ಭಾರತವು ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಬದ್ಧವಾಗಿದೆ

ಟೋಕಿಯೊ, ಮೇ ೨೩: ಭಾರತವು ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದ್ದು, ಮುಂದುವರಿದ ಬೆಳವಣಿಗೆ, ಶಾಂತಿ ಮತ್ತು ಸಮೃದ್ಧಿಯ ಗುರಿಯನ್ನು ಸಾಧಿಸುವ ಉದ್ದೇಶದಿಂದ ಪಾಲುದಾರರ ನಡುವೆ ಆರ್ಥಿಕ ಸಂಬAಧವನ್ನು ಆಳಗೊಳಿಸುವ ಕುರಿತು ಮಾತನಾಡಿದೆ. ಟೋಕಿಯೋದಲ್ಲಿ ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೇಮ್‌ವರ್ಕ್ ಫಾರ್ ಪ್ರಾಸ್ಪೆರಿಟಿ (ಐಪಿಇಎಫ್) ಗಾಗಿ ಚರ್ಚೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಐಪಿಇಎಫ್‌ನ ಘೋಷಣೆಯು ಇಂಡೋ-ಪೆಸಿಫಿಕ್ ಪ್ರದೇಶವನ್ನು ಜಾಗತಿಕ ಆರ್ಥಿಕ ಬೆಳವಣಿಗೆಯ ಎಂಜಿನ್ ಮಾಡುವ ಸಾಮೂಹಿಕ ಬಯಕೆಯ ಘೋಷಣೆಯಾಗಿದೆ ಎಂದು ಹೇಳಿದರು. ಭಾರತವು ಐತಿಹಾಸಿಕವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ವ್ಯಾಪಾರದ ಹರಿವಿನ ಕೇಂದ್ರವಾಗಿದ್ದು, ಗುಜರಾತ್‌ನ ಲೋಥಾಲ್‌ನಲ್ಲಿ ವಿಶ್ವದ ಅತ್ಯಂತ ಹಳೆಯ ವಾಣಿಜ್ಯ ಬಂದರನ್ನು ಹೊಂದಿದೆ ಎಂದರು. ಅಂತೆಯೇ ಇಂಡೋ-ಪೆಸಿಫಿಕ್ ಪ್ರದೇಶದ ಆರ್ಥಿಕ ಸವಾಲುಗಳನ್ನು ಎದುರಿಸಲು ಸಾಮಾನ್ಯ ಮತ್ತು ಸೃಜನಶೀಲ ಪರಿಹಾರಗಳನ್ನು ಕಂಡುಹಿಡಿಯುವ ಅಗತ್ಯವನ್ನು ಪ್ರಧಾನ ಮಂತ್ರಿ ಮೋದಿ ಒತ್ತಿ ಹೇಳಿದರು. ಒಳಗೊಳ್ಳುವ ಮತ್ತು ಹೊಂದಿಕೊಳ್ಳುವ IPಇಈ ಗಾಗಿ ಪ್ರದೇಶದ ಎಲ್ಲಾ ದೇಶಗಳೊಂದಿಗೆ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಭಾರತ ಹೊಂದಿದೆ ಎಂದರು. "ಭಾರತವು ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಬದ್ಧವಾಗಿದೆ. ಬೆಳವಣಿಗೆ, ಶಾಂತಿ ಮತ್ತು ಸಮೃದ್ಧಿಗೆ ಪಾಲುದಾರರ ನಡುವೆ ಆಳವಾದ ಆರ್ಥಿಕ ಒಪ್ಪಂದವು ನಿರ್ಣಾಯಕವಾಗಿದೆ ಎಂದು ನಂಬುತ್ತದೆ. ಭಾರತವು ಐಪಿಇಎಫ್ ಅಡಿಯಲ್ಲಿ ಪಾಲುದಾರ ರಾಷ್ಟçಗಳೊಂದಿಗೆ ಸಹಕರಿಸಲು ಉತ್ಸುಕವಾಗಿದೆ ಮತ್ತು ಪ್ರಾದೇಶಿಕ ಆರ್ಥಿಕ ಸಂಪರ್ಕ, ಏಕೀಕರಣ ಮತ್ತು ಪ್ರದೇಶದೊಳಗೆ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಿಕೆದರು.

ಜ್ಞಾನವಾಪಿ ಪ್ರಕರಣದ ವಿಚಾರಣೆ ಅಂತ್ಯ : ಇಂದು ಪ್ರಕಟ

ಲಖನೌ, ಮೇ ೨೩: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ಪೂಜೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ವಾರಣಾಸಿ ಜಿಲ್ಲಾ ನ್ಯಾಯಾಲಯ ಮಂಗಳವಾರಕ್ಕೆ ತೀರ್ಪು ಕಾಯ್ದರಿಸಿದೆ. ಮಸೀದಿಯ ಅಡ್ವೊಕೇಟ್ ಕಮಿಷನರ್ ಸಮೀಕ್ಷಾ ವರದಿಯನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಬೇಕೇ ಅಥವಾ ಬೇಡವೇ ಎಂಬುದನ್ನು ಸಹ ನ್ಯಾಯಾಲಯ ನಿರ್ಧರಿಸಲಿದೆ. ಪ್ರಕರಣದ ವಿಚಾರಣೆ ವೇಳೆ ೧೯ ವಕೀಲರು ಮತ್ತು ನಾಲ್ವರು ಅರ್ಜಿದಾರರು ಸೇರಿದಂತೆ ೨೩ ಜನರಿಗೆ ಮಾತ್ರವೇ ನ್ಯಾಯಾಲಯದ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗಿತ್ತು. ಸದ್ಯ ಇಂದಿಗೆ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಕೋರ್ಟ್ ಆದೇಶ ಕಾಯ್ದಿರಿಸಿದೆ. ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಪ್ರಕರಣವನ್ನು ಕೆಳ ನ್ಯಾಯಾಲಯಕ್ಕೆ ವರ್ಗಾಯಿಸಿ, ಇದು ತುಂಬಾ ಸೂಕ್ಷö್ಮ ಪ್ರಕರಣ. ಹೀಗಾಗಿ ಹಿರಿಯ ಮತ್ತು ಅನುಭವಿಗಳ ಅಗತ್ಯವಿದೆ ಎಂದು ಹೇಳಿತ್ತು. ಇದಾದ ಕೆಲ ದಿನಗಳ ಬಳಿಕ ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿತ್ತು. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ್, ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ವಾದ ಪ್ರತಿವಾದಗಳನ್ನು ಆಲಿಸಿದರು.