ಕೂಡಿಗೆ, ಮೇ ೨೩: ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧೀನದ ೨೦ ಅಂಗಡಿ ಮಳಿಗೆಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಅಧ್ಯಕ್ಷತೆಯಲ್ಲಿ ಮಾರುಕಟ್ಟೆ ಸಭಾಂಗಣದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.
ಗ್ರಾಮ ಪಂಚಾಯಿತಿ ಮಾಸಿಕ ಸಭೆಯ ತೀರ್ಮಾನದಂತೆ ಮತ್ತು ಗ್ರಾಮ ಸಭೆಯ ಗ್ರಾಮಸ್ಥರ ನಿರ್ಣಯದ ಮೇರೆಗೆ ಗ್ರಾಮ ಪಂಚಾಯಿತಿ ನಿಯಮಾನುಸಾರವಾಗಿ ಗ್ರಾಮ ಪಂಚಾಯಿತಿಗೆ ಆದಾಯ ಬರುವ ದೃಷ್ಟಿಯಿಂದ ಮರು ಹರಾಜು ಪ್ರಕ್ರಿಯೆ ನಡೆಯಿತು. ಹರಾಜು ಪ್ರಕ್ರಿಯೆ ಪ್ರಾರಂಭದ ಸಂದರ್ಭ ಮೀಸಲಾತಿ ನಿಗದಿ ವಿಚಾರಕ್ಕೆ ಸ್ವಲ್ಪ ಸಮಯದವರೆಗೆ ಗೊಂದಲ ಉಂಟಾಯಿತ್ತು. ಹರಾಜು ಪ್ರಕ್ರಿಯೆಯಲ್ಲಿ ೯೭ ಮಂದಿ ಭಾಗವಹಿಸಿದ್ದರು. ೨೦ ಅಂಗಡಿ ಮಳಿಗೆಗಳಿಂದ ತಿಂಗಳಿಗೆ ಗ್ರಾಮ ಪಂಚಾಯಿತಿ ಮಾಸಿಕ ಆದಾಯವಾಗಿ ರೂ. ೨ ಲಕ್ಷದ ೯೦ ಸಾವಿರ ಆದಾಯ ಬರುವ ರೀತಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಅರುಣ ಕುಮಾರಿ ಸೇರಿದಂತೆ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ಹರೀಶ್ ಭಾಗವಹಿಸಿದ್ದರು.