ಸಂಸ್ಥೆಯ ಹಿತೈಷಿಗಳಾದ ದುದ್ದಿಯಂಡ ಎಚ್. ಮೊಯ್ದು ಹಾಜಿ, ಸಿ.ಎ.ರಫೀಕ್, ದುದ್ದಿಯಂಡ ಮಾಶೂಖ್ ಸೂಫಿ, ಅಕ್ಕಳತಂಡ ಝಿಯಾ ಶಫೀಕ್, ಸಿ. ಎಚ್. ಆಶಿಫ್, ಖಲೀಲ್ ಮೊದಲಾದವರು ಪಾಲ್ಗೊಂಡಿದ್ದರು. ಆರಂಭದಲ್ಲಿ ಸಂಶುಲ್ ಉಲಮಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಸಿಪಿಎಂ ಬಶೀರ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಜ. ದುದ್ದಿಯಂಡ ಹೆಚ್. ಸೂಫಿ ಹಾಜಿ ಮತ್ತು ಎನ್.ಸಿ.ಟಿ. ಮಾಲೀಕರಾದ ಮುಂಬೈನ ಉದ್ಯಮಿ ಅಕ್ಕಳತಂಡ ಎಸ್. ಮೊಯ್ದು ಅವರು ಈ ಕಾರ್ಯಕ್ರಮವನ್ನು ಆಯಿಶಾ ಹಜ್ಜುಮ್ಮ ಅವರ ಗೌರವಾರ್ಥ ಪ್ರಾಯೋಜಿಸಿದ್ದರು.