ಜಿಲ್ಲಾ ಬಿಜೆಪಿ ಅಸಮಾಧಾನ

ಮಡಿಕೇರಿ, ಮೇ ೨೦: ಕ್ಷÄಲ್ಲಕ ರಾಜಕೀಯ ಮಾಡಲು ವಿಷಯಗಳಿಲ್ಲದೆ ಪರದಾಡುತ್ತಿರುವ ವಿರೋಧ ಪಕ್ಷಗಳು ಪೊನ್ನಂಪೇಟೆಯಲ್ಲಿ ನಡೆದ ತ್ರಿಶೂಲ ದೀಕ್ಷೆ ಮತ್ತು ಏರ್‌ಗನ್ ತರಬೇತಿ ವಿಷಯ ವೈಭವೀಕರಿಸಿ ತನಿಖೆಗೆ ಒತ್ತಾಯ ಮಾಡುತ್ತಿರುವುದು ಹಾಸ್ಯಾಸ್ಪದವೆಂದು ಜಿಲ್ಲಾ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ವಿರೋಧ ಪಕ್ಷಗಳ ನಡೆಯನ್ನು ಖಂಡಿಸುವುದಾಗಿ ತಿಳಿಸಿದ್ದಾರೆ. ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಭಜರಂಗದಳದ ವತಿಯಿಂದ ನಡೆದ ಪ್ರಶಿಕ್ಷಣ ವರ್ಗದ ತ್ರಿಶೂಲ ದೀಕ್ಷೆ ಮತ್ತು ಬಂದೂಕು ತರಬೇತಿ ಶಿಬಿರದಲ್ಲಿ ದೇಶಭಕ್ತಿಯ ಪಾಠ ಮಾಡಲಾಗಿದೆಯೇ ಹೊರತು ದೇಶದ್ರೋಹದ ಸಂದೇಶವನ್ನು ಯಾರೂ ನೀಡಿಲ್ಲ. ದೇಶಪ್ರೇಮ, ಧರ್ಮ ಮತ್ತು ಆತ್ಮರಕ್ಷಣೆಯ ವಿಚಾರದ ಪ್ರಶಿಕ್ಷಣ ವರ್ಗ ಯಾವುದೇ ಪ್ರಚಾರ ಮತ್ತು ಅಬ್ಬರವಿಲ್ಲದೆ ನಡೆದಿದೆ. ಈ ಶಿಬಿರದ ಒಂದು ಭಾಗವಾಗಿ ತ್ರಿಶೂಲ ದೀಕ್ಷೆ ಮತ್ತು ಏರ್‌ಗನ್ ತರಬೇತಿ ನೀಡಲಾಗಿತ್ತೇ ಹೊರತು ದೇಶ ವಿರೋಧಿ ಚಟುವಟಿಕೆಯನ್ನು ನಡೆಸಿಲ್ಲ. ಕಾಯ್ದೆಯ ಪ್ರಕಾರ ಏರ್‌ಗನ್ ಖರೀದಿಸಲು ಮತ್ತು ಬಳಸಲು ಯಾವುದೇ ಅನುಮತಿಯ ಅಗತ್ಯವಿಲ್ಲ ಎಂದಿದ್ದಾರೆ.

ಕಾನೂನಿನ ಬಗ್ಗೆ ಅರಿವಿಲ್ಲದ ಕಾಂಗ್ರೆಸ್, ಜೆಡಿಎಸ್ ಮತ್ತು ಎಸ್‌ಡಿಪಿಐ ಪಕ್ಷಗಳು ಕೇವಲ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್‌ಗಾಗಿ ಬಾಲಿಶ ಹೇಳಿಕೆಗಳನ್ನು ನೀಡುತ್ತಿವೆ. ಆಡಳಿತ ಪಕ್ಷವನ್ನು ಎದುರಿಸಲು ಯಾವುದೇ ವಿಚಾರಗಳಿಲ್ಲದೆ ಹತಾಶಗೊಂಡಿರುವ ಈ ಪಕ್ಷಗಳು ಕನಿಷ್ಟ ಏರ್‌ಗನ್ ಮತ್ತು ಗನ್ ನಡುವಿನ ವ್ಯತ್ಯಾಸ ತಿಳಿಯದೆ ಬಾಯಿಗೆ ಬಂದAತೆ ಮಾತನಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏರ್‌ಗನ್ ಖರೀದಿಸಲು ಮತ್ತು ಬಳಸಲು ಅನುಮತಿಯ ಅಗತ್ಯವಿಲ್ಲವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಸ್ಪಷ್ಟಪಡಿಸಿದ್ದು, ಭಜರಂಗದಳದಿAದ ಯಾವುದೇ ತಪ್ಪು ನಡೆದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.