ಮಡಿಕೇರಿ, ಮೇ ೨೨: ಸೌತ್ ವೆಸ್ಟರ್ನ್ ರೈಲ್ವೇಸ್ ಮೈಸೂರಿನಲ್ಲಿ ಉಪಮುಖ್ಯ ನಿರೀಕ್ಷಕ (ಡೆಪ್ಯೂಟಿ ಚೀಫ್ ಇನ್ಸ್ಪೆಕ್ಟರ್) ಆಗಿ ಕರ್ತವ್ಯದಲ್ಲಿರುವ ಬೊಳ್ಳಜೀರ ಮಯೂರ್ ಸುಬ್ಬಯ್ಯ ಅವರಿಗೆ ಉತ್ತಮ ಸೇವೆಗಾಗಿ ರೈಲ್ವೆ ಇಲಾಖೆಯಿಂದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಾಜಿ ಅಂತರರಾಷ್ಟಿçÃಯ ಹಾಕಿ ಆಟಗಾರರೂ ಆಗಿರುವ ಮಯೂರ್ ಕಳೆದ ಹಲವು ವರ್ಷಗಳಿಂದ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೨೦೨೦-೨೧ ಹಾಗೂ ೨೦೨೧-೨೨ನೇ ಸಾಲಿನಲ್ಲಿ ಕೋವಿಡ್ ಸಂದರ್ಭದ ನಡುವೆ ಇವರು ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಹುಬ್ಬಳ್ಳಿಯ ಮುಖ್ಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್ ಅವರು ಮಯೂರ್ ಅವರನ್ನು ಗೌರವಿಸಿ ಪ್ರಶಸ್ತಿ ನೀಡಿದರು.

ಮಯೂರ್ ಮೂಲತಃ ಮಾಯಮುಡಿ ಬಾಳಾಜಿಯ ಬೊಳ್ಳಜಿರ ಸಿ. ಸುಬ್ಬಯ್ಯ ಹಾಗೂ ರತಿ ಸುಬ್ಬಯ್ಯ ದಂಪತಿಯ ಪುತ್ರ.