ಮಡಿಕೇರಿ, ಮೇ 19: ಹಾಕಿ ಇಂಡಿಯಾ ವತಿಯಿಂದ ತಮಿಳು ನಾಡುವಿನ ಕೋವಿಲ್‍ಪಟ್ಟಿಯಲ್ಲಿ ನಡೆಯುತ್ತಿರುವ 12ನೇ ಜೂನಿಯರ್ ನ್ಯಾಷನಲ್ಸ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಹಾಕಿ
ಕರ್ನಾಟಕ ತಂಡದಲ್ಲಿ ಕೊಡಗಿನ
12 ಮಂದಿ ಇದ್ದಾರೆ.
10 ಆಟಗಾರರು ಹಾಗೂ ಕೋಚ್ ಹಾಗೂ ವ್ಯವಸ್ಥಾಪಕರು ಜಿಲ್ಲೆಯವರಾಗಿದ್ದಾರೆ.
ತಂಡದ ನಾಯಕನಾಗಿ ಅಚ್ಚಾಂಡೀರ (ಜಬ್ಬನ) ದೀಕ್ಷಿತ್, ಆಟಗಾರರಾಗಿ ಕುಂಞಂಗಡ ತರುಣ್ ಗಣಪತಿ, ಬಿಪಿನ್ ಬಿ.ಆರ್., ವಚನ್ ಹೆಚ್.ಎ., ದರ್ಶನ್ ಪೊನ್ನಪ್ಪ ಪಿ.ಟಿ., ಗೌತಮ್ ಎಂ.ಎ., ಧನುಷ್ ಬಿ.ಎಚ್., ಶಾನ್ ಮೊಣ್ಣಪ್ಪ ಎಂ.ಎ., ಸಪನ್ ಅಯ್ಯಪ್ಪ ಪಿ.ಪಿ., ಹಾಗೂ ದೇಶ್ ಪೂವಯ್ಯ ಪಾಲ್ಗೊಂಡಿದ್ದಾರೆ.ಹಾಕಿ ಆಟಗಾರ ಕರಿನೆರವಂಡ ಸೋಮಣ್ಣ ಕೋಚ್ ಹಾಗೂ ಮೇಚಂಡ ತನು ನಂಜಪ್ಪ ವ್ಯವಸ್ಥಾಪಕರಾಗಿದ್ದಾರೆ.