ಗೋಣಿಕೊಪ್ಪ ವರದಿ, ಮೇ. ೨೩: ಮೈಸೂರು ವಿ. ಎನ್. ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ೨ ನೇ ರಾಜ್ಯಮಟ್ಟದ ಆಹ್ವಾನಿತ ಕರಾಟೆ ಟೂರ್ನಿಯಲ್ಲಿ ಕೊಡಗಿನ ಕರಾಟೆ ಪಟುಗಳಿಗೆ ೧೮ ಪದಕಗಳು ಲಭಿಸಿದೆ. ಅಮಿತ್ ಬೋಪಣ್ಣ ಚಿನ್ನ, ಕಂಚು, ತೇಜಸ್ ಮಾದಪ್ಪ ಚಿನ್ನ, ಕಂಚು, ಶಾನ್ ನಂಜಪ್ಪ ಕಂಚು, ಶಾನ್ವಿ ಮುತ್ತಕ್ಕ ೨ ಚಿನ್ನ, ನಿಶಾನ್ ಮೇದಪ್ಪ ಚಿನ್ನ, ಕಂಚು, ಕೆ. ಎಂ. ಮುತ್ತಕ್ಕ ೨ ಕಂಚು, ಕೆ. ಎಂ. ಗಣಪತಿ, ಚಿನ್ನ, ಬೆಳ್ಳಿ, ನಕ್ಷ ಬೋಜಮ್ಮ ಬೆಳ್ಳಿ, ಕಂಚು, ಭೂಷಿತ ಬೋಜಮ್ಮಗೆ ೨ ಕಂಚು, ಪ್ರೇಕ್ಷಿತಾ ಉತ್ತಪ್ಪ ಬೆಳ್ಳಿ, ಕಂಚು, ಡಿಂಪಲ್ ಮುಖೇಶ್‌ಗೆ ಕಂಚಿನ ಪದಕ ಲಭಿಸಿದೆ. ಕರಾಟೆ ಪಟು ಜೆನ್ ಶಿಟಾರಿಯೋ ಕರಾಟೆ ಸಂಸ್ಥೆಯ ಅರುಣ್ ಮಾಚಯ್ಯ ನೇತೃತ್ವದಲ್ಲಿ ಕಿಶೋರ್ ತರಬೇತಿ ನೀಡಿದ್ದರು.