ಕಣಿವೆ, ಮೇ ೨೨: ಕುಶಾಲನಗರವನ್ನು ಹೊಸ ತಾಲೂಕಾಗಿ ಸರ್ಕಾರ ಘೋಷಿಸಿ ಎರಡು ವರ್ಷ ಕಳೆದರೂ ಕೂಡ, ಹೊಸ ತಾಲೂಕು ಕಚೇರಿ ಉದ್ಘಾಟನೆಗೊಂಡು ವರ್ಷ ಕಳೆದರೂ ಕೂಡ ಇದೂವರೆಗೂ ನೂತನ ತಾಲೂಕು ಕಚೇರಿಗೆಂದೇ ಪ್ರತ್ಯೇಕವಾದ ಸ್ಥಳ ಗೊತ್ತುಪಡಿಸ ದಿರುವುದು ದೌರ್ಭಾಗ್ಯವೇ ಸರಿ. ಕಂದಾಯ ಇಲಾಖೆಯ ಅಧಿಕಾರಿ ಗಳು ಕಳೆದ ಒಂದು ವರ್ಷದಿಂದಲೂ ತಾಲೂಕು ಕಚೇರಿ ಪ್ರಾಂಗಣ ನಿರ್ಮಾಣಕ್ಕೆಂದು ಜಾಗವನ್ನು ಹುಡುಕಾಡಿದರೂ ಕೂಡ ಸೂಕ್ತವಾದ ಜಾಗ ಇದೂವರೆಗೂ ದೊರೆತಿಲ್ಲ.
ಇದರಿಂದಾಗಿ ತಾಲೂಕಿನ ಜನತೆ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಿರಾಸಕ್ತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಅಂದರೆ ಡಿಸೆಂಬರ್ ೨೦೨೦ ರಂದು ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಕುಶಾಲನಗರ ತಾಲೂಕು ಘೋಷಿತಗೊಂಡಿತ್ತು. ಹಾಗೆಯೇ ಕಳೆದ ಒಂದು ವರ್ಷದ ಹಿಂದೆ ಕಂದಾಯ ಮಂತ್ರಿ ಆರ್. ಅಶೋಕ್ ಕುಶಾಲನಗರಕ್ಕೆ ಆಗಮಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ತಾತ್ಕಾಲಿಕವಾಗಿ ತಾಲೂಕಿನ ನೂತನ ಕಚೇರಿಯನ್ನು ಉದ್ಘಾಟಿಸಿದ್ದರು.
ಆದರೆ ಇದೂವರೆಗೂ ಯಾವ ಶಾಪವೋ ಏನೋ...? ಸೂಕ್ತವಾದ ಸ್ಥಳಾವಕಾಶವೇ ಸಿಗುತ್ತಿಲ್ಲ.
ಕಿಷ್ಕಿಂದೆಯ ಕಟ್ಟಡದಲ್ಲಿ ತಾಲೂಕು ಕಚೇರಿ
ಕುಶಾಲನಗರ ತಾಲೂಕಿನ ತಹಶೀಲ್ದಾರ್ ಕಚೇರಿ ಸದ್ಯಕ್ಕೆ ಕುಶಾಲನಗರ ಪಟ್ಟಣದ ನಾಢ ಕಚೇರಿಯೊಳಗೆಯೇ ನಡೆಯುತ್ತಿದೆ. ಅಂದರೆ ಮೊದಲೇ ಕಿಷ್ಕಿಂದೆಯAತಿ ರುವ ಈ ಜಾಗದಲ್ಲಿ ನಾಡ ಕಚೇರಿ ಸಿಬ್ಬಂದಿಗಳು ಹಾಗೂ ತಾಲೂಕು ತಹಶೀಲ್ದಾರ್ ಹಾಗೂ ಸಿಬ್ಬಂದಿಗಳು ಇಕ್ಕಟ್ಟಿನ ಜಾಗದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.
ನೂತನ ತಾಲೂಕು ಕಚೇರಿ ಪ್ರಾಂಗಣ ನಿರ್ಮಾಣಕ್ಕೆಂದು ಕುಶಾಲನಗರದ ಹೌಸಿಂಗ್ ಬೋರ್ಡ್ ಕಾಲೋನಿ ವ್ಯಾಪ್ತಿಯಲ್ಲಿರುವ ಕಾವೇರಿ ನೀರಾವರಿ ನಿಗಮದ ಅಧೀನದಲ್ಲಿರುವ ವಿಶಾಲ ಜಾಗದ ಪೈಕಿ ೧.೩೦ ಎಕರೆ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ರಾಜಕೀಯದ ಇಚ್ಛಾಶಕ್ತಿಯ ಕೊರತೆಯಿಂದ ಈ ಜಾಗದ ಸಂಬAಧಿತ ಕಡತ ವರ್ಷ ಕಳೆದರೂ ನಿಗಮದ ಕಚೇರಿಯಿಂದ ಅಲುಗಾಡಿಲ್ಲ ಎನ್ನಲಾಗಿದೆ.
ಅನಾನುಕೂಲವೂ ಹೌದು
ಒಂದು ವೇಳೆ ಕಾವೇರಿ ನೀರಾವರಿ ನಿಗಮದವರು ಜಾಗ ಕೊಟ್ಟರೂ ಕೂಡ ಕುಶಾಲನಗರ ಪಟ್ಟಣದ ಎತ್ತರದ ಪ್ರದೇಶದಲ್ಲಿರುವ ಈ ಜಾಗಕ್ಕೆ ವಯೋವೃದ್ಧರು, ಮಹಿಳೆಯರು ಹಾಗೂ ಮಕ್ಕಳು ನಡೆದು ಸಾಗಲು ತ್ರಾಸವಾಗುವ ಸಂಭವವಿದೆ. ಏಕೆಂದರೆ ಏರಿಳಿಕೆಯ ಕಡಿದಾದ ಈ ರಸ್ತೆಯಲ್ಲಿ ತಿರುಗಾಡು ವುದೇ ಕಷ್ಟ. ಅಂತಹುದ್ದರಲ್ಲಿ ತಾಲೂಕು ಕಚೇರಿ ಆದಲ್ಲಿ ಸಾರ್ವಜನಿಕರು ಆಗಿಂದಾಗ್ಗೆ ಕಚೇರಿಗೆ ಎಡತಾಕಲು ಅನಾನು ಕೂಲವೇ ಹೆಚ್ಚಾಗಲಿದೆ. ಆದ್ದರಿಂದ ಅಲ್ಲಿಗಿಂತ ಪಟ್ಟಣದ ಆಸುಪಾಸಿನಲ್ಲಿ ಅಥವಾ ನೂತನ ಕಚೇರಿ ನಿರ್ಮಾಣಗೊಂಡರೆ ಅನುಕೂಲ ಎಂಬುದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಟ್ಟಡ್ಕ ವಿಶ್ವ, ಏಳನೇ ಹೊಸಕೋಟೆಯ ಅಬ್ದುಲ್ ರಜಾಕ್, ಎ.ಪಿ. ರಮೇಶ್ ಮತ್ತಿತರರ ಅಭಿಪ್ರಾಯ.
ನಾಡ ಕಚೇರಿ ಬಳಿಯೇ ನೂತನ ಕಟ್ಟಡ ನಿರ್ಮಾಣಗೊಳ್ಳಲಿ
ಕುಶಾಲನಗರ ತಾಲೂಕು ಕಚೇರಿಯನ್ನು ಹಾಲಿ ಈಗ ಇರುವ ನಾಡÀ ಕಚೇರಿ ಬಳಿ ಇರುವ ನಾಡÀ ಕಚೇರಿಯ (ಮೊದಲ ಪುಟದಿಂದ) ಹಳೆಯ ಕಟ್ಟಡಗಳ, ಉಪತಹಶೀಲ್ದಾರರ ವಸತಿ ಗೃಹ, ಟ್ರೆಜರಿ ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹಗಳನ್ನು ತೆರವುಗೊಳಿಸಿ ಅಲ್ಲಿ ವಿಶಾಲವಾದ ಸುಸಜ್ಜಿತ ಕಟ್ಟಡ ಕಟ್ಟಿದರೆ ಭವಿಷ್ಯದಲ್ಲಿ ಉತ್ತಮ ಕಚೇರಿಯಾಗಲಿದೆ. ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿ ಬಹು ಮಹಡಿ ಕಟ್ಟಡವನ್ನು ಕಟ್ಟಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ದೂರದ ಊರುಗಳಿಂದ ತಾಲೂಕು ಕಚೇರಿಗೆಂದು ಬರುವ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರ ಹಣ ಹಾಗೂ ಸಮಯ ಎಲ್ಲವೂ ಉಳಿತಾಯವಾಗುತ್ತದೆ ಎಂಬುದು ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ವಿ.ಎಸ್. ಆನಂದಕುಮಾರ್ ಹಾಗೂ ಬೈಚನಹಳ್ಳಿ ಜಗದೀಶ್ ಅವರ ಅನಿಸಿಕೆ.
ಒಂದೇ ಸೂರಿನಡಿ ಇಲಾಖೆಗಳು
ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಈಗಾಗಲೇ ನಾಡ ಕಚೇರಿ, ಖಾಜನೆ, ಸರ್ಕಾರಿ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಪೋಲೀಸ್ ಠಾಣೆ, ವೃತ್ತ ನಿರೀಕ್ಷಕರು ಹಾಗೂ ಡಿವೈಎಸ್ಪಿ ಕಚೇರಿಗಳು ಇರುವುದರಿಂದ ತಾಲೂಕು ಕಚೇರಿ ಸಮುಚ್ಛಯವೂ ಆದರೆ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಹಾಗಾಗಿ ಶಾಸಕರಾದ ಅಪ್ಪಚ್ಚು ರಂಜನ್ ಈ ಬಗ್ಗೆ ದೂರದೃಷ್ಟಿ ಹರಿಸಬೇಕಿದೆ. ಕುಶಾಲನಗರ ಪಟ್ಟಣದ ಪ್ರಮುಖರು ಹಾಗೂ ತಾಲೂಕು ಹೋರಾಟ ಸಮಿತಿಯ ಪ್ರಮುಖರನ್ನು ಒಳಗೊಂಡು ಚರ್ಚೆ ನಡೆಸಿ ಸೂಕ್ತ ಜಾಗದಲ್ಲಿ ಕಚೇರಿ ಪ್ರಾಂಗಣ ನಿರ್ಮಿಸಬೇಕಿದೆ.
ಏಕೆಂದರೆ ಕುಶಾಲನಗರ ನಾಡÀ ಕಚೇರಿ ಬಳಿ ಕಂದಾಯ ಇಲಾಖೆಗೆ ಸೇರಿದ ೪೪ ಸೆಂಟು ಜಾಗ ಇರುವುದರಿಂದ ಸ್ವಂತ ಕಟ್ಟಡ ಕಟ್ಟುವಷ್ಟು ಸ್ಥಳಾವಕಾಶ ಇರುವುದರಿಂದ ಸಂಬAಧಪಟ್ಟ ಅಧಿಕಾರಿಗಳು ಕೂಡ ಗಮನಹರಿಸಬೇಕಿದೆ.
ನೂತನ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಇದೀಗ ಕುಶಾಲನಗರ ಹಾಗೂ ಸುಂಟಿಕೊಪ್ಪ ಎಂಬ ಎರಡು ಹೋಬಳಿಗಳಿವೆ. ಈ ಪೈಕಿ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ೫೬ ಗ್ರಾಮಗಳಿದ್ದರೆ, ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ೨೦ ಗ್ರಾಮಗಳಿದ್ದು ಅಲ್ಲಿನ ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ದಿನವೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಗಮಿಸುವ ಹಿನ್ನೆಲೆಯಲ್ಲಿ ಈಗ ಇರುವ ಹೋಬಳಿ ಕಚೇರಿ ಜಾಗ ತೀರಾ ಕಿಷ್ಕಿಂದೆಯಾಗಿದೆ. ಆದ್ದರಿಂದ ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗ ಸೂಕ್ತ ಇಚ್ಛಾಶಕ್ತಿ ಪ್ರದರ್ಶಿಸುವ ಮೂಲಕ ಅತ್ಯಂತ ಶೀಘ್ರವಾಗಿ ಕುಶಾಲನಗರ ತಾಲೂಕು ಆಡಳಿತ ಸೌಧ ಕಟ್ಟುವರೇ ಕಾದು ನೋಡಬೇಕಿದೆ. (ವಿಶೇಷ ವರದಿ : ಕೆ.ಎಸ್. ಮೂರ್ತಿ)