ಮಡಿಕೇರಿ, ಮೇ ೨೦: ಮೂಲತಃ ಬಿರುನಾಣಿಯ ಕುಶಾಲನಗರದಲ್ಲಿ ನೆಲೆಸಿದ್ದ ‘ಫುಡ್‌ಡೆಲಿವರಿ ಬಾಯ್’ ಆಗಿ ಕೆಲಸ ಮಾಡುತ್ತಿದ್ದ ಯುವಕ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾನೆ.

ಅಣ್ಣಳಮಾಡ ತೇಜಸ್ ತಿಮ್ಮಯ್ಯ (೨೮) ಮೃತ ದುರ್ದೈವಿ. ಫುಡ್‌ಡೆಲಿವರಿಗೆಂದು ಮಡಿಕೇರಿಗೆ ಬೈಕ್‌ನಲ್ಲಿ ಬರುತ್ತಿರುವಾಗ ಚೈನ್‌ಗೇಟ್ ಬಳಿ ವಾಹನವೊಂದು ಡಿಕ್ಕಿ ಪಡಿಸಿದ ಪರಿಣಾಮ ಯುವಕ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ತಿಂಗಳುಗಳಿAದ ಜೊ಼ಮೆಟೊ ಮೂಲಕ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇಂದು ಕೂಡ ಕೆಲಸದ ಉದ್ದೇಶದಿಂದ ಮಡಿಕೇರಿ ಕಡೆಗೆ ಬರುತ್ತಿರುವಾಗ ಘಟನೆ ಸಂಭವಿಸಿದೆ. ವಾಹನ ಡಿಕ್ಕಿ ಪಡಿಸಿ ನಿಲ್ಲಿಸದೆ ಹೋಗಿದೆ. ಏನಾದರೂ ತಕ್ಷಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಯುವಕನ ಪ್ರಾಣ ಉಳಿಯುತಿತ್ತು ಎಂದು ಸ್ನೇಹಿತರು ಹೇಳಿಕೊಳ್ಳುತ್ತಾರೆ. ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಬ್ಬೆಟ್ಟಗೇರಿಯ ನಿವಾಸಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.