ಮಡಿಕೇರಿ, ಮೇ ೨೦: ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿAದ ೨೦೧೩-೨೦೧೪ ಮತ್ತು ೨೦೧೩-೨೦೧೫ನೇ ಸಾಲಿನ ಹಾಗೂ ಹಿಂದಿನ ಸಾಲಿನಲ್ಲಿ ಪ್ರವೇಶ ಪಡೆದು ತರಬೇತಿ ಪಡೆದು ಉತ್ತೀರ್ಣರಾದ ಇ-ಎನ್‌ಟಿಸಿ ಹಾಗೂ ಮೇ-೨೦೧೮ ರ ಪರೀಕ್ಷೆಯವರೆಗಿನ ಇ-ನ್ಯಾಕ್‌ಗಳನ್ನು ಪಡೆದಿಲ್ಲದಿರುವ ತರಬೇತಿದಾರರ ಪ್ರಸ್ತಾವನೆಯನ್ನು ಸೂಕ್ತ ನಮೂನೆಯಲ್ಲಿ (ಎ೧ ಮತ್ತು ಬಿ೧) ಇಲಾಖೆಯು ೨೦೨೧ರ ಡಿಸೆಂಬರ್ ೨೪ ರಂದು ನೀಡಿರುವ ಪತ್ರದಂತೆ ೨೦೨೨ರ ಜನವರಿ ೧೫ ರಂದು ನೀಡಲು ತಿಳಿಸಲಾಗಿತ್ತು.

ತದನಂತರ ಪತ್ರ ೨೦೨೨ ರ ಏಪ್ರಿಲ್ ೧೯ ರಲ್ಲಿ ಪ್ರಸ್ತಾವನೆಯನ್ನು ೨೦೨೨ ರ ಏಪ್ರಿಲ್ ೩೦ ರೊಳಗೆ ಸಲ್ಲಿಸಲು ತಿಳಿಸಿದ್ದರೂ ಸಹ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸದಿರುವುದರಿಂದ ೨೦೨೨ ರ ಮೇ ೩೦ ರವರೆಗೆ ಅವಧಿ ವಿಸ್ತರಿಸಲಾಗಿದೆ. ನಂತರ ಸಲ್ಲಿಸುವ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದಿಲ್ಲ. ನಂತರದ ಯಾವುದೇ ಬೆಳವಣಿಗೆಗೆ ಆಯಾಯ ಸಂಸ್ಥೆಯ ಪ್ರಾಚಾರ್ಯರನ್ನು ಹಾಗೂ ಆಡಳಿತ ಮಂಡಳಿಯನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.