ಗೋಣಿಕೊಪ್ಪ ವರದಿ, ಮೇ ೨೨: ಕೊಡವ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ಹೊನಲು ಬೆಳಕಿನ ಪೊರುಕೊಂಡ ಕ್ರಿಕೆಟ್ ಕಪ್ ಅನ್ನು ತಂಬುಕುತ್ತಿರ ತಂಡ ಮುಡಿಗೇರಿಸಿಕೊಂಡಿದೆ. ಬೊಟ್ಟಂಗಡ ರನ್ನರ್ ಅಪ್, ಚೆಕ್ಕೇರ ೩ ನೇ ಸ್ಥಾನ, ಮುಕ್ಕಾಟೀರ (ಮಾದಾಪುರ) ೪ ನೇ ತಂಡವಾಗಿ ಹೊರ ಹೊಮ್ಮಿತು. ರಾತ್ರಿ ೧೧.೩೦ ಗಂಟೆಗೆ ಸಮಾರೋಪ ಕಾರ್ಯಕ್ರಮದ ಮೂಲಕ ಸಂಭ್ರಮಕ್ಕೆ ತೆರೆ ಎಳೆಯಲಾಯಿತು.
ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ, ಪೊರುಕೊಂಡ ಕುಟುಂಬ ವತಿಯಿಂದ ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ತಂಬುಕುತ್ತಿರ ಬೊಟ್ಟಂಗಡ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಬೊಟ್ಟಂಗಡ ಕೂಡ ಚೊಚ್ಚಲ ರನ್ನರ್ ಅಪ್ ತಂಡವಾಗಿ ಹೊರ ಹೊಮ್ಮಿತು. ಉಭಯ ತಂಡಗಳಿಗೆ ಮೊದಲ ಪ್ರಶಸ್ತಿ ಪಡೆದ ಸಾಧನೆ ಸಂಭ್ರಮಕ್ಕೆ ಕಾರಣವಾಯಿತು.
ಫಲಿತಾಂಶ : ತಂಬುಕುತ್ತೀರ ತಂಡವು ಬೊಟ್ಟಂಗಡ ತಂಡವನ್ನು ೭೦ ರನ್‌ಗಳಿಂದ ಮಣಿಸಿತು. ಮೊದಲು ಬ್ಯಾಟ್ ಮಾಡಿ ನಿಗದಿತ ೧೦ ಓವರ್ ಗಳಿಗೆ ೩ ವಿಕೆಟ್ ಕಳೆದುಕೊಂಡು ೧೪೩ ರನ್ ಗಳಿಸಿತು. ಬೊಟ್ಟಂಗಡ ೭ ವಿಕೆಟ್ ಕಳೆದುಕೊಂಡು ಕೇವಲ ೭೩ ರನ್ ಗಳಿಸಿ ಸೋಲಿಗೆ ಶರಣಾಯಿತು. ತಂಬುಕುತ್ತೀರ ಸಿಡಿಲಬ್ಬರದ ಆಟ ಪ್ರದರ್ಶಿಸಿತು. ರನ್ ತಡೆಯುವಲ್ಲಿ ಬೊಟ್ಟಂಗಡ ವಿಫಲವಾಯಿತು. ಆರಂಭದಿAದ ಕೊನೆಯವರೆಗೂ ತಂಬುಕುತ್ತಿರ ವೇಗದ ಬ್ಯಾಟಿಂಗ್ ಮಾಡಿತು. ೨ ನೇ ಒವರ್‌ನಲ್ಲಿ ತಂಬುಕುತ್ತಿರ ಆಟಗಾರ ಸಾಗರ್ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿದು ಬೊಟ್ಟಂಗಡ ತಂಡ ಸಂಚಲನ ಮೂಡಿಸಿತಾದರೂ, ನೋಬಾಲ್ ಕಾರಣಕ್ಕೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇದು ಪಂದ್ಯದ ಗತಿಯನ್ನು ಬದಲಿಸಿತು. ಸಾಗರ್ ೬೫ ರನ್ ಸಿಡಿಸಿದರು. ಬೌಲಿಂಗ್ ಮತ್ತು ಕ್ಷೇತ್ರ ರಕ್ಷಣೆಯಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿತು. ಮೊದಲ ಒವರ್‌ನಲ್ಲಿಯೇ ವಿಕೆಟ್ ಪಡೆದು ಬೊಟ್ಟಂಗಡದ ಮಾನಸಿಕ ಸ್ಥೆöÊರ್ಯ ಕುಗ್ಗಿಸಿತು. ನಂತರ ಬೊಟ್ಟಂಗಡ ಚೇತರಿಸಿಕೊಳ್ಳಲು ಆಗಲಿಲ್ಲ. ೬ ಒವರ್‌ಗಳಲ್ಲಿ ಪ್ರಮುಖ ೪ ವಿಕೆಟ್ ಪಡೆದು ಪಂದ್ಯವನ್ನು ಕಸಿದುಕೊಂಡಿತು.
ಸ್ಕೋರ್: ತಂಬುಕುತ್ತಿರ ಸುಖೇಶ್ ೧೩ ರನ್, ಸಾಗರ್ ೬೫, ಶರಣು ೬, ಮಿಲನ್ ೩೭, ಅನಿಲ್ ೮ ರನ್. ಶರಣು ೧ ವಿಕೆಟ್, ಸುಕೇಶ್ ೧, ಸಾಗರ್ ೨, ಮಿಲನ್ ೧, ಅನಿಲ್ ೨ ವಿಕೆಟ್. ಬೊಟ್ಟಂಗಡ ಹರೀಶ್ ೦ ರನ್, ಗೌತಮ್ ೧೭, ಪ್ರತು ೦, ರತನ್ ೧೪, ಪೆಮ್ಮಯ್ಯ ೮, ಕೌಶಿಕ್ ೨೩, ನಿಕಿಲ್ ೪, ಅಚ್ಚಯ್ಯ ೪ ರನ್. ಬೊಟ್ಟಂಗಡ ವಿಶು ೨ ವಿಕೆಟ್, ಪ್ರತು ೧ ವಿಕೆಟ್.
ಚೆಕ್ಕೇರ ಕಾರ್ಯಪ್ಪ ಸರಣಿ ಶ್ರೇಷ್ಠ : ಟೂರ್ನಿಯಲ್ಲಿ ೧೯೦ ರನ್ ದಾಖಲಿಸಿ, ೭ ವಿಕೆಟ್ ಸಂಪಾದಿಸಿದ ಚೆಕ್ಕೇರ ಕಾರ್ಯಪ್ಪ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಒಂದು ಓವರ್‌ನಲ್ಲಿ ೫ ವಿಕೆಟ್ ಸಾಧನೆ ಮಾಡಿದ ಮುಕ್ಕಾಟೀರ (ಮಾದಾಪುರ) ತಂಡದ ಆಟಗಾರ ಬೋಪಣ್ಣ ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಬೊಟ್ಟಂಗಡ ಹರೀಶ್ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ ಪಡೆದರು. ಕಳಕಂಡ ತಂಡಕ್ಕೆ ಶಿಸ್ತಿನ ತಂಡ ಪ್ರಶಸ್ತಿ ನೀಡಲಾಯಿತು. ಒಂದೇ ಓವರ್‌ನ ೬ ಬಾಲ್‌ನಲ್ಲಿ ೬ ಸಿಕ್ಸರ್ ಸಿಡಿಸಿದ ಬಲ್ಲಂಡ ನಿಶು ಅವರಿಗೆ ವಿಶೇಷ ಬಹುಮಾನ ನೀಡಲಾಯಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಂಬುಕುತ್ತಿರ ಸಾಗರ್ (೬೫ ರನ್) ಪಡೆದರು. ಭವಿಷ್ಯದ ತಂಡ ಕೀರ್ತಿಗೆ ಐಚಂಡ ಮತ್ತು ಚೊಟ್ಟೆಯಂಡಮಾಡ ತಂಡ ಭಾಜನವಾಯಿತು. ಮೂರನೇ ಸ್ಥಾನ ಪಡೆದ ಚೆಕ್ಕೇರ ತಂಡಕ್ಕೆ ಹಾಗೂ ನಾಲ್ಕನೇ ತಂಡವಾಗಿ ಹೊರಹೊಮ್ಮಿದ ಮುಕ್ಕಾಟೀರ (ಮಾದಾಪುರ) ಬಹುಮಾನ ಸ್ವೀಕರಿಸಿದರು.
೩, ೪ ನೇ ಸ್ಥಾನದ ಫಲಿತಾಂಶ : ಮಾಜಿ ಚಾಂಪಿಯನ್ ಚೆಕ್ಕೇರ ಮೂರನೇ ಸ್ಥಾನ ಅಲಂಕರಿಸಿತು. ಮುಕ್ಕಾಟೀರ (ಮಾದಾಪುರ) ೪ನೇ ತಂಡವಾಗಿ ಹೊರಹೊಮ್ಮಿತು.
೩ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಚೆಕ್ಕೇರ ತಂಡವು ಮುಕ್ಕಾಟೀರ (ಮಾದಾಪುರ) ವನ್ನು ೧೦ ವಿಕೆಟ್ ಗಳಿಂದ ಮಣಿಸಿತು. ಮುಕ್ಕಾಟೀರ ಮೊದಲು ಬ್ಯಾಟ್ ಮಾಡಿ ನಿಗದಿತ ೫ ಒವರ್‌ಗಳಲ್ಲಿ ೫೦ ರನ್ ದಾಖಲಿ ಸಿತು. ಚೆಕ್ಕೇರ ೨.೩ ಒವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ ೫೧ ರನ್ ಸಿಡಿಸಿತು. ಚೆಕ್ಕೇರ ಕಾರ್ಯಪ್ಪ ೩೨ ರನ್ ಬಾರಿಸಿ, ೩ ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮುಕ್ಕಾಟೀರ ಸಂಜು ೨೦ ರನ್ ದಾಖಲಿಸಿದರು.
ಸೆಮಿಫೈನಲ್‌ನಲ್ಲಿ ಬೊಟ್ಟಂಗಡ ತಂಡವು ಚೆಕ್ಕೇರ ವಿರುದ್ದ ೫ ವಿಕೆಟ್‌ಗಳ ಗೆಲುವು ದಾಖಲಿಸಿ ಚೊಚ್ಚಲ ಬಾರಿ ಫೈನಲ್‌ಗೇರಿದ ಸಾಧನೆ ಮಾಡಿತು. ನಿಗದಿತ ೮ ಒವರ್‌ಗಳಲ್ಲಿ ಚೆಕ್ಕೇರ ೮ ವಿಕೆಟ್ (ಮೊದಲ ಪುಟದಿಂದ) ಕಳೆದುಕೊಂಡು ೬೧ ರನ್ ದಾಖಲಿಸಿತು. ಬೊಟ್ಟಂಗಡ ೫ ಚೆಂಡು ಉಳಿದಿರುವಂತೆ ೪ ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಬೊಟ್ಟಂಗಡ ಆಟಗಾರರು ಮಾರಕ ಬೌಲಿಂಗ್ ದಾಳಿ ಮಾಡಿದರು. ಗೌತಮ್ ೩ ಒವರ್ ಎಸೆದು ೯ ರನ್ ನೀಡಿ ಪ್ರಮುಖ ೩ ವಿಕೆಟ್ ಕಬಳಿಸಿದರು. ಬೊಟ್ಟಂಗಡ ಹರೀಶ್ ೩೪ ರನ್ ಹೊಡೆದರು. ಚೆಕ್ಕೇರ ಆಕರ್ಶ್ ೨೫ ರನ್, ಪೂವಣ್ಣ ೨ ವಿಕೆಟ್ ಪಡೆದರು. ಬೊಟ್ಟಂಗಡ ಹರೀಶ್ ಪಂದ್ಯ ಶ್ರೇಷ್ಠ ಬಹುಮಾನ ಪಡೆದರು.
೨ನೇ ಸೆಮಿಯಲ್ಲಿ ತಂಬುಕುತ್ತಿರವು ಮುಕ್ಕಾಟೀರ (ಮಾದಾಪುರ) ವಿರುದ್ದ ೪೭ ರನ್‌ಗಳ ಭರ್ಜರಿ ಗೆಲುವು ಪಡೆಯಿತು. ತಂಬುಕುತ್ತಿರ ೩ ವಿಕೆಟ್ ನಷ್ಟಕ್ಕೆ ೯೮ ರನ್ ಸಂಪಾದಿಸಿತು. ಮುಕ್ಕಾಟೀರ ೮ ವಿಕೆಟ್ ಕಳೆದುಕೊಂಡು ೫೧ ರನ್ ಗಳಿಸಿ ಸೋಲೊಪ್ಪಿಕೊಂಡಿತು. ತಂಬುಕುತ್ತಿರ ಸುಕೇಶ್ ೪೧ ರನ್, ಶರಣ್ ೨ ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮುಕ್ಕಾಟೀರ ಬೋಪಣ್ಣ ೧೧ ರನ್ ಗಳಿಸಿ, ೨ ವಿಕೆಟ್ ಪಡೆದ ಸಾಧನೆ ಮಾಡಿದರು.
ಪ್ರದರ್ಶನ ಪಂದ್ಯ : ಲೆದರ್ ಬಾಲ್ ಕ್ರಿಕೆಟ್ ಪ್ರದರ್ಶನ ಪಂದ್ಯದಲ್ಲಿ ವೀರಾಜಪೇಟೆ ಪ್ರಗತಿ ಕ್ರಿಕೆಟ್ ಅಕಾಡೆಮಿ ತಂಡವು ಪ್ರೆಸಿಡೆಂಟ್ ಇಲೆವೆನ್ ವಿರುದ್ದ ೩ ರನ್‌ಗಳ ರೋಚಕ ಗೆಲುವು ದಾಖಲಿಸಿತು. ಪ್ರಗತಿ ೪ ವಿಕೆಟ್ ನಷ್ಟಕ್ಕೆ ೯೮ ರನ್ ದಾಖಲಿಸಿತು. ಪ್ರೆಸಿಡೆಂಟ್ ಇಲೆವೆನ್ ೬ ವಿಕೆಟ್ ನಷ್ಟಕ್ಕೆ ೯೫ ರನ್ ಗಳಿಸಿತು.
ಬೆಳಕಿನ ಚಿತ್ತಾರ : ಕೊಡವ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಹೊನಲು ಬೆಳಕಿನ ಆಟ ನಡೆಯಿತು. ಸೆಮಿಫೈನಲ್, ೩ ನೇ ಸ್ಥಾನದ ಪಂದ್ಯಗಳು, ಆಟಗಾರರಿಗೆ ಇದು ವಿಶೇಷ ಅನುಭವವಾಯಿತು. ಸ್ಥಳೀಯ ಕ್ರೀಡಾಭಿಮಾನಿಗಳು ಹೆಚ್ಚಾಗಿ ಕಂಡು ಬಂದರು.
ಸನ್ಮಾನ: ಯುಕೋ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕಲಾವಿದ ಕಂಗಾAಡ ಜಾಲಿ ಪೂವಪ್ಪ, ಸಾಮಾಜಿಕ ಕಾರ್ಯಕರ್ತ ಕೇಲೇಟೀರ ದೀಪು ದೇವಯ್ಯ, ವನ್ಯಪ್ರೇಮಿ ಸೋಮೆಯಂಡ ಮಧು ಬೋಪಣ್ಣ, ಡಾ. ಕೋಳೇರ ಬೋಪಣ್ಣ, ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ಪೊರುಕೊಂಡ ಪಿ ಪೆಮ್ಮಯ್ಯ, ಐಲಪಂಡ ಸೋನು ಗಣಪತಿ ಸನ್ಮಾನ ಸ್ವೀಕರಿಸಿದರು.
ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ನೆಲ್ಲಚಂಡ ಯತೀಶ್ ನಾಚಪ್ಪ, ಪೊರುಕೊಂಡ ಸಿನಿಲ್, ಮಡ್ಲಂಡ ದರ್ಶನ್, ಬಲ್ಲಂಡ ರೇನಾ, ಬಲ್ಲಂಡ ದಿಲೀಪ್, ನೂರೇರ ಶರಣ್, ಅಮ್ಮಾಟಂಡ ಶಾಶ್ವಿತ್, ಕೋಚಮಂಡ ರಕ್ಷಿತ್, ಅಜ್ಜೀನಂಡ ಯತಾರ್ಥ್, ಪೊರುಕೊಂಡ ನಿಕಿಲ್, ಮಚ್ಚಾರಂಡ ಅಪ್ಪಣ್ಣ, ಬಳ್ಟಿಕಾಳಂಡ ಸುಜಿತ್, ಟೈಸ್ ಜವಾಬ್ದಾರಿ ನಿಭಾಯಿಸಿದ ಮಾಚಂಗಡ ದರ್ಶನ್, ಕೊಟ್ಟಂಗಡ ಸೂರಜ್, ಕೊಕ್ಕೇಂಗಡ ರಂಜನ್ ಅವರನ್ನು ಗೌರವಿಸಲಾಯಿತು.
ಸಮಾರೋಪ: ಸಮಾರಂಭ ಪೊರುಕೊಂಡ ಕುಟುಂಬದ ಪಟ್ಟೆದಾರ ಜೋಯಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಕುಟುಂಬ ಅಧ್ಯಕ್ಷ ಪೊರುಕೊಂಡ ಬೋಪಣ್ಣ ಮಾತನಾಡಿ, ಕ್ರೀಡಾಭಿಮಾನಿಗಳ ಪ್ರೋತ್ಸಾಹದಿಂದ ನಮ್ಮೆ ಯಶಸ್ವಿ ಸಾಧಿಸಿದೆ. ಕೊಡವ ಒಗ್ಗಟ್ಟು, ಆಚರಣೆಗೆ ಪ್ರೋತ್ಸಾಹ ಅಗತ್ಯ ಎಂದರು. ಹೈಕೋರ್ಟ್ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ ಮಾತನಾಡಿ, ಕ್ರೀಡೆ ಸಂಸ್ಕೃತಿ ಪೋಷಣೆಯ ಭಾಗವಾಗಿದ್ದು, ಆಚಾರ-ವಿಚಾರ ಮುಖ್ಯ ಅಂಶವಾಗಿದೆ ಎಂದರು.
ರಿಪಬ್ಲಿಕ್ ಟಿವಿ ಕಮಿಟಿ ಉಪಾಧ್ಯಕ್ಷ ಚೇರಂಡ ಕಿಶನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕ. ಕಂಡ್ರತAಡ ಸುಬ್ಬಯ್ಯ, ಹಿರಿಯ ವೈದ್ಯ ಡಾ. ಮಾಪಂಗಡ ಬೆಳ್ಯಪ್ಪ, ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಂಞÂಯAಡ ನಿರನ್ ನಾಣಯ್ಯ, ಇದ್ದರು. ಉದ್ಯೋಗ ಮೇಳದಲ್ಲಿ ಉದ್ಯೋಗ ಪೂರಕ ಮಾರ್ಗದರ್ಶನ, ಸಲಹೆ, ನೋಂದಣಿ ಕಾರ್ಯಕ್ರಮ ನಡೆಯಿತು.