ಗೋಣಿಕೊಪ್ಪಲು, ಮೇ 19: ಕಳೆದ ಕೆಲವು ತಿಂಗಳ ಹಿಂದೆ ಬಿಟ್ಟಂಗಾಲ ಸಮೀಪದ 1ನೇ ರುದ್ರಗುಪ್ಪೆ ಗ್ರಾಮದಲ್ಲಿ ಮಾನವನ ಮೇಲೆ ದಾಳಿ ನಡೆಸಿ ಕಾರ್ಮಿಕನ ಜೀವ ಬಲಿ ಪಡೆದಿದ್ದ ಪ್ರದೇಶದಲ್ಲಿ ಇದೀಗ ಮತ್ತೆ ಹುಲಿ ದಾಳಿ ನಡೆಸಿದ್ದು ಗ್ರಾಮದ ಬಿ.ಗಣೇಶ್ ಅವರಿಗೆ ಸೇರಿದ ಹಸು ಬಲಿಯಾಗಿದೆ.
ಮಧ್ಯಾಹ್ನದ ವೇಳೆ ಮೇಯಲು ಬಿಟ್ಟ ಹಸುವಿನ ಮೇಲೆ ದಾಳಿ ನಡೆಸಿದ ಹುಲಿಯು ಹಸುವನ್ನು ಕೊಂದುಹಾಕಿದೆ. ಮಾಹಿತಿ ತಿಳಿದ ಹಸುವಿನ ಮಾಲೀಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು.