ಮಡಿಕೇರಿ, ಮೇ ೨೩: ಮಳೆಗಾಲದ ಪ್ರಸಿದ್ಧ ತಿಂಡಿಯಾಗಿ ರುವ ಹಲಸನ್ನು ಅರಸುತ್ತಾ ಕಾಡಾನೆಗಳು ತೋಟಗಳಲ್ಲೇ ಮೊಕ್ಕಾಂ ಹೂಡಿದ್ದು, ಸುಂಟಿಕೊಪ್ಪ ವ್ಯಾಪ್ತಿಯ ಅತ್ತೂರು-ನಲ್ಲೂರು ಸಮೀಪದ ತೋಟಗಳನ್ನು ಕಾಡಾನೆಗಳು ತಮ್ಮ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ. ಆಹಾರ ಅರಸುತ್ತಾ ಅತ್ತಿಂದಿತ್ತ ಸಾಗುವಾಗ ಆನೆಗಳು ತೋಟದ ಬಹುತೇಕ ಕಾಫಿ ಗಿಡಗಳನ್ನು ನೆಲಸಮಗೊಳಿಸಿ ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ.

ಸೋಲಾರ್ ಬೇಲಿಗೆ ಮರಗಳನ್ನು ಉರುಳಿಸಿ ಹಾನಿ ಪಡಿಸುವುದು, ಟ್ರೆಂಚ್‌ಗಳನ್ನು ಲೆಕ್ಕಕ್ಕೇ ಇಲ್ಲದ ಹಾಗೆ ದಾಟುವುದು, ರೈಲ್ವೆ ಕಂಬಿಯ ಮೇಲೆ ಮಾತ್ರವಲ್ಲದೆ ಕೆಳಗೆ ಕೂಡ ಹೊರಳಾಡಿ ದಾಟುವ ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆಯು ನೂತನ ಉಪಾಯಗಳ ಬರದಲ್ಲಿದೆ. ಈ ಮಧ್ಯೆ ಇರುವ ಒಂದೇ ಪರಿಹಾರ ವೆಂದರೆ, ತೋಟಗಳಿಗೆ ಲಗ್ಗೆ ಇಟ್ಟಿರುವ ಆನೆಗಳನ್ನು ಕಾಡಿಗೆ ಕಳುಹಿಸುವ ಕಾರ್ಯಾಚರಣೆ. ಈ ಕಾರ್ಯಾಚರಣೆ ವೇಳೆ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಆನೆಗಳನ್ನು ಓಡಿಸಲು ಅರಣ್ಯ ಸಿಬ್ಬಂದಿ ಸಫಲರಾಗುತ್ತಾರೆ ಹೊರತು, ಕಾಡಿಗೆ ಕಳುಹಿಸುವ ಮಾತೇ ಇಲ್ಲ ಎನ್ನುತ್ತಾರೆ ಸುಂಟಿಕೊಪ್ಪದ ಮಹಾಲಕ್ಷಿö್ಮÃ ತೋಟದ ಅಪ್ಪಯ್ಯ.

ತಮ್ಮ ತೋಟದಲ್ಲಿ ಹಲವು ದಿನಗಳಿಂದ ೩ ಕಾಡಾನೆಗಳು ಮೊಕ್ಕಾಂ ಹೂಡಿದ್ದು ಇಲಾಖೆಯ ಸಹಕಾರ ಕೋರಿದರೆ, ಕೇವಲ ೪ ಮಂದಿ ಯನ್ನು ಮಾತ್ರ ಕಳುಹಿಸಿ ಹಾಸ್ಯಾಸ್ಪದ ಕಾರ್ಯಾಚರಣೆ ನಡೆಸಿರುವುದಾಗಿ ಅಪ್ಪಯ್ಯ ಅವರು ದೂರಿದ್ದಾರೆ. ೩ ಗಜಗಳನ್ನು ಕಾಡಿಗೆ ಅಟ್ಟಲು ೪ ಸಿಬ್ಬಂದಿಯಿAದ ಅಸಾಧ್ಯ ಕಾರ್ಯ ಎಂಬುವ ವಾಸ್ತವತೆಯ ಅರಿವಿಲ್ಲದ ಇಲಾಖೆ ಇಡೀ ದಿನ ಕಾರ್ಯಾಚರಣೆ ನಡೆಸಿ ವಿಫಲವಾಗಿದೆ.