ಶನಿವಾರಸAತೆ, ಮೇ ೨೩: ಸಮೀಪದ ಮಾಲಂಬಿ ಗ್ರಾಮದ ಶೆಡ್‌ನ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾಲAಬಿ ಗ್ರಾಮದ ವ್ಯಾಪಾರಿ ಕೆ.ಕೆ. ರಾಮಚಂದ್ರ ಎಂಬವರನ್ನು ಬಂಧಿಸಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಎಚ್. ಪರಶಿವ ಮೂರ್ತಿ ಅವರ ನಿರ್ದೇಶನದಂತೆ ಪಿಎಸ್‌ಐ ಎಚ್.ಸಿ. ಗೋವಿಂದ್ ರಾಜ್, ಸಿಬ್ಬಂದಿ ಲೋಕೇಶ್, ಶಶಿಕುಮಾರ್ ಮತ್ತು ಮುರಳಿ ಸ್ಥಳಕ್ಕೆ ಧಾವಿಸಿ ಸ್ಥಳದಲ್ಲಿದ್ದ ಮದ್ಯದ ಪ್ಯಾಕೆಟ್‌ಗಳು, ಪ್ಲಾಸ್ಟಿಕ್ ಲೋಟಗಳು, ನೀರಿನ ಬಾಟಲಿಗಳನ್ನು ವಶಪಡಿಸಿಕೊಂಡರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.