(ವಿಶೇಷ ವರದಿ: ಎನ್.ಎನ್. ದಿನೇಶ್)

*ಗೋಣಿಕೊಪ್ಪ, ಮೇ ೨೨: ಮೂರು ವರ್ಷಗಳು ಕೊರೊನಾ ಮಹಾಮಾರಿಯ ದಿನಗಳಿಗೆ ಆಹುತಿಯಾದ ಬುಡಕಟ್ಟು ಜನರ ಬೇಡು ಹಬ್ಬ ಮೇ ೨೫ ಹಾಗೂ ೨೬ರಂದು ಕಾಡಿನ ಮಕ್ಕಳ ಸಾಂಪ್ರಾದಾಯಕ ದೈವ ಆಚರಣೆಯೊಂದಿಗೆ ನಡೆಯಲಿದೆ.

ಸಾವಿರಾರು ಸಂಖ್ಯೆಯಲ್ಲಿ ಬುಡಕಟ್ಟು ಸಮುದಾಯದವರು ದೇವರಪುರ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದಲ್ಲಿ ಹರಕೆ, ಪೂಜೆ ಸಲ್ಲಿಸುವ ಮೂಲಕ ಹಬ್ಬದ ವಿಶೇಷತೆ ಅನುಭವಿಸಲಿದ್ದಾರೆ. ಕಾಡಿನ ಜನರೊಂದಿಗೆ ಸ್ಥಳಿಯ ಊರಿನವರು ಸಹ ದೇವರಿಗೆ ಹರಕೆ ಹೊತ್ತು ಪೂಜೆ ಸಲ್ಲಿಸುವ ವಾಡಿಕೆಯು ಪ್ರತಿವರ್ಷದಂತೆ ಈ ಬಾರಿಯೂ ನಡೆಯಲಿದೆ. ಹರಕೆ ಹೊತ್ತ ಕಾಡಿನ ಮಕ್ಕಳು ವಿವಿಧ ವೇಷ ಭೂಷಣಗಳನ್ನು ತೊಟ್ಟು ಅಶ್ಲೀಲ ಬೈಗುಳಗಳ ಮೂಲಕ ದೇವರ ನಾಮಜಪವನ್ನು ವಿಶಿಷ್ಟವಾಗಿ ನಡೆಸಲಿದ್ದಾರೆ. ಹಬ್ಬದಂದು ದೇವಾಲಯದಲ್ಲಿ ಸೇರುವ ಭಕ್ತಾಧಿಗಳಾಗಿ ವನವಾಸಿ ಕಲ್ಯಾಣ ವತಿಯಿಂದ ಅನ್ನದಾನವನ್ನು ಏರ್ಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ದೇವರಪುರ ಭದ್ರಕಾಳಿ-ಅಯ್ಯಪ್ಪ ದೇವರ ಉತ್ಸವವನ್ನು ಕುಂಡೆಹಬ್ಬದ ಹೆಸರಿನಲ್ಲಿ ನೂರಾರು ವರ್ಷಗಳಿಂದ ವಿಜೃಂಭಣೆಯಿAದ ಆಚರಿಸಿಕೊಂಡು ಬರಲಾಗುತ್ತಿದೆ. ಹಿಂದೆ ಸಾವಿರಾರು ಸಂಖ್ಯೆಯಲಿದ್ದ ಬುಡಕಟ್ಟು ಸಮುದಾಯ ಮತಾಂತರದ ಬಾಹುಗಳಲ್ಲಿ ಬಂದಿಯಾಗಿ ತಮ್ಮ ಸಾಂಪ್ರಾದಾಯಕ ಆಚರಣೆ, ಸಂಸ್ಕöÈತಿಯನ್ನು ಮರೆತ ಹಿನ್ನೆಲೆ ಹಬ್ಬದ ವೈಬೋಗವೊಂದು ಕ್ಷೀಣಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕೊಡಗಿನಲ್ಲಿ ಬುಡಕಟ್ಟು ಜನರ ಸಂಖ್ಯೆಯು ಅತೀ ವಿರಳವಾಗಿಯೂ ಕಾಣಿಸಿಕೊಳ್ಳುತ್ತಿದೆ. ಬೇಡು ಹಬ್ಬಕ್ಕೆ ಪುನರ್‌ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದ ಕುಟುಂಬಗಳು ಪಿರಿಯಾಪಟ್ಟಣ, ಹುಣಸೂರು, ಹೆಚ್.ಡಿ ಕೋಟೆ ತಾಲೂಕುಗಳಿಂದ ಆಗಮಿಸಿ ತಮ್ಮ ಆಚರಣೆಯ ಸಂಪ್ರದಾಯವನ್ನು ಮುಂದುವರೆಸುತ್ತಿದ್ದಾರೆ.

ದೇವರಪುರದ ಬೇಡು ಹಬ್ಬ ಬುಡಕಟ್ಟು ಜನರಿಗೆ ಅದೊಂದು ಸಂಭ್ರಮ. ಕಾಡು, ಮೇಡುಗಳಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನರು ಎರಡು ದಿನಗಳ ಕಾಲ ಕುಣಿದು ಕುಪ್ಪಳಿಸುತ್ತಾರೆ. ವಿವಿಧ ಬಗೆಯ ವೇಷತೊಟ್ಟ ಗಿರಿಜನರು ಎದುರಿಗೆ ಸಿಕ್ಕಿದವರಿಗೆ ಬಾಯಿಗೆ ಬಂದAತೆ ಬೈಯ್ದು ಅವರ ಹತ್ತಿರ ಹಣ ಬೇಡುತ್ತಾರೆ.

ಆಶ್ಲೀಲ ಶಬ್ಧಗಳಿಂದ ದೇವರ ಸ್ತುತಿ ಜಪಿಸುವ ನೆಪದಲ್ಲಿ ನಿಂದಿಸುತ್ತಾ ಕುಣಿಯುತ್ತಾ, ಆಚರಣೆಯನ್ನು ಪಾರಂಪರಿಕವಾಗಿ ಉಳಿಸಿಕೊಂಡು ಬೆಳೆಸುತ್ತಿದ್ದಾರೆ.

ಹಿನ್ನೆಲೆ ಹಾಗೂ ಹಬ್ಬದ ವಿಶೇಷ

ಕೊಡಗಿನಲ್ಲಿ ಕೆಲವು ಕಾಡುಗಳನ್ನು ವಿವಿಧ ದೇವರ ಹೆಸರಿನಲ್ಲಿ ದೇವರ ಕಾಡೆಂದು ಪರಿಗಣಿಸಿ ಹಿಂದಿನಿAದಲೂ ಈ ಕಾಡಿನಲ್ಲಿ ದೇವರ ಹೆಸರಿನಲ್ಲಿ ಕಾಡು, ಮರಗಳನ್ನು ಸಂರಕ್ಷಿಸುತ್ತಾ ಬರಲಾಗಿವೆ. ಇದಕ್ಕಾಗಿ ಆಯಾಯ ದೇವರ ಕಾಡಿನಲ್ಲಿ ಆಯಾಯ ದೇವರ ವಿವಿಧ ಬೇಡುಹಬ್ಬ (ಬೋಡ್‌ನಮ್ಮೆ) ಮಾಡಿ ದೇವರ ಪೂಜೆ ಮಾಡಿ ಹರಕೆ ಒಪ್ಪಿಸುತ್ತಾರೆ. ಅದರಂತೆ ಆದಿವಾಸಿಗಳಾದ ಬೆಟ್ಟ ಕುರುಬರು (ಬೊಟ್ಟ ಕುರುಬ) ತರಗು ವಕ್ಕ ಎಂಬ ಹೆಸರಿನೊಂದಿಗೆ ಈ ಬೇಡು ಹಬ್ಬದ ಆಚರಣೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ತರಗು ಎಂದರೆ ಗುಡಿಸಲಿಗೆ ಉಪಯೋಗಿಸುವ ಕುರುಚಲು ಗಿಡ.

(ಮೊದಲ ಪುಟದಿಂದ) ಈ ಗಿಡದಿಂದ ಹಬ್ಬಕ್ಕೆ ಮುನ್ನ ದಿನ ದೇವಸ್ಥಾನದ ಆವರಣ ಶುಚಿಗೊಳಿಸುವುದು ಮತ್ತು ಬಿದಿರಿನಿಂದ ತಯಾರಿಸುವ ಕುದುರೆಗೆ ಶೃಂಗಾರ ಮಾಡುವುದು ಈ ತರಗು ವಕ್ಕ ಬೆಟ್ಟ ಕುರುಬರು ಹಬ್ಬಕ್ಕೆ ಮಾಡುವ ಸೇವೆಯಾಗಿದೆ.

ಹಬ್ಬವು (೨೫) ಬುಧವಾರ ಹಾಗೂ (೨೬) ಗುರುವಾರ ಎರಡು ದಿನ ನಡೆಯಲಿದೆ. ಬುಧವಾರ ಪಟ್ಟಣಿ ಗುರುವಾರ ದಿನ ಕುದುರೆ ತೆಗೆಯುವುದು ಎಂದು ಆಚರಿಸಲಾಗುತ್ತದೆ.

ಪಟ್ಟಣಿ: ಪಟ್ಟಣಿ ದಿನದ ಬೆಳಿಗ್ಗೆಯಿಂದ ಹಬ್ಬದ ಕಟ್ಟುಪಾಡಿಗೆ ಒಳಪಡುವ ಊರಿನವರು ಅನ್ನವನ್ನು ಬಿಟ್ಟು ಪಲಹಾರ ಸೇವಿಸುತ್ತಾರೆ. ಹಾಗೇ ಹಬ್ಬ ಪ್ರಾರಂಭವಾದ ೮ ದಿನಗಳಿಂದಲೂ ಮಾಂಸಾಹಾರಗಳನ್ನು ತಿನ್ನದೆ, ಪ್ರಾಣಿ ಹಿಂಸೆ ಮಾಡದೆ ದೇವರ ಕಟ್ಟು ಪಾಲಿಸುತ್ತಾರೆ. ದೇವಸ್ಥಾನದ ಬಳಿ ಇರುವ ಅಂಬಲಕ್ಕೆ (ದೇವರ ಪರಿಕರ ಇಡುವ ಸ್ಥಳ) ಊರಿನವರೆಲ್ಲರು ಮಧ್ಯಾಹ್ನದ ವೇಳೆ ಸೇರಿ ಕಡತಲೆ, ತೂರೆಕೋಲು, ಬೆಳ್ಳಿಯ ಹರಕೆ ವಸ್ತುಗಳಾದ ಕುದುರೆ, ನಾಯಿ, ಮಗು ತೊಟ್ಟಿಲು ಇತ್ಯಾದಿ) ದೈವಿಕ ವಸ್ತುಗಳನ್ನು ಶುದ್ದೀಕರಿಸಿ ಅಯ್ಯಪ್ಪ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಾರೆ. ಈ ದೈವಿಕ ವಸ್ತುಗಳನ್ನು ಹರಕೆ ಒಪ್ಪಿಸಲು ಬಳಸುತ್ತಾರೆ. ಬೇಟೆಕುರುಬ ಸ್ಥಾನಕ್ಕೆ ಮಣ್ಣಿನಿಂದ ಮಾಡಿದ ಬೇಟೆ ನಾಯಿಯ ಹರಕೆ ಸಲ್ಲಿಸಿ ಭದ್ರಕಾಳಿ ದೇವಸ್ಥಾನಕ್ಕೆ ಒಡ್ಡೋಲಗದೊಂದಿಗೆ ತೆರಳಿ ಭದ್ರಕಾಳಿ ದೇವಿಗೆ ಪೂಜೆ ಸಲ್ಲಿಸಿ ಕುರುಂಬ ದೇವರ ಪ್ರೀತಿಗೆ ಪಾತ್ರವಾದ ಮಣ್ಣಿನಿಂದ ಮಾಡಿದ ನಾಯಿಯನ್ನು ಅರ್ಪಿಸಲಾಗುತ್ತದೆ.

ಹರಕೆ ಹೊತ್ತ ಯುವಕರಲ್ಲಿ ಆಧ್ಯತೆ ಮೇರೆಗೆ ದೇವರ ಅನುವಾದದೊಂದಿಗೆ ಇಬ್ಬರು ಯುವಕರನ್ನು ಕುದುರೆ ತೆಗೆಯುವುದಕ್ಕೆ ಆರಿಸಿ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿ ಹಣ್ಣುಕಾಯಿ ಪಡೆದು ದೇವಸ್ಥಾನದಲ್ಲಿ ಭಕ್ತರು ಹರಕೆ ನೀಡಿದ ಅಕ್ಕಿ, ಧಾನ್ಯ, ತರಕಾರಿಗಳಿಂದ ಮಾಡಿದ ಅಡುಗೆಯನ್ನು ಊಟ ಮಾಡುತ್ತಾರೆ. ಅಲ್ಲಿಗೆ ಕಳೆದ ೮ ದಿನಗಳಿಂದ ತ್ಯಜಿಸಿದ್ದ ಮಾಂಸಾಹಾರವನ್ನು ಸೇವಿಸಬಹುದು ಎಂದು ಅರ್ಥ. ಹಾಗೂ ಬೇಟೆಯನ್ನು ಕೂಡ ಅಂದಿನಿAದ ಪ್ರಾರಂಭಿಸಬಹುದು ಎಂಬುದಕ್ಕೆ ಸಂಕೇತವಾಗಿ ದೇವತಾ ಕಾರ್ಯದ ಮುಂದಾಳತ್ವ ವಹಿಸುವ ಕುಟುಂಬದ ಹಿರಿಯರು ಊರೇ... ನಾಡೇ... ತಕ್ಕರೇ... ಬಿಲ್ಲ್ ಬುಡಡಾ... ಎಂದು ೩ ಬಾರಿ ಕೇಳಿ ಬಿದಿರಿನಿಂದ ಮಾಡಿದ ಬಾಣವನ್ನು ಬಿಡುತ್ತಾರೆ. ಆ ಬಳಿಕ ಭಕ್ತರು ಮನೆ-ಮನೆಗಳಿಗೆ ತೆರಳಿ ವಿಶ್ರಾಂತಿ ಪಡೆಯುತ್ತಾರೆ.

ಕುದುರೆ ತೆಗೆಯುವುದು: ಮರುದಿನ (ಗುರುವಾರ) ಬೆಳಿಗ್ಗೆಯಿಂದಲೇ ವೇಷಧಾರಿ ಭಕ್ತರು ಊರಿನ ಮನೆ-ಮನೆ ಹಾಗೂ ಪಟ್ಟಣಗಳಲ್ಲಿ ಬೇಡುತ್ತಾ ದೇವರಿಗೆ ಕಾಣಿಕೆ ಪಡೆಯುತ್ತಾರೆ. ಹಿಂದಿನ ಸಂಸ್ಕೃತಿಯAತೆ ಊರಿನೊಳಗೆ ವಾಸಿಸುವ ಹರಕೆ ಹೊತ್ತ ಭಕ್ತರು ಮತ್ತು ಜೇನು ಕುರುಬರು ಮಾತ್ರ ವೇಷಧಾರಿಗಳಾಗಿ ಅಯ್ಯಪ್ಪ, ಭದ್ರಕಾಳಿ, ಬೋಟೆ ಕರುಂಬ ದೇವರನ್ನು ಹೊಗಳುತ್ತಾ ಕಾಣಿಕೆ ಬೇಡುತ್ತಾರೆ. ಮಧ್ಯಾಹ್ನ ೨ ಗಂಟೆಯ ವೇಳೆಗೆ ಎಲ್ಲಾ ವೇಷಧಾರಿ ಭಕ್ತರು ಅಯ್ಯಪ್ಪ ಭದ್ರಕಾಳಿ, ಬೇಟೆ ಕರುಂಬ ದೇವಸ್ಥಾನಕ್ಕೆ ಬಂದು ಆವರಣದಲ್ಲಿ ದೇವರನ್ನು ಹೊಗಳುತ್ತಾ ಕುಣಿದು ಹರಕೆ ಸಲ್ಲಿಸುತ್ತಾರೆ. ಸರಿಯಾಗಿ ೨ ಗಂಟೆಗೆ ಕುದುರೆ ತೆಗೆಯಲು ಹರಕೆ ಹೊತ್ತ ಇಬ್ಬರು ಯುವ ಭಕ್ತರು ಕೊಡವ ಸಂಪ್ರದಾಯದ ಮಂಡೆ ತುಣಿ ಹಾಕಿ ತರಗು ವಕ್ಕದ ಬೇಟೆ ಕುರುಬರು ಸಂಗ್ರಹಿಸಿದ ಬಿದಿರಿನ ಕುದುರೆಯನ್ನು ಊರಿನ ಮುಖ್ಯಸ್ಥರು ಹಾಗೂ ಹಿರಿಯರ ಆರ್ಶೀವಾದದೊಂದಿಗೆ ಅಂಬಲದಲ್ಲಿ ಪೂಜೆ ಸಲ್ಲಿಸಿ ಭಂಡಾರ ಪೆಟ್ಟಿಗೆ ಹಾಗೂ ಪಣಿಕರು ತೆಗೆಯುವ ಮೊಗದೊಂದಿಗೆ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸುತ್ತಾರೆ.

ಭದ್ರಕಾಳಿ ದೇವರ ಮೊಗಕ್ಕೆ ಮತ್ತು ಕುದುರೆಗೆ ಪೂಜೆ ಸಲ್ಲಿಸಿದ ನಂತರ ಮೊಗದೊಂದಿಗೆ ಒಡ್ಡೋಲಗ ಸಮೇತ ದೇವರ ಕಾಡಿನಲ್ಲಿ ಭದ್ರಕಾಳಿ ದೇವಸ್ಥಾನಕ್ಕೆ ಪೂಜಾರಿ, ತಕ್ಕ ಮುಖ್ಯಸ್ಥರು, ಊರಿನ ಹಿರಿಯರು ಹಾಗೂ ಭಕ್ತ ವೇಷಧಾರಿಗಳೊಂದಿಗೆ ಗಂಡಸರು ಮಾತ್ರ ಭದ್ರಕಾಳಿ ದೇವಸ್ಥಾನಕ್ಕೆ ತೆರಳುತ್ತಾರೆ. ಆಹಾರ ಹರಕೆ ಬಳಿಕ ಅಯ್ಯಪ್ಪ ದೇವಸ್ಥಾನಕ್ಕೆ ಬಂದು ಭಕ್ತರ ಹರಕೆ, ಕಾಣಿಕೆ, ಭಂಡಾರದೊAದಿಗೆ ಅಂಬಲಕ್ಕೆ ತೆರಳಿ ಪೂಜಾ ಪರಿಕರಗಳನ್ನು ಅಲ್ಲಿಟ್ಟು ಭದ್ರಕಾಳಿ ದೇವರ ಮೊಗಕ್ಕೆ ಮೊಗ ಪೂಜೆ ಸಲ್ಲಿಸುವುದರೊಂದಿಗೆ ಎರಡು ದಿನದ ಬೇಡುಹಬ್ಬದ ವಿವರಣೆಯನ್ನು ಮೊಗ ಪಾಟ್‌ನೊಂದಿಗೆ ದೇವರಿಗೆ ಒಪ್ಪಿಸುವ ಮೂಲಕ ಹಬ್ಬವು ಮುಗಿಯುತ್ತದೆ.

ಈ ಬೇಡು ಹಬ್ಬವನ್ನು ಮುಖ್ಯವಾಗಿ ಸಣ್ಣುವಂಡ ಕುಟುಂಬಸ್ಥರು ಮುಖ್ಯಸ್ಥರಾಗಿ ನಡೆಸುತ್ತಾ ಬರುತ್ತಿದ್ದಾರೆ. ಈ ಕುಟುಂಬಸ್ಥರಿಗೆ ಊರಿನ ಇತರ ಕುಟುಂಬದವರಾದ ಕಳ್ಳಿಚಂಡ, ಮನೆಯಪಂಡ, ಚಕ್ಕೇರ, ಅಜ್ಜಿನಿಕಂಡ, ಕಂಜಿತAಡ ಕುಟುಂಬಸ್ಥರು ಸಹಕಾರ ನೀಡುತ್ತಾರೆ.