ಭಾಗಮಂಡಲ, ಮೇ 19: ಭಾಗಮಂಡಲದ ಕಾವೇರಿ ಹಾಗೂ ಕನ್ನಿಕೆ ನದಿ ಪಾತ್ರಗಳನ್ನು ಸ್ವಚ್ಛಗೊಳಿಸಿ ಮಾಲಿನ್ಯ ನಿರ್ವಹಣೆ ಮಾಡಬೇಕು ಎಂದು ಹೈಕೋರ್ಟ್ ಕಾವೇರಿ ನೀರಾವರಿ ನಿಗಮಕ್ಕೆ ಈ ಹಿಂದೆ ನಿರ್ದೇಶಿಸಿತು. ಅಲ್ಲದೆ ಸ್ವಚ್ಛತಾ ಕಾರ್ಯದ ಹೊಣೆ ಹೊತ್ತಿರುವ ಕಾವೇರಿ ನೀರಾವರಿ ನಿಗಮ ಹಾಗೂ ಸಂಬಂಧಿಸಿದ ಇತರ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು. ವಿಚಾರಣೆಯನ್ನು ಜೂನ್ ಎರಡನೇ

(ಮೊದಲ ಪುಟದಿಂದ) ವಾರಕ್ಕೆ ಮುಂದೂಡಿತು. ಈ ಹಿನ್ನೆಲೆಯಲ್ಲಿ ಇಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ದೂರುದಾರರುಗಳೊಂದಿಗೆ ಕಾವೇರಿ ಮತ್ತು ಕನ್ನಿಕೆಯ ನದೀ ಪಾತ್ರಗಳಿಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಮಲ ತ್ಯಾಜ್ಯ ಸಂಸ್ಕರಣಾ ಹಾಗೂ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಮಾತನಾಡಿ ಈಗಾಗಲೇ ದೂರುದಾರರಿಗೆ ಭಾಗಮಂಡಲದ ಕಾವೇರಿ ಕನ್ನಿಕೆಯ ನದೀ ಪಾತ್ರಗಳಿಗೆ ದೂರುದಾರರೊಂದಿಗೆÉ ಭೇಟಿ ನೀಡಿ ಪರಿಶೀಲಿಸಲಾಗಿದೆ. ದೂರಿನಲ್ಲಿ ಹೊಟೇಲ್ ಹಾಗೂ ಮನೆಗಳ ತ್ಯಾಜ್ಯಗಳು ಕಾವೇರಿಯನ್ನು ಸೇರುತ್ತಿದೆ ಎಂದಾಗಿದ್ದು, ಈ ಸಂಬಂಧ ಗ್ರಾಮ ಪಂಚಾಯಿತಿ ವತಿಯಿಂದ ಶೇ. 80ರಷ್ಟನ್ನು ನರೇಗಾ ಯೋಜನೆಯಡಿ ಸೇಫ್ಟಿ ಟ್ಯಾಂಕ್ ನಿರ್ಮಾಣ ಮಾಡಿಕೊಳ್ಳಲಾಗಿದೆ. ಅಲ್ಲದೆ ನರೇಗಾ ಯೋಜನೆಯಲ್ಲಿ ಸೇಫ್ಟಿ ಟ್ಯಾಂಕ್ ನಿರ್ಮಾಣ ಮಾಡಿಕೊಳ್ಳದೆ ಇರುವವರು ಮಲ ತ್ಯಾಜ್ಯ ನಿರ್ವಹಣೆ ಘಟಕ ಯೋಜನೆಯಡಿ ಹೊಂದಿಕೊಳ್ಳಲು ಅವಕಾಶ ಇದೆ. ಮಲ ತ್ಯಾಜ್ಯ ಸಂಸ್ಕರಣಾ ಹಾಗೂ ವಿಲೇವಾರಿ ಘಟಕದ ಉದ್ಘಾಟನೆ ಇದೇ 26ರಂದು ನಡೆಯಲಿದ್ದು, ನಂತರದಲ್ಲಿ ಹೊಟೇಲ್ ಹಾಗೂ ಮನೆಗಳ ತ್ಯಾಜ್ಯಗಳು ಸೇಫ್ಟಿ ಟ್ಯಾಂಕಿನಿಂದ ಸಂಸ್ಕರಣಾ ಘಟಕಕ್ಕೆ ನೇರವಾಗಿ ಹೋಗಲು ಸಂಪರ್ಕ ಕಲ್ಪಿಸಲಾಗಿದೆ. ನಂತರ ದಿನಗಳಿಂದ ಕಾವೇರಿ ಮತ್ತು ಕನ್ನಿಕೆಯ ಮಲಿನ ಸಂಪೂರ್ಣವಾಗಿ ನಿಲ್ಲಲಿದೆ ಎಂದರು.

ಪ್ರವಾಹ ಪರಿಸ್ಥಿತಿ ಉದ್ಭವವಾಗದಂತೆ ನದಿಯಲ್ಲಿ ಹಾಗೂ ನದಿಯ ದಂಡೆಗಳಲ್ಲಿ ಮರಗಿಡಗಳು ಬೆಳೆದಿದ್ದನ್ನು ತೆಗೆಯಬೇಕಾಗುತ್ತದೆ. ಅಲ್ಲದೆ ಸಂಗಮದ ಕೆಳಭಾಗ ಅಂದರೆ ನಾಲ್ಕರಿಂದ ಐದು ಕಿಲೋಮೀಟರ್‍ನಲ್ಲಿ ಹೂಳು ತೆರವು ಮಾಡಿದಲ್ಲಿ ಸುಲಭವಾಗಿ ನೀರು ಹರಿಯಲಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ತಗ್ಗಲಿದೆ ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜಿಲ್ಲಾಧಿಕಾರಿಯೊಂದಿಗೆ ಮಾತನಾಡುತ್ತಾ ಮೇಲ್ಸೇತುವೆ ಕೆಳಭಾಗದ ರಸ್ತೆಯು ಸಂಪೂರ್ಣವಾಗಿ ಕೆಸರುಮಯ ವಾಗಿದ್ದು, ಜನರಿಗೆ ಕಷ್ಟಕರವಾಗುತ್ತಿದೆ, ಕಳೆದ ನಾಲ್ಕು ವರ್ಷಗಳಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದು ಇದೀಗ ಕೆಸರುಮಯ ರಸ್ತೆಯಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ರಸ್ತೆಯನ್ನು ಸರಿಪಡಿಸಿ ಕೊಡಿ. ಭಾಗಮಂಡಲದಲ್ಲಿ ನಾಲ್ಕರಿಂದ ಐದು ಇಂಚು ಮಳೆ ಬಂದಲ್ಲಿ ಅಲ್ಲದೆ ನಾಪೆÇೀಕ್ಲು ರಸ್ತೆಯಲ್ಲಿ ಎರಡರಿಂದ ಮೂರು ಅಡಿ ನೀರು ಹರಿಯುತ್ತಿರುವ ಸಂದರ್ಭದಲ್ಲಿ ಜನರು ನಡೆದುಕೊಂಡೆ ಹೋಗುತ್ತಾರೆ. ಆದರೆ ರಸ್ತೆಯಲ್ಲಿ ಉಬ್ಬು ತಗ್ಗುಗಳು ಇದ್ದು ಅಲ್ಲದೆ ಮಣ್ಣಿನ ರಾಶಿಗಳಿದ್ದು ಕೂಡಲೇ ರಸ್ತೆಯನ್ನು ಸರಿಪಡಿಸಿಕೊಡಬೇಕಾಗಿದೆ. ಈ ಭಾಗದ ಜನರಿಗೆ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಗಳಿದ್ದು ಮೂರರಿಂದ ನಾಲ್ಕು ದಿನಗಳು ವಿದ್ಯುತ್ ಇಲ್ಲದೆ ಸಮಸ್ಯೆ ಎದುರಿಸುತ್ತಾರೆ. ಅದಕ್ಕಾಗಿ ಸೀಮೆಎಣ್ಣೆ ವಿತರಿಸುವ ವ್ಯವಸ್ಥೆ ಆಗಬೇಕಿದೆ ಎಂದರು. ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ನವೀನ್ ಮಾತನಾಡಿ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಆರಂಭದ ಹಾಗೂ ಕೊನೆಯ ಭಾಗಗಳಲ್ಲಿ ರ್ಯಾಂಪ್ಸ್ ಕೆಲಸ ಬಾಕಿ ಉಳಿದಿದೆ. ಮೇಲ್ಸೇತುವೆ ಕಾಮಗಾರಿಯೊಂದಿಗೆ ಟೆಂಡರ್ ಆಗದೇ ಉಳಿದಿದ್ದು, ಹೊಸದಾಗಿ ಟೆಂಡರ್ ಪ್ರಕ್ರಿಯೆ ಆಗಬೇಕಿದೆ. ಕಾಮಗಾರಿಯು ಶೇ.80ರಷ್ಟು ಮುಗಿದಿದ್ದು ಭಾಗಮಂಡಲ ನಾಪೆÇೀಕ್ಲು ರಸ್ತೆಯ ಕೆಳಭಾಗದಲ್ಲಿ ಕಾಂಕ್ರೀಟೀಕರಣ ಮಾಡಲಾಗುವುದು. 12 ನಿವಾಸಿಗಳಿಗೆ ಸಂಬಂಧಿಸಿದಂತೆ ಜಾಗದ ಸಮಸ್ಯೆಯಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಕಾಮಗಾರಿ ನಡೆಸಲಾಗುವುದು ಎಂದರು. ಕಾವೇರಿ ನೀರಾವರಿ ನಿಗಮದ ಸೂಪರಿಟೆಂಡೆಂಟ್ ಇಂಜಿನಿಯರ್ ಚನ್ನಕೇಶವ, ಪುಟ್ಟಸ್ವಾಮಿ, ತಹಶೀಲ್ದಾರ್ ಮಹೇಶ, ದೂರುದಾರ ನಿಡ್ಯಮಲೆ ರವೀಂದ್ರ, ಪಿಡಿಓ ನಂದ, ಸಹಾಯಕ ಕಾರ್ಯಪಾಲಕ ಅಂಬೇಡ್ಕರ್, ಪಂಚಾಯಿತಿ ಅಧ್ಯಕ್ಷೆ ಪಮಿತ ಹಾಗೂ ಇನ್ನಿತರರು ಹಾಜರಿದ್ದರು. - ಸುನಿಲ್