ಗೋಣಿಕೊಪ್ಪಲು, ಮೇ 19: ಗೋಣಿಕೊಪ್ಪಲು ಉಪ ವಿಭಾಗದ ಎಫ್5 - ಪಾಲಿಬೆಟ್ಟ ಮತ್ತು ಎಫ್9 ಹಾತೂರು ಫೀಡರ್‍ನಲ್ಲಿ ತುರ್ತು ಕಾರ್ಯನಿರ್ವಹಣೆ ಇರುವುದರಿಂದ ಗೋಣಿಕೊಪ್ಪಲು ಶಾಖೆಯ ಪಾಲಿಬೆಟ್ಟ, ಗೋಣಿಕೊಪ್ಪಲು ಮತ್ತು ಹಾತೂರು ಫೀಡರ್‍ನ ಗ್ರಾಮಗಳಾದ ಚನ್ನಂಗೊಲ್ಲಿ, ಆರ್‍ಎಂಸಿ, ಹರಿಶ್ಚಂದ್ರಪುರ, ಕೊಪ್ಪ, 1ನೇ ವಿಭಾಗ, ಲೋಪಮುದ್ರ, ಅಚ್ಚಪ್ಪ ಬಡಾವಣೆ, ಕಾವೇರಿ ಹಿಲ್ಸ್, ಗೋಣಿಕೊಪ್ಪ ಸುತ್ತಮುತ್ತಲಿನ ವ್ಯಾಪ್ತಿಗಳು ಹತ್ತೂರು, ಗದ್ದೆಮನೆ, ಹೊಸೂರು ಗ್ರಾಮಗಳ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ತಾ. 20 ರಂದು (ಇಂದು) ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗÀಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಗೋಣಿಕೊಪ್ಪ ಚೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.