ವೀರಾಜಪೇಟೆ, ಮೇ ೨೩: ಬೇಟೋಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಂಚಾಯಿತಿ ಅಧ್ಯಕ್ಷೆ ಬಿ.ಜೆ. ಯಶೋಧ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ. ಸಭೆ ನಡೆಯಿತು.

ವೀರಾಜಪೇಟೆ ಪಶುಪಾಲನಾ ಸಹಾಯಕ ನಿರ್ದೇಶಕ ಡಾ. ತಮ್ಮಯ್ಯ ಮಾತನಾಡಿ, ರಾಷ್ಟಿçÃಯ ಕಾರ್ಯಕ್ರಮಗಳಾದ ಜಾನುವಾರುಗಳಿಗೆ ಮತ್ತು ಹೆಣ್ಣು ಕರುಗಳಿಗೆ ಕಾಲುಬಾಯಿ ರೋಗ ಬಾರದ ಹಾಗೆ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರು ಮುತುವರ್ಜಿ ವಹಿಸಿ ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ವರ್ಷಕ್ಕೊಮ್ಮೆ ಲಸಿಕೆ ಹಾಕಿಸುವ ಮೂಲಕ ಸರಕಾರದ ಸೌಲಭ್ಯಗಳನ್ನು ಸದುಪಯೋಗ ವೀರಾಜಪೇಟೆ, ಮೇ ೨೩: ಬೇಟೋಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಂಚಾಯಿತಿ ಅಧ್ಯಕ್ಷೆ ಬಿ.ಜೆ. ಯಶೋಧ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ. ಸಭೆ ನಡೆಯಿತು.

ವೀರಾಜಪೇಟೆ ಪಶುಪಾಲನಾ ಸಹಾಯಕ ನಿರ್ದೇಶಕ ಡಾ. ತಮ್ಮಯ್ಯ ಮಾತನಾಡಿ, ರಾಷ್ಟಿçÃಯ ಕಾರ್ಯಕ್ರಮಗಳಾದ ಜಾನುವಾರುಗಳಿಗೆ ಮತ್ತು ಹೆಣ್ಣು ಕರುಗಳಿಗೆ ಕಾಲುಬಾಯಿ ರೋಗ ಬಾರದ ಹಾಗೆ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರು ಮುತುವರ್ಜಿ ವಹಿಸಿ ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ವರ್ಷಕ್ಕೊಮ್ಮೆ ಲಸಿಕೆ ಹಾಕಿಸುವ ಮೂಲಕ ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು. ನಾಯಿಗಳಲ್ಲಿರುವ ಹುಚ್ಚು ರೋಗ ತಡೆಗಟ್ಟಲು ಸಾಧ್ಯ. ಅದರ ಬಗ್ಗೆ ನಿರ್ಲಕ್ಷö್ಯ ಸಲ್ಲದು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಬೇಕಾಗಿದೆ ಎಂದರು. ವೀರಾಜಪೇಟೆ ಕೃಷಿ ಅಧಿಕಾರಿ ಲವಿನ್ ಮಾದಪ್ಪ ಮಾತನಾಡಿ, ಈಗಾಗಲೇ ಮಳೆ ಪ್ರಾರಂಭವಾಗಿದ್ದು, ಕೃಷಿಕರಿಗೆ ಬಿತ್ತನೆ ಬೀಜ ನೀಡಲಾಗುತ್ತಿದೆ. ಕೃಷಿಕರು ತಮ್ಮ ಭೂಮಿಯ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಾವಯವ ಗೊಬ್ಬರವನ್ನೆ ಬಳಸುವಂತಾಗಬೇಕು. ಕೃಷಿ ಇಲಾಖೆಯಿಂದ ಹಿಡುವಳಿದಾರ ಫಲಾನುಭವಿಗಳಿಗೆ ಕೃಷಿ ಉಪಕರಣ ಸಾಮಗ್ರಿಗಳು ಮತ್ತು ಸಹಾಯಧನ ನೀಡಲಾಗುವುದು. ಆಸ್ತಿಯ ಆರ್‌ಟಿಸಿ, ಸೂಕ್ತ ದಾಖಲೆಗಳು ಅಗತ್ಯವಾಗಿರಬೇಕು ಎಂದು ಹೇಳಿದರು.

ಗ್ರಾಮ ಲೆಕ್ಕಾಧಿಕಾರಿ ಕಸ್ತೂರಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಜನರ ಮನೆ ಬಳಿಗೆ ಕೊಂಡೊಯ್ಯುವ ಕಾರ್ಯಕ್ರಮವು ತಹಶೀಲ್ದಾರ್ ಮುಖಾಂತರ ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಗ್ರಾಮಒನ್ ಎಂಬ ಉತ್ತಮ ಯೋಜನೆ ಪ್ರಾರಂಭಗೊAಡಿದ್ದು, ಬಿಪಿಎಲ್ ಕಾರ್ಡ್ ಇರುವವರಿಗೆ ಪಿಂಚಣಿ ಇತರ ಸೌಲಭ್ಯಗಳು ಪಂಚಾಯಿತಿ ಮೂಲಕ ತಲುಪಲಿದೆ ಎಂದರು.

ಪAಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ ಮಾತನಾಡಿ, ಎಲ್ಲಾ ಇಲಾಖೆಗಳಿಗೆ ಮಾಹಿತಿ ನೀಡಿದ್ದರೂ ಕೆಲವು ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದಾರೆ. ಬೇಟೋಳಿ ಪಂಚಾಯಿತಿ ಮೂಲಕ ನಡೆಯುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿ ಗ್ರಾಮಸ್ಥರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು. ಪಂಚಾಯಿತಿ ಉಪಾಧ್ಯಕ್ಷೆ ವೈ.ಎಂ. ಶಾಂತಿ, ಸದಸ್ಯರಾದ ಎ.ಎ. ವಸಂತ್ ಕಟ್ಟಿ, ಸಿ.ಎಸ್. ಸುದೀಶ್, ಎಂ.ಎA. ರಜಾಕ್, ಕೆ.ಹೆಚ್. ಅಲೀಮ, ಪಿ.ಎಂ. ಲಕ್ಷಿö್ಮ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಬಿ.ಆರ್. ಗಾಯತ್ರಿ, ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕಿ ಇಂದಿರಾ ಮಾತನಾಡಿದರು. ಹೆಗ್ಗಳ ರಾಮನಗರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಗ್ರಂಥಾಲಯ, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.