ಕುಶಾಲನಗರ, ಮೇ ೨೦: ಕುಶಾಲನಗರ ಪಟ್ಟಣದ ಮಹಾಲಕ್ಷಿö್ಮ ಸ್ವೀಟ್ಸ್ ಸ್ಟಾಲ್‌ನಲ್ಲಿ ಹುಳ ಮಿಶ್ರಿತ ಸಿಹಿ ತಿಂಡಿ ಮಾರಾಟ ಮಾಡಿದ ಪ್ರಕರಣದಲ್ಲಿ ಕುಶಾಲನಗರ ಪಪಂ ಹಾಗೂ ಆಹಾರ ಗುಣಮಟ್ಟ ಸುರಕ್ಷತೆ ಇಲಾಖೆ ಅಧಿಕಾರಿಗಳು ಮಳಿಗೆ ಮಾಲೀಕರಿಗೆ ನೋಟೀಸ್ ನೀಡಿ ಕ್ರಮ ಕೈಗೊಂಡಿದ್ದಾರೆ.

ಈ ನಡುವೆ ಸಿಹಿ ತಿಂಡಿ ಖರೀದಿಸಿದ ಗ್ರಾಹಕರು ಸಂಬAಧಿಸಿದ ಇಲಾಖೆಗಳಿಗೆ ಲಿಖಿತ ದೂರು ನೀಡಿದ್ದು ಅಧಿಕಾರಿಗಳು ಸಮಜಾಯಿಷಿಕೆ ಕೇಳಿ ನೋಟೀಸ್ ನೀಡಿದ್ದರೂ ಅಂಗಡಿ ತೆರೆದ ಹಿನ್ನೆಲೆಯಲ್ಲಿ ಸ್ವಲ್ಪಕಾಲ ಮಾಲೀಕರು ಮತ್ತು ಪಪಂ ಅಧಿಕಾರಿಗಳ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆಯಿತು.

ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು ಆಹಾರ ಗುಣಮಟ್ಟ ನಿಯಂತ್ರಣ ಅಧಿಕಾರಿಗಳು ಕೂಡ ಅಂಗಡಿಗೆ ಭೇಟಿ ಮಾಡಿ ತಿಂಡಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸುವ ಬಗ್ಗೆ ಕ್ರಮಕೈಗೊಂಡಿದ್ದಾರೆ. ಇಷ್ಟೆಲ್ಲಾ ನಡೆದಿದ್ದರೂ ಅಂಗಡಿ ವ್ಯವಸ್ಥಾಪಕ ಮಾತ್ರ ಯಾವುದೇ ರೀತಿ ಬೆಲೆ ನೀಡದೆ ಅಂಗಡಿಯನ್ನು ಎಂದಿನAತೆ ತೆರೆದಿರುವುದು ಕಂಡುಬAತು.

ಈ ಸಂದರ್ಭ ಕುಶಾಲನಗರ ಪಪಂ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸ್ಥಳಕ್ಕೆ ಬಂದು ಅಂಗಡಿಯನ್ನು ಮುಚ್ಚಿಸಲು ಆದೇಶ ನೀಡಿದ್ದಾರೆ. ಪ್ರಯೋಗಾಲಯ ವರದಿ ಬಂದ ನಂತರ ಅಂಗಡಿ ತೆರೆಯುವಂತೆ ಸೂಚನೆ ನೀಡಿ ಅಂಗಡಿಯನ್ನು ಬಂದ್ ಮಾಡಲಾಯಿತು.

‘ಶಕ್ತಿ’ಯೊಂದಿಗೆ ಮಾತನಾಡಿದ ಜಿಲ್ಲಾ ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಆಯುಕ್ತ ಅನಿಲ್ ದವನ್, ಇಲಾಖಾ ಅಧಿಕಾರಿಗಳು ಅಂಗಡಿಯಿAದ ಸಿಹಿ ತಿಂಡಿಗಳ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬರುವ ತನಕ ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದೇ ರೀತಿ ನೆಲ್ಲಿಹುದಿಕೇರಿ, ವೀರಾಜಪೇಟೆ ಸಿದ್ದಾಪುರ ಮೂರು ಕಡೆ ಅಂಗಡಿಗಳಿಗೆ ದಾಳಿ ಮಾಡಲಾಗಿದ್ದು ಕಳಪೆ ಗುಣಮಟ್ಟದ ಆಹಾರ ಮಾರಾಟಗಾರರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಿಹಿ ತಿಂಡಿ ಮಾರಾಟ ಮಳಿಗೆಗೆ ಪಪಂ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅಂಗಡಿ ಮಳಿಗೆ ವ್ಯವಸ್ಥಾಪಕ ಮತ್ತು ಸಿಬ್ಬಂದಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಕಂಡುಬAತು. -ಸಿಂಚು, ಸತೀಶ್