ಸಿದ್ದಾಪುರ, ಮೇ ೨೦: ಕುಶಾಲನಗರದಲ್ಲಿ ಮಹಾಲಕ್ಷಿö್ಮ ಸಿಹಿತಿನಿಸು ಅಂಗಡಿಯಲ್ಲಿ ಖರೀದಿಸಿದ ಸಿಹಿ ತಿನಿಸಿನಲ್ಲಿ ಹುಳು ಇರುವುದು ಕಂಡುಬAದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇದೀಗ ಆಹಾರ ಇಲಾಖೆಯ ಅಧಿಕಾರಿಗಳು ನೆಲ್ಯಹುದಿಕೇರಿ ವ್ಯಾಪ್ತಿಯ ಹೊಟೇಲ್, ಬೇಕರಿ ಇನ್ನಿತರ ಅಂಗಡಿಗಳಿಗೆ ತೆರಳಿ ಪರಿಶೀಲಿಸಿದರು.

ಅಲ್ಲದೆ ವ್ಯಾಪ್ತಿಯ ೧೨ ಕ್ಕೂ ಅಧಿಕ ಅಂಗಡಿಗಳಿಗೆ ಶುಚಿತ್ವ, ಧೂಮಪಾನ ನಿಷೇಧದ ಕುರಿತಾದ ನಾಮ ಫಲಕ ಅಳವಡಿಸದೇ ಇರುವುದರ ಕುರಿತು ಎಚ್ಚರಿಕೆ ನೀಡಿ ದಂಡ ವಿಧಿಸಿದರು. ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತ, ಹಿರಿಯ ಆರೋಗ್ಯ ಶಿಕ್ಷಣ ಅಧಿಕಾರಿ ವಿಶ್ವಜ್ಙ, ಎ.ಎಸ್ ಐ ಉತ್ತಯ್ಯ ಹಾಜರಿದ್ದರು.