ಮಡಿಕೇರಿ, ಮೇ. ೨೧: ಮಹಿಳೆಯರಿಗೆ ಭಯಮುಕ್ತ ಕರ್ನಾಟಕ ಎಂಬ ಸಂದೇಶದೊAದಿಗೆ ರಾಜ್ಯವ್ಯಾಪಿ ಬೈಕ್‌ಗಳಲ್ಲಿ ಯಾತ್ರೆ ಕೈಗೊಂಡಿರುವ ನಾಲ್ವರು ಮಹಿಳಾ ಬೈಕ್ ಸವಾರರಿಗೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಸ್ವಾಗತ ಕೋರಲಾಯಿತು.

ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೈಕ್ ಸವಾರರಾದ ಬೆಂಗಳೂರಿನ ರಾಜಲಕ್ಷಿö್ಮÃ, ಅನಿತಾ ನವೀನ್, ಸ್ವಾತಿ ಎನ್. ಮತ್ತು ಬಳ್ಳಾರಿಯ ಕೀರ್ತಿನಿ ಅವರಿಗೆ ಸ್ವಾಗತ ಕೋರಲಾಯಿತು. ರೋಟರಿ ಜಿಲ್ಲಾ ರಾಜ್ಯಪಾಲ ರವೀಂದ್ರಭಟ್ ಮಹಿಳಾ ಸವಾರರನ್ನು ರೋಟರಿ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ಮಹಿಳಾ ಬೈಕ್ ಸವಾರರಾದ ರಾಜಲಕ್ಷಿö್ಮ, ಕೀರ್ತಿನಿ, ಅನಿತಾ ಮತ್ತು ಸ್ವಾತಿ, ಕರ್ನಾಟಕದಲ್ಲಿ ಮಹಿಳೆಯರು ಭಯಮುಕ್ತರಾಗಿ ಸಂಚರಿಸುವAತಾಗಬೇಕು. ಮಹಿಳೆಯರು ಸ್ವಾಭಿಮಾನಿ ಮತ್ತು ಸ್ವಾವಲಂಬಿಗಳಾಗಬೇಕೆAಬ ಸಂದೇಶದೊAದಿಗೆ ರಾಜ್ಯದ ೩೦ ಜಿಲ್ಲೆಗಳನ್ನು ಒಳಗೊಂಡAತೆ ೩೦ ದಿನಗಳಲ್ಲಿ ೩೫೦೦ ಕಿಲೋಮೀಟರ್‌ಗಳನ್ನು ತಾವು ಬೈಕ್‌ನಲ್ಲಿ ಕ್ರಮಿಸಲಿದ್ದೇವೆ, ಈ ಉದ್ದೇಶಕ್ಕೆ ಎಲ್ಲೆಡೆ ಉತ್ತಮ ಸ್ಪಂದನ ದೊರಕಿದೆ ಎಂದರು. ಮಹಿಳೆಯರ ಆರೋಗ್ಯ, ಸಮಾಜದಲ್ಲಿ ಮಹಿಳೆಯರ ಮಹತ್ವದ ಪಾತ್ರದ ಬಗ್ಗೆಯೂ ಈ ಬೈಕ್ ಯಾತ್ರೆಯಲ್ಲಿ ತಾವುಗಳು ಶಾಲಾ-ಕಾಲೇಜುಗಳಿಗೆ ತೆರಳಿ ಮಾಹಿತಿ ನೀಡುತ್ತಿರುವುದಾಗಿಯೂ ಮಹಿಳಾ ಬೈಕ್ ಸವಾರರು ಮಾಹಿತಿ ನೀಡಿದರು.

ಮಹಿಳೆಯರ ಈ ಸಂದೇಶದ ಬಗ್ಗೆ ಶ್ಲಾಘಿಸಿದ ರೋಟರಿ ರಾಜ್ಯಪಾಲ ರವೀಂದ್ರಭಟ್, ಒಂದು ಉತ್ತಮ ಉದ್ದೇಶದೊಂದಿಗೆ ಕರ್ನಾಟಕದಾದ್ಯಂತ ಬೈಕ್ ಯಾತ್ರೆ ಕೈಗೊಂಡಿರುವ ಮಹಿಳೆಯರು ಇತರರಿಗೆ ಈ ಮೂಲಕ ಮಾದರಿಯಾಗಿದ್ದಾರೆ. ಇದೊಂದು ಸವಾಲಿನ ಯಾತ್ರೆ. ಕಠಿಣ ಪರಿಸ್ಥಿತಿಯನ್ನು ಛಲದಿಂದ ಎದುರಿಸಿ ಬೈಕ್‌ನಲ್ಲಿ ೩೦ ದಿನಗಳ ಕಾಲ ಮಹಿಳೆಯರ ಯೋಗಕ್ಷೇಮದ ಸಂದೇಶದೊAದಿಗೆ ಇವರು ತೆರಳುತ್ತಿರುವುದು ಶ್ಲಾಘನೀಯ ಎಂದರು.

ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಅನಂತಶಯನ, ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ವಲಯ ಕಾರ್ಯದರ್ಶಿ ಎಚ್.ಎಸ್. ವಸಂತ ಕುಮಾರ್, ವಲಯ ಸೇನಾನಿ ಜಗದೀಶ್ ಪ್ರಶಾಂತ್, ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾಪೂವಯ್ಯ, ಕಾರ್ಯದರ್ಶಿ ಪಿ.ಆರ್. ರಾಜೇಶ್, ಮುಂದಿನ ಸಾಲಿನ ಅಧ್ಯಕ್ಷ ಪ್ರಸಾದ್ ಗೌಡ, ಮಡಿಕೇರಿ ನಗರಸಭೆಯ ಪೌರಾಯುಕ್ತ ರಾಮದಾಸ್, ಮಿಸ್ಟಿ ಹಿಲ್ಸ್ ಸದಸ್ಯರು ಪಾಲ್ಗೊಂಡಿದ್ದರು.