*ಗೋಣಿಕೊಪ್ಪ, ಮೇ 19: ಚಾಲಕನ ನಿಯಂತ್ರಣ ತಪ್ಪಿ ಆಟೋ ಮಗುಚಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗೋಣಿಕೊಪ್ಪ ಹರಿಶ್ಚಂದ್ರಪುರದಲ್ಲಿ ನಡೆದಿದೆ. ಗುರುವಾರ 4.30 ಗಂಟೆಗೆ ಈ ಘಟನೆ ನಡೆದಿದ್ದು, ದೇವರಪುರ ಗ್ರಾಮದ ನಿವಾಸಿಯಾಗಿರುವ ಈಶ್ವರಪ್ಪ (36) ಮೃತಪಟ್ಟ ಚಾಲಕ.
ಆಟೋ ಮಗುಚಿಕೊಂಡ ಸಂದರ್ಭ ಚಾಲಕ ಈಶ್ವರಪ್ಪನ ತಲೆ ರಸ್ತೆಗೆ ಬಡಿದು ಮತ್ತು ಎದೆಯ ಮೇಲೆ ಆಟೋ ಬಿದ್ದ ಕಾರಣ ರಕ್ತಸ್ರಾವದಿಂದ ಈಶ್ವರಪ್ಪ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇಲ್ಲಿನ ಪರಿಮಳ ಮಂಗಳ ವಿಹಾರದಲ್ಲಿ ಸ್ನೇಹಿತನ ಮಗಳ ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದೇವರಪುರ ಗ್ರಾಮದಲ್ಲಿ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಈಶ್ವರಪ್ಪ ಮೂರು ತಿಂಗಳ ಗಂಡು ಮಗು ಮತ್ತು ಪತ್ನಿಯನ್ನು ಅಗಲಿದ್ದಾರೆ. -ಎನ್.ಎನ್. ದಿನೇಶ್