ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಮೇ ೨೦: ಕೊಡಗಿನ ಗಿರಿಜನರು ಬಹುತೇಕ ಅರಣ್ಯದ ಅಂಚಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಕಾಡಿನ ಪರಿಸರಕ್ಕೆ ಹೊಂದಿಕೊAಡ ಇವರು ಕಾಡನ್ನು ಹಾಗೂ ಅಲ್ಲಿಯ ಪ್ರಾಣಿ ಪಕ್ಷಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಇದರಿಂದ ಸಾವಿರಾರು ಎಕರೆ ಅರಣ್ಯ ಪ್ರದೇಶವು ಇಂದಿಗೂ ಅಚ್ಚ ಹಸಿರಾಗಿ ಉಳಿಯಲು ಮೂಲ ಕಾರಣರಾಗಿದ್ದಾರೆ.
ಅರಣ್ಯದ ಅಂಚಿನಲ್ಲಿ ಹಾಗೂ ಮೀಸಲು ಅರಣ್ಯದಲ್ಲಿ ವಾಸವಿದ್ದ ಗಿರಿಜನರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ೨೦೦೬ರಲ್ಲಿ ಅರಣ್ಯ ಹಕ್ಕು ಮಸೂದೆಯನ್ನು ಜಾರಿಗೊಳಿಸಿ ಗಿರಿಜನರಿಗೆ ತಾವಿದ್ದ ಪ್ರದೇಶದಲ್ಲಿ ಭೂಮಿಗಳನ್ನು ನೀಡುವ ಮೂಲಕ ಇವರಿಗೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕು ಪತ್ರವನ್ನು ವಿತರಿಸಲಾಗಿತ್ತು. ಹಕ್ಕುಪತ್ರ ಹೊಂದಿದ ಗಿರಿಜನರು ತಮ್ಮ ಕೃಷಿ ಜಮೀನಿನ ಮಾಲೀಕರಾಗಿ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ವಿಪರ್ಯಾಸವೆAದರೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕುಪತ್ರ ಪಡೆದ ಸಾವಿರಾರು ಕುಟುಂಬಗಳಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಇತರ ಇಲಾಖೆ ವತಿಯಿಂದ ಸಿಗುವ ಕೃಷಿ ಚಟುವಟಿಕೆಗೆ ಬೇಕಾದ ಭತ್ತ, ಗೊಬ್ಬರ, ಸಹಾಯಧನ, ಇತ್ಯಾದಿ ಸವಲತ್ತುಗಳಿಂದ ವಂಚಿತರಾಗುತ್ತಿದ್ದರು.
ಈ ಬಗ್ಗೆ ವಿವಿಧ ಇಲಾಖೆಗಳ ಯೋಜನೆಯ ಪ್ರಯೋಜನವನ್ನು ಹಕ್ಕುಪತ್ರ ಪಡೆದ ಫಲಾನುಭವಿಗೆ ಆರ್‌ಟಿಸಿ ಹೊಂದಿದ ಫಲಾನುಭವಿಗಳು ಕಲಂ ನಂಬರ್ ೯ರಲ್ಲಿ ನಮೂದಾಗಿದ್ದಲ್ಲಿ ಮಾತ್ರ ಯೋಜನೆಯ ಪ್ರಯೋಜನವನ್ನು ನೀಡಲು ಅವಕಾಶವಿದೆ ಎಂಬ ನಿಯಮ ಇವರನ್ನು ಸವಲತ್ತುಗಳಿಂದ ವಂಚಿತರಾಗುವAತೆ ಮಾಡಿತ್ತು.
ವೀರಾಜಪೇಟೆ ತಾಲೂಕಿನ ವಿವಿಧ ಭಾಗದಲ್ಲಿ ೧೩೪೪ ಗಿರಿಜನರು ಅರಣ್ಯ ಹಕ್ಕುಪತ್ರ ಪಡೆದಿದ್ದಾರೆ. ಇದರಲ್ಲಿ ೯೪೪ ಗಿರಿಜನರಿಗೆ ಭೂ ಸಾಗುವಳಿ ಹಕ್ಕು (ಆರ್‌ಟಿಸಿ) ಮಂಜೂರಾಗಿದೆ. ಆದರೆ ಭೂ ಸಾಗುವಳಿ ಹಕ್ಕು ಪಡೆದಿರುವ ಗಿರಿಜನ ರೈತರ ಹೆಸರುಗಳು ಆರ್‌ಟಿಸಿಯಲ್ಲಿ ಕಾಲಂ ನಂ. ೯ರ ಬದಲಾಗಿ ೧೧ರಲ್ಲಿ ನಮೂದಿಸಲಾಗಿದೆ. ಇದರಿಂದ ವಿವಿಧ ಇಲಾಖೆಯ ಕೃಷಿ ಚಟುವಟಿಕೆಗಳ ಯೋಜನೆಗಳು, ಸಹಾಯಧನಗಳು ಇವರಿಗೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಗಿರಿಜನರ ಕೃಷಿ ಚಟುವಟಿಕೆಗಳಿಗೆ ಸಹಜವಾಗಿಯೇ ಹಿನ್ನಡೆಯಾಗುತ್ತಿದ್ದವು. ಗಿರಿಜನರಿಗೆ ಕೃಷಿ ಭೂಮಿ ಇದ್ದರೂ ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ಇಲಾಖೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.
(ಮೊದಲ ಪುಟದಿಂದ) ಗಿರಿಜನರ ಕೃಷಿ ಭೂಮಿಗಳನ್ನು ಉತ್ತಮ ಪಡಿಸಲು ಸಾಧ್ಯವಾಗದಿರುವುದನ್ನು ಹಾಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರಣ್ಯ ಹಕ್ಕು ಕಾಯ್ದೆಯಡಿ ಭೂ ಸಾಗುವಳಿ ಪಡೆದಿರುವ ರೈತರಿಗೆ ಸೌಲಭ್ಯ ಪಡೆಯಲು ಸಮಸ್ಯೆ ಎದುರಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಈ ಬಗ್ಗೆ ಇಲಾಖಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರು. ಇತರ ಆರ್‌ಟಿಸಿ ಹೊಂದಿದ ಫಲಾನುಭವಿಗಳಿಗೆ ಸಿಗುವ ಎಲ್ಲಾ ಯೋಜನೆಗಳ ಪ್ರಯೋಜನಗಳು ಹಕ್ಕುಪತ್ರ ಹೊಂದಿದ ಗಿರಿಜನರಿಗೂ ದೊರಕುವಂತೆ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು.
ಶಾಸಕರ ಸೂಚನೆ ಮೇರೆ ವೀರಾಜಪೇಟೆ ತಾಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಿ.ಜಿ. ಗುರುಶಾಂತಪ್ಪ ಈ ಬಗ್ಗೆ ೨೪.೭.೨೦೨೦ ರಂದು ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿಗಳ ಮೂಲಕ ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣಾ ಇಲಾಖೆ ಬೆಂಗಳೂರು ಇವರಿಗೆ ಸಮಗ್ರ ಪತ್ರ ಬರೆದು ಗಿರಿಜನ ಕುಟುಂಬಗಳು ಕೃಷಿ ಚಟುವಟಿಕೆಗಳಿಗೆ ಬೇಕಾದ ಸವಲತ್ತುಗಳನ್ನು ನೀಡಲು ಗಮನ ಸೆಳೆದಿದ್ದರು.
ಬರೆದ ಪತ್ರವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು ಗಂಭೀರವಾಗಿ ಪರಿಗಣಿಸಿ, ಸಾಂವಿಧಾನಿಕ ಮತ್ತು ಶಾಸನಬದ್ದ ಸುರಕ್ಷತೆಗಳ ಹೊರತಾಗಿಯೂ, ವಿವಿಧ ಕಾರಣಗಳಿಂದಾಗಿ ಬುಡಕಟ್ಟು ಜನರು ವೇಗವಾಗಿ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಮೌಲ್ಯ ಮಾಪನಗಳು ತೋರಿಸಿದ ಹಿನ್ನೆಲೆಯಲ್ಲಿ ಬುಡಕಟ್ಟು ಜನರು ಭೂಮಿಯನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲು ಮತ್ತು ಅರ್ಹ ಹಕ್ಕುದಾರರು ಮಾತ್ರ ಹಕ್ಕು ಪಡೆಯುವುದನ್ನು ಖಚಿತ ಪಡಿಸಿಕೊಳ್ಳಲು ಭೂಮಿಯನ್ನು ಪರಭಾರೆ ಮಾಡದಂತೆ ಕ್ರಮ ವಹಿಸುವ ಸಲುವಾಗಿ ಆರ್‌ಟಿಸಿಯ ಕಾಲಂ ನಂ.೧೧ರಲ್ಲಿ ಇವರುಗಳ ಹೆಸರನ್ನು ನಮೂದಿಸಲಾಗಿದೆ. ಆದ್ದರಿಂದ ಕಾಲಂ ನಂ.೯ ಹಾಗೂ ೧೦ರಲ್ಲಿ ಸೇರ್ಪಡೆಗೊಳಿಸಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಈ ಬಗ್ಗೆ ಮತ್ತೆ ಪತ್ರ ವ್ಯವಹಾರ ನಡೆಸಿ ಹಕ್ಕುಪತ್ರ ಹೊಂದಿದ ಗಿರಿಜನರಿಗೆ ಕೃಷಿ ಇಲಾಖೆಯ ಸವಲತ್ತುಗಳನ್ನು ಪಡೆಯಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು.
ಇದರ ಅನ್ವಯ ಬುಡಕಟ್ಟು ಜನರಿಗೆ ಕೃಷಿ ಚಟುವಟಿಕೆಗೆ ಬೇಕಾದ ಸರ್ಕಾರದ ಸವಲತ್ತುಗಳನ್ನು ನೀಡಲು ರಾಜ್ಯ ಮಟ್ಟದಲ್ಲಿ (ಫಾರ್ಮರ್ ರಿಜಿಸ್ಟೆçÃಷನ್ ಯುನಿಫೈಡ್ ಬೆನಿಫಿಶರಿ ಇನ್ಫಾರ್‌ಮೇಷನ್ ಸಿಸ್ಟಮ್) ಎಂಬ ತಂತ್ರಾAಶವನ್ನು ಹೊಸದಾಗಿ ಅಳವಡಿಸಿಕೊಡುವುದರ ಮೂಲಕ ರಾಜ್ಯದ ಎಲ್ಲಾ ಭಾಗದಲ್ಲಿರುವ ಅರಣ್ಯ ಹಕ್ಕುಪತ್ರ ಪಡೆದಿರುವ ಬುಡಕಟ್ಟು ಕುಟುಂಬಗಳು ನೂತನ ತಂತ್ರಾAಶಕ್ಕೆ ತಮ್ಮ ಸ್ವಯಂ ಘೋಷಣೆ ಪತ್ರ, ಆಧಾರ್‌ಕಾರ್ಡ್, ಹಕ್ಕುಪತ್ರ, ಬ್ಯಾಂಕ್ ಪಾಸ್ ಪುಸ್ತಕ, ನಿಗದಿತ ನಮೂನೆಯಲ್ಲಿ ಸಿದ್ಧಪಡಿಸಿಕೊಂಡು ತಂತ್ರಾAಶದ ಜಾಲತಾಣದಲ್ಲಿ ನಮೂದಿಸುವಂತೆ ಗಿರಿಜನ ಕಲ್ಯಾಣ ನಿರ್ದೇಶನಾಲಯ ನಿರ್ದೇಶನ ನೀಡಿದೆ.
ಇಷ್ಟು ದಾಖಲೆಗಳನ್ನು ತಂತ್ರಾAಶದಲ್ಲಿ ಒದಗಿಸಿದ ನಂತರ ಸಿಗುವ ದೃಢೀಕರಣವನ್ನು ಮಾನ್ಯ ಮಾಡಿ ಕೃಷಿ, ತೋಟಗಾರಿಕೆ ಸೇರಿದಂತೆ ಇತರ ಇಲಾಖಾ ಅಧಿಕಾರಿಗಳು ಅರಣ್ಯ ಹಕ್ಕು ಪತ್ರ ಹೊಂದಿದ ಬುಡಕಟ್ಟು ಜನಾಂಗದವರು ಈ ಯೋಜನೆಯ ಪ್ರಯೋಜನದೊಂದಿಗೆ ವಿವಿಧ ಇಲಾಖೆಯ ಎಲ್ಲಾ ಸರ್ಕಾರಿ ಸವಲತ್ತು ಪಡೆಯಲು ಅರ್ಹರು ಎಂದು ನಿರ್ದೇಶನ ನೀಡಿದೆ. ಇದರಿಂದ ರಾಜ್ಯದ ಎಲ್ಲೆಡೆಯ ಹಕ್ಕುಪತ್ರ ಹೊಂದಿದ ಗಿರಿಜನರಿಗೆ ಸರ್ಕಾರದ ಯೋಜನೆಯ ಫಲ ಸಿಕ್ಕಿದಂತಾಗಿದೆ. ಶಾಸಕರ ವಿಶೇಷ ಕಾಳಜಿಯಿಂದ ಅನೇಕ ವರ್ಷಗಳಿಂದ ಸೌಲಭ್ಯ ವಂಚಿತ ಗಿರಿಜನರಿಗೆ ಸೌಲಭ್ಯ ದೊರಕುವಂತಾಗಿದೆ. ಕ್ಷೇತ್ರದ ಶಾಸಕರ ವಿಶೇಷ ಕಾಳಜಿ ಹಾಗೂ ಅಧಿಕಾರಿಗಳ ಮುತುವರ್ಜಿಯಿಂದ ಬುಡಕಟ್ಟು ಜನಾಂಗದ ಅರಣ್ಯ ಹಕ್ಕುಪತ್ರ ಪಡೆದ ಸಾವಿರಾರು ಕುಟುಂಬಕ್ಕೆ ಇದರಿಂದ ಮುಂದೆ ಪ್ರಯೋಜನವಾಗಲಿದೆ.