ಮರಗೋಡು ಹೊಸ್ಕೇರಿ ಗ್ರಾಮದ ವಕೀಲ ಕೆಂಜನ ರಂಜು ಹಾಗೂ ಗೀತಾ ಪ್ರಭಾ (ಅಂಚೆ ಇಲಾಖೆ) ದಂಪತಿಯ ಪುತ್ರಿ ಮಡಿಕೇರಿ ಸಂತ ಮೈಕಲರ ಶಾಲೆಯ ಸಿಂಚನಾ ಕೆ.ಆರ್, ಕೋಪಟ್ಟಿ ಗ್ರಾಮದ ಕೇಕಡ ಅಶೋಕ್ ಹಾಗೂ ಯಶೋಧ ದಂಪತಿಯ ಪುತ್ರಿ ಚೇರಂಬಾಣೆ ಕೊಟ್ಟೂರಿನ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸೋನಿಕಾ ಕೆ.ಎ, ಶನಿವಾರಸಂತೆಯ ವಕೀಲ ಎಸ್.ವಿ ಜಗದೀಶ್ ಹಾಗೂ ಎಚ್.ಪಿ ರಾಘವಿ ದಂಪತಿ ಪುತ್ರಿ ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿನಿ ಪೂರ್ವಿ ಜಗದೀಶ್ ಹಾಗೂ ಸೋಮವಾರಪೇಟೆ ಶಾಲಾ ರಸ್ತೆಯ ನಿವಾಸಿ ಬಾಬುರಾಯ ಹಾಗೂ ಶುಭ ದಂಪತಿ ಪುತ್ರಿ ಚೌಡ್ಲು ಗ್ರಾಮದ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಿಂಚನಾ ಪಿ.ಬಿ ಅವರುಗಳು ೬೨೫ ಕ್ಕೆ ೬೨೨ ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ.

ವಿದ್ಯಾರ್ಥಿನಿ ಸಿಂಚನಾ ಪಿ.ಬಿ. ಜ್ವರವಿದ್ದರೂ ಪರೀಕ್ಷೆ ಬರೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು ವಿಶೇಷವಾಗಿದೆ.ಮಡಿಕೇರಿ ನಿವಾಸಿ ಡಿ.ಎ.ಆರ್ ಮುಖ್ಯಪೇದೆ ನವೀನ್ ಕುಮಾರ್ ಎಂ.ಕೆ ಹಾಗೂ ಪೂರ್ಣಿಮಾ ಕೆ.ಎಸ್ ದಂಪತಿ ಪುತ್ರಿ ಮಡಿಕೇರಿಯ ಸಂತ ಜೋಸೆಫರ ಪ್ರೌಢ ಶಾಲೆಯ ಲಕ್ಷö್ಯ ಎಮ್.ಎನ್, ಶನಿವಾರಸಂತೆಯ ಟಿ.ಆರ್ ವೆಂಕಟೇಶ್ ಹಾಗೂ ಸುಜಾತ ದಂಪತಿ ಅವರ ಪುತ್ರಿ ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಶಾಲೆಯ ಕೀರ್ತನಾ ಸಿ.ವಿ, ಕುಶಾಲನಗರ ಹೌಸಿಂಗ್ ಬೋರ್ಡ್ ಕಾಲೊನಿ ನಿವಾಸಿ ಕಾರ್ತಿಶನ್ ಹಾಗೂ ಫ್ಲಾರೆನ್ಸ್ ದಂಪತಿ ಪುತ್ರಿ ಕುಶಾಲನಗರ ಫಾತಿಮಾ ಕಾನ್ವೆಂಟ್ ಪ್ರೌಢ ಶಾಲೆಯ ಗಾಯತ್ರಿ ಕೆ, ಬೆಸೂರು ಗ್ರಾಮದ ವಸಂತ ಹಾಗೂ ಕುಮುದ ದಂಪತಿಯ ಪುತ್ರಿ ಕೊಡ್ಲಿಪೇಟೆ ಸದಾಶಿವ ಸ್ವಾಮೀಜಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮಾನ್ಯಶ್ರೀ ಬಿ.ವಿ ಅವರುಗಳು ೬೨೧ ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.