ಭಾರತವನ್ನು ಪ್ರಶಂಶಿಸಿದ ಪಾಕ್ ಮಾಜಿ ಪ್ರಧಾನಿ
ಇಸ್ಲಾಮಾಬಾದ್, ಮೇ ೨೨: ಭಾರತದ ಸ್ವತಂತ್ರ ವಿದೇಶಾಂಗ ನೀತಿಗಳ ಬಗ್ಗೆ ಇತ್ತೀಚೆಗೆ ಮುಕ್ತ ಕಂಠದಿAದ ಶ್ಲಾಘಿಸಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದೀಗ ಮತ್ತೆ ನೆರೆ ದೇಶವನ್ನು ಶ್ಲಾಘಿಸಿದ್ದಾರೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಕುರಿತ ವರದಿಯೊಂದರ ತುಣುಕನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪಾಕಿಸ್ತಾನ ಸರ್ಕಾರವನ್ನು ಟೀಕಿಸಿದ್ದಾರೆ. ‘ಕ್ವಾಡ್ ಸದಸ್ಯ ರಾಷ್ಟçವಾದರೂ ಅಮೆರಿಕದ ಒತ್ತಡಕ್ಕೆ ಮಣಿಯದ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಮೂಲಕ ಜನರಿಗೆ ನೆರವಾಗಿದೆ. ಸ್ವತಂತ್ರ ವಿದೇಶಾಂಗ ನೀತಿಯ ಮೂಲಕ ಇಂತದ್ದೇ ಸಾಧನೆ ಮಾಡಬೇಕೆಂದು ನಮ್ಮ ಸರ್ಕಾರ ಉದ್ದೇಶಿಸಿತ್ತು’ ಎಂದು ಅವರು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ನಮ್ಮ ಸರ್ಕಾರಕ್ಕೆ ಪಾಕಿಸ್ತಾನದ ಹಿತಾಸಕ್ತಿಯೇ ಮುಖ್ಯವಾಗಿತ್ತು. ಆದರೆ ದುರದೃಷ್ಟವಶಾತ್, ಸ್ಥಳೀಯ ಮೀರ್ ಜಾಫರ್ ಮತ್ತು ಮೀರ್ ಸಾದಿಕ್ ಬಾಹ್ಯ ಒತ್ತಡದಿಂದ ಸರ್ಕಾರವನ್ನು ಬದಲಾಯಿಸುವ ಷಡ್ಯಂತ್ರ ಮಾಡಿದರು. ಈಗ ಅವರು ದೇಶದ ಆರ್ಥಿಕತೆಯನ್ನು ವಿನಾಶದ ಪ್ರಪಾತಕ್ಕೆ ದೂಡುತ್ತಿದ್ದಾರೆ ಎಂದು ಮತ್ತೊಂದು ಟ್ವೀಟ್ನಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಬಿಜೆಪಿ ಸಂಸದ ಟಿಎಂಸಿಗೆ ಸೇರ್ಪಡೆ
ಕೋಲ್ಕತ್ತ, ಮೇ ೨೨: ಬಿಜೆಪಿಯ ಲೋಕಸಭಾ ಸದಸ್ಯ ಅರ್ಜುನ್ ಸಿಂಗ್ ಭಾನುವಾರದಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದಲ್ಲಿ ಅರ್ಜುನ್ ಸಿಂಗ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ರಾಜ್ಯದ ನಾಯಕತ್ವದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜುನ್ ಸಿಂಗ್ ಪಕ್ಷದಲ್ಲಿ ಹಿರಿಯ ಸ್ಥಾನ ಹೊಂದಿದ್ದರೂ ಸರಿಯಾಗಿ ಕೆಲಸ ಮಾಡಲು ಬಿಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳ ಬಿಜೆಪಿಯ ಕಾರ್ಯನಿರ್ವಹಣೆಯ ಬಗ್ಗೆ ಚರ್ಚಿಸುವುದಕ್ಕಾಗಿ ಇತ್ತೀಚೆಗೆ ಅರ್ಜುನ್ ಸಿಂಗ್ ದೆಹಲಿಗೆ ಭೇಟಿ ನೀಡಿದ್ದರು. ಈ ವೇಳೆ ಸೆಣಬು ಗಿರಣಿ ಸಮಸ್ಯೆಯನ್ನೂ ಚರ್ಚಿಸಿದ್ದರು. ದೆಹಲಿ ಭೇಟಿಯ ನಂತರ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ೨೦೧೯ ರಲ್ಲಿ ಟಿಎಂಸಿ ತೊರೆದಿದ್ದ ಸಿಂಗ್ ಬಿಜೆಪಿ ಸೇರಿದ್ದರು.
ಮದುವೆ ಮನೆಯಲ್ಲಿ ಹೈಡ್ರಾಮ
ಮೈಸೂರು, ಮೇ ೨೨: ತಾಳಿ ಕಟ್ಟುವ ಶುಭ ವೇಳೆಯಲ್ಲಿ ವಧು ಕುಸಿದು ಬಿದ್ದಂತೆ ನಟಿಸಿ ನಂತರ ನನಗೆ ಮದುವೆ ಬೇಡ. ನಾನು ನನ್ನ ಪ್ರಿಯಕರನನ್ನೇ ಮದುವೆಯಾಗುತ್ತೇನೆ ಎಂದು ಮದುವೆ ಮಂಟಪದಲ್ಲಿ ವಧು ಹೈಡ್ರಾಮಾ ನಡೆದಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮೈಸೂರಿನ ಸುಣ್ಣದಕೇರಿ ನಿವಾಸಿಯಾಗಿರುವ ವಧು ಸಿಂಚನ ಮತ್ತು ಹೆಚ್.ಡಿ. ಕೋಟೆಯ ಯುವಕನ ಜೊತೆ ಮದುವೆ ನಡೆಯಬೇಕಿತ್ತು. ಆದರೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮುರಿದು ಬಿದ್ದಿದೆ. ವಧು ಸಿಂಚನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು ಆತನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಇದಕ್ಕೆ ಕಾರಣ ಸಿಂಚನ ಪ್ರಿಯಕರ ತನ್ನ ಪ್ರಿಯತಮೆಯನ್ನು ನೀನು ಮದುವೆಯಾಗಬೇಡ ಎಂದು ಸಂದೇಶ ಕಳುಹಿಸಿದ್ದ. ಇದನ್ನು ನೋಡಿದ ವರನ ಕಡೆಯವರು ವಧುವನ್ನು ಪ್ರಶ್ನಿಸಿದ್ದಾರೆ. ನಂತರ ಮದುವೆಗೆ ಖರ್ಚು ಮಾಡಿದ್ದ ೫ ಲಕ್ಷ ರೂಪಾಯಿ ಹಣವನ್ನು ಕಟ್ಟಿಕೊಡುವಂತೆ ಆಗ್ರಹಿಸಿ ವರನ ಕಡೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಇನ್ನು ಕೆಆರ್ ಠಾಣೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮದುವೆಗೆ ಖರ್ಚು ಮಾಡಿದ್ದ ಹಣವನ್ನು ಕೊಡಲು ವಧುವಿನ ಕಡೆಯವರು ಒಪ್ಪಿಕೊಂಡು ಹಣ ನೀಡಿದ್ದಾರೆ.
ಮಳೆ ಅನಾಹುತ ಎದುರಿಸಲು ಕಾರ್ಯಪಡೆ ರಚನೆ
ಬೆಂಗಳೂರು, ಮೇ ೨೨: ಮಳೆ ಅನಾಹುತ ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ೮ ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ದಾವೋಸ್ ಪ್ರವಾಸಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಎಂಟು ವಲಯಗಳ ಜವಾಬ್ದಾರಿ ಯನ್ನು ಸಚಿವರಿಗೆ ಹಂಚಿಕೆ ಮಾಡಿದ್ದಾರೆ. ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆ ಬಳಿಕ ಈ ಕಾರ್ಯಪಡೆ ರಚಿಸಲಾಗಿದೆ. ಇದರಲ್ಲಿ ಸಂಬAಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಈ ಕಾರ್ಯಪಡೆಯ ಸಂಚಾಲಕರಾಗಿ ಕಾರ್ಯ ನಿರ್ವ ಹಿಸುತ್ತಾರೆ. ಕಾರ್ಯಪಡೆ ನೇತೃತ್ವದ ವಿವರ ಇಂತಿದೆ. ದಕ್ಷಿಣ ವಲಯ ಆರ್ ಅಶೋಕ್, ಪೂರ್ವ ವಲಯ ಡಾ.ಅಶ್ವಥ್ ನಾರಾಯಣ್, ಪಶ್ಚಿಮ ವಲಯ, ವಿ ಸೋಮಣ್ಣ, ಆರ್ ಆರ್ ನಗರ ವಲಯ ಎಸ್.ಟಿ. ಸೋಮ ಶೇಖರ್, ಮಹದೇವಪುರ ವಲಯ ಬೈರತಿ ಬಸವರಾಜ್, ಬೊಮ್ಮನಹಳ್ಳಿ ವಲಯ ಗೋಪಾಲಯ್ಯ ಯಲಹಂಕ ಮತ್ತು ದಾಸರಹಳ್ಳಿ ವಲಯ ಮುನಿರತ್ನ ಅವರುಗಳನ್ನು ನೇಮಿಸಲಾಗಿದೆ.
ಸುಟ್ಟು ಕರಕಲಾಗಿದ್ದ ಕಾರಿನಲ್ಲಿ ನಾಪತ್ತೆಯಾಗಿದ್ದವರ ಶವ ಪತ್ತೆ
ಉಡುಪಿ, ಮೇ ೨೨: ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ಸುಟ್ಟು ಕರಕಲಾಗಿರುವ ಕಾರಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಬೆಂಗಳೂರು ಆರ್.ಟಿ. ನಗರದ ಯಶವಂತಯಾದವ್, ಜ್ಯೋತಿ ಮೃತರು ಎಂದು ತಿಳಿದುಬಂದಿದೆ. ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಯಶವಂತ ಯಾದವ್ ಹಾಗೂ ಜ್ಯೋತಿ ನಾಪತ್ತೆ ಕೇಸು ದಾಖಲಾಗಿತ್ತು. ಮೃತರು ಈಚೆಗೆ ಮಂಗಳೂರಿಗೆ ಬಂದು ಹುಸೇನ್ ಎಂಬವರಿAದ ಕಾರು ಬಾಡಿಗೆ ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕಾರು ಬೆಂಕಿಗಾಹುತಿಯಾಗಿದ್ದನ್ನು ಕಂಡು ಸ್ಥಳೀಯರು ಬೆಂಕಿ ನಂದಿಸಿದಾಗ ಕಾರಿನೊಳಗೆ ಇಬ್ಬರ ಶವ ಪತ್ತೆಯಾಗಿದೆ. ಬ್ರಹ್ಮಾವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೂ ಮುನ್ನ ಕುಟುಂಬಸ್ಥರಿಗೆ ಮೆಸೇಜ್ ಮಾಡಿರುವುದಾಗಿ ತಿಳಿದು ಬಂದಿದೆ. ಜ್ಯೋತಿ ಒಂದು ವರ್ಷದ ಹಿಂದೆ ಬಿ.ಕಾಂ ಮುಗಿಸಿದ್ದಳು ಎಂದು ತಿಳಿದು ಬಂದಿದೆ.
ಟ್ರಕ್ನಲ್ಲಿ ಬೆಂಕಿ - ಜಾನುವಾರುಗಳು ಸಾವು
ಉಜ್ಜೈನ್, ಮೇ ೨೨: ೧೩ ಹಸುಗಳನ್ನು ಕೊಂಡೊಯ್ಯುತ್ತಿದ್ದ ಟ್ರಕ್ ಬೆಂಕಿಗೆ ಹೊತ್ತಿದ್ದು, ಹಸುಗಳು ಸಜೀವ ದಹನವಾಗಿವೆ. ಭಾನುವಾರ ಉಜ್ಜೆöÊನ್ ಜಿಲ್ಲೆಯ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಶನಿವಾರ ತಡ ರಾತ್ರಿ ಈ ಘಟನೆ ವರದಿಯಾಗಿದ್ದು, ಖಚ್ರೋಡ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ೨೦ಕ್ಕೂ ಹೆಚ್ಚು ದನಗಳನ್ನು ಟ್ರಕ್ನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಚಾಲಕನೇ ಇಲ್ಲದ ಟ್ರಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಸ್ಥಳೀಯರು ಗಮನಿಸಿದ್ದು, ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಆ ವೇಳೆಗೆ ಆಗಲೇ ಐದು ಹಸುಗಳು ಹಾಗೂ ೮ ಕರುಗಳು ಸಾವನ್ನಪ್ಪಿದ್ದವು ಎಂದು ಖಚ್ರೋಡ್ ಪೊಲೀಸ್ ಠಾಣೆಯ ಉಸ್ತುವಾರಿ ರವೀಂದ್ರ ಯಾದವ್ ಹೇಳಿದ್ದಾರೆ. ಗಾಮಸ್ಥರ ಪ್ರಕಾರ ೧೦-೧೫ ಹಸುಗಳನ್ನು ರಕ್ಷಿಸಲಾಗಿತ್ತು ಅವು ಹತ್ತಿರದಲ್ಲಿದ್ದ ಕಾಡಿಗೆ ಓಡಿಹೋದವು ಎಂದು ಹೇಳಿದ್ದಾರೆ. ೫ ಹಸುಗಳನ್ನು ಗೋಶಾಲೆಗೆ ಕಳಿಸಲಾಗಿದೆ. ವಾಹನದ ಮಾಲಿಕ, ಚಾಲಕನಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.
ರಾಜತಾಂತ್ರಿಕತೆಯಿAದ ಯುದ್ಧ ಕೊನೆ - ಉಕ್ರೇನ್ ಅಧ್ಯಕ್ಷ
ಕೀವ್, ಮೇ ೨೨: ರಾಜತಾಂತ್ರಿಕತೆಯಿAದ ಮಾತ್ರ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ÷್ಕ ಹೇಳಿದ್ದಾರೆ. ಉಕ್ರೇನ್ಗೆ ಭೇಟಿ ನೀಡುತ್ತಿರುವ ಪೋರ್ಚುಗೀಸ್ ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ÷್ಕ, 'ಸಂಪೂರ್ಣ ಮಿಲಿಟರಿ ವಿಜಯಕ್ಕಿಂತ ರಾಜತಾಂತ್ರಿಕ ಪ್ರಗತಿಯಿಂದ ಮಾತ್ರ ತನ್ನ ದೇಶದ ಮೇಲಿನ ರಷ್ಯಾದ ಯುದ್ಧವನ್ನು ಕೊನೆಗೊಳಿಸಬಹುದು, ಆದರೆ ಯೂರೋಪಿಯನ್ ಒಕ್ಕೂಟ ಸದಸ್ಯತ್ವಕ್ಕಾಗಿ ತನ್ನ ಪ್ರಕರಣವನ್ನು ತಳ್ಳಿಹಾಕುತ್ತದೆ ಎಂದು ಹೇಳಿದ್ದಾರೆ. ಉಕ್ರೇನಿಯನ್ ಯುದ್ಧದ ಪ್ರಯತ್ನಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಔಪಚಾರಿಕವಾಗಿ ೪೦-ಶತಕೋಟಿ ಡಾಲರ್ ನೆರವು ಪ್ಯಾಕೇಜ್ಗೆ ಸಹಿ ಹಾಕಿದಾಗಲೂ ಝೆಲೆನ್ಸಿ÷್ಕ ಹೆಚ್ಚಿನ ಮಿಲಿಟರಿ ಸಹಾಯಕ್ಕಾಗಿ ಮನವಿ ಮಾಡಿದರು ಎಂದು ಹೇಳಿದ್ದಾರೆ.