*ಗೋಣಿಕೊಪ್ಪ, ಮೇ ೧೮: ಗೋಣಿಕೊಪ್ಪ ಬಸ್ ನಿಲ್ದಾಣ ನಿರ್ಮಾಣಕ್ಕೆ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಅಂದಾಜು ರೂ. ೨ ಕೋಟಿ ಅನುದಾನದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸುವ ಯೋಜನೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ರೂಪಿಸಿಕೊಂಡಿದ್ದು, ಪಂಚಾಯಿತಿಯ ಅನುದಾನ ಮತ್ತು ಶಾಸಕರ ಅನುದಾನಗಳನ್ನು ಬಳಸಿ ಬಸ್ ನಿಲ್ದಾಣ ನಿರ್ಮಿಸಲು ಚಿಂತನೆ ಹರಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಅವರು ಸರ್ವೆ ಕಾರ್ಯ ನಡೆಸಲು ಐ.ಟಿ.ಡಿ.ಪಿ. ಇಲಾಖೆಯ ಸರ್ವೆ ಅಧಿಕಾರಿಗಳಿಗೆ ಬಸ್ ನಿಲ್ದಾಣ ನಿರ್ಮಾಣವಾಗುವ ಸ್ಥಳದ ಮಾಹಿತಿ ನೀಡಿ ಸರ್ವೆ ಕಾರ್ಯಕ್ಕೆ ಅನುವು ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರುಗಳಾದ ನೂರೇರ ರತಿ ಅಚ್ಚಪ್ಪ, ವಿವೇಕ್ ರಾಯ್ಕರ್, ಜಿ.ಕೆ. ಗೀತಾ, ಮಂಜುಳ, ರಾಜೇಶ್ ಕೆ., ಮಾಜಿ ಸದಸ್ಯ ಸುರೇಶ್ ರೈ ಇದ್ದರು.