ವೀರಾಜಪೇಟೆ, ಮೇ ೨೩: ವೀರಾಜಪೇಟೆ ನ್ಯಾಯಾಲಯದಿಂದ ವರ್ಗಾವಣೆಯಾದ ನ್ಯಾಯಾಧೀಶರಾದ ಕೋನಪ್ಪರೆಡ್ಡಿ ಅವರಿಗೆ ವೀರಾಜಪೇಟೆ ವಕೀಲರ ಸಂಘದಿAದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಅಪರ ಸಿವಿಲ್ ನ್ಯಾಯಧೀಶೆ ಹಾಗೂ ದಂಡಾಧಿಕಾರಿ ಎಂ.ಸಿ. ಮಹಾಲಕ್ಷಿö್ಮ ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಐ.ಆರ್. ಪ್ರಮೋದ್ ವಹಿಸಿದ್ದರು. ನ್ಯಾಯಾಧೀಶ ಕೋನಪ್ಪರೆಡ್ಡಿಯವರ ಸೇವೆಯ ಬಗ್ಗೆ ಹಿರಿಯ ವಕೀಲರಾದ ಎನ್.ಜಿ. ಕಾಮತ್, ಎಂ.ಕೆ. ಪೂವಯ್ಯ, ಡಿ.ಸಿ. ಸುಬ್ಬಯ್ಯ, ವಿ.ಜಿ. ರಾಕೇಶ್, ರಫೀಕ್ ನವಲುಗುಂದ ಅವರುಗಳು ಶ್ಲಾಘನೀಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಕೋನಪ್ಪರೆಡ್ಡಿ ಅವರು ಮಾತನಾಡಿ, ವೃತ್ತಿಜೀವನದ ಆರಂಭಿಕ ದಿನಗಳನ್ನು ವೀರಾಜಪೇಟೆಯ ನ್ಯಾಯಾಲಯ ಸಂಕೀರ್ಣದಲ್ಲಿ ಕಳೆದದಕ್ಕೆ ಸಂತಸವಿದೆ. ಇಲ್ಲಿ ಕಳೆದ ವೃತ್ತಿಜೀವನ ನೆಮ್ಮದಿಯ ಭಾವ ತರಿಸಿದೆ ಎಂದರು. ಕಾರ್ಯಕ್ರಮದಲ್ಲಿ ವಕೀಲ ರಫೀಕ್ ನವಲುಗುಂದ ಪ್ರಾರ್ಥಿಸಿದರು. ವಕೀಲರ ಸಂಘದ ಗೌರವ ಕಾರ್ಯದರ್ಶಿ ಎಂ.ಕೆ. ದಿನೇಶ್ ಸ್ವಾಗತಿಸಿದರು. ವಕೀಲ ವಿ.ಜಿ. ರಾಕೇಶ್ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿಗಳಾದ ಎಂ.ಕೆ. ದಿನೇಶ್, ಖಜಾಂಚಿ ವಿ.ಜಿ. ರಾಕೇಶ್, ಉಪಾಧ್ಯಕ್ಷ ಸುಬ್ಬಯ್ಯ, ಜಂಟಿ ಕಾರ್ಯದರ್ಶಿ ವಿ.ಎಸ್. ಪ್ರೀತಮ್, ಆಡಳಿತ ಮಂಡಳಿ ಸರ್ವ ಸದಸ್ಯರು ಹಾಜರಿದ್ದರು.