ಸೋಮವಾರಪೇಟೆ, ಮೇ ೨೩: ರೋಟರಿ ಸಂಸ್ಥೆ ಹಾಗೂ ಮೈಸೂರಿನ ಗೋಪಾಲಗೌಡ ಮೆಮೋರಿಯಲ್ ಆಸ್ಪತ್ರೆ ಇವರುಗಳ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸ್ಥಳೀಯ ಜಾನಕಿ ಕನ್ವೆನ್‌ಷನ್ ಹಾಲ್‌ನ ಸಂಕಪ್ಪ ಸಭಾಂಗಣದಲ್ಲಿ ನಡೆಯಿತು. ಆಸ್ಪತ್ರೆಯ ನರವಿಜ್ಞಾನಿ ಮತ್ತು ಪಾರ್ಶ್ವವಾಯು ತಜ್ಞರು ಹಾಗೂ ನ್ಯೂರೋ ಝೋನ್ ಮ್ಯಾನೆಜಿಂಗ್ ಡೈರೆಕ್ಟರ್ ಹೆಚ್.ವಿ. ಸುಶ್ರುತ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ರೋಟರಿ ಅಧ್ಯಕ್ಷ ಎಂ.ಎ. ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿನ ಜನರಿಗೆ ಒಂದೇ ಸ್ಥಳದಲ್ಲಿ ಆರೋಗ್ಯ ತಪಾಸಣೆ ನಡೆಸಿ ಔಷಧಿ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಆಸ್ಪತ್ರೆಯ ಹೃದ್ರೋಗ ತಜ್ಞರು, ನರ ಮತ್ತು ಪಾರ್ಶ್ವವಾಯು ತಜ್ಞರು, ಗ್ಯಾಸ್ಟೊ ಎಂಟರಾಲಜಿಸ್ಟ್, ಮನೋವೈದ್ಯರು, ಮೂತ್ರಪಿಂಡ ತಜ್ಞರು, ಮೂಳೆ ತಜ್ಞರು, ಸ್ತಿçà ರೋಗ ತಜ್ಞರು ಹಾಗೂ ಇನ್ನಿತರ ರೋಗಗಳ ತಜ್ಞರುಗಳಾದ ಸಂತೃಪ್ತ್, ಧನ್ಯಾ, ರಘುನಾಥ್, ಅಹೇಲಿ ಸೇರಿದಂತೆ ಇತರರು ತಪಾಸಣೆ ನಡೆಸಿದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಡಿ.ಪಿ. ಧರ್ಮಪ್ಪ, ಬಿ.ಎಸ್. ಸುಂದರ್, ಶಶಿಧರ್, ಎ.ಡಿ. ಶುಭಾಕರ್, ಎಸ್.ಸಿ. ಲೋಕೇಶ್, ಎ.ಪಿ. ವೀರರಾಜು, ಮಂಜು ನೀಲಕಂಠ, ಮೋಹನ್‌ರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.