ವೀರಾಜಪೇಟೆ, ಮೇ ೧೮: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ತಾಲೂಕು ಮಟ್ಟದ ಸಭೆಯನ್ನು ತಾ. ೨೭ ರಂದು ದೇವಣಗೇರಿ ವಿಎಸ್‌ಎಸ್‌ಎನ್ ಕಟ್ಟಡದಲ್ಲಿ ಆಯೋಜಿಸಲಾಗಿದೆ ಎಂದು ತಹಶೀಲ್ದಾರ್ ಡಾ. ಆರ್. ಯೋಗಾನಂದ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ದೇವಣಗೇರಿ ಗ್ರಾಮಕ್ಕೆ ಸಂಬAಧಿಸಿದ ಪಹಣಿಯಲ್ಲಿನ ಲೋಪದೋಷಗಳ ತಿದ್ದುಪಡಿ, ಪೌತಿ ಖಾತೆ, ಇಂದಿರಾಗಾAಧಿ ವೃದ್ಧಾಪ್ಯ ವೇತನ, ವಿಧವಾ, ಸಂಧ್ಯಾ ಸುರಕ್ಷಾ, ಅಂಗವಿಕಲ, ಅಂತ್ಯ ಸಂಸ್ಕಾರದ ಪರಿಹಾರ ಧನ, ರಾಷ್ಟಿçÃಯ ಕುಟುಂಬ ನೆರವು ಯೋಜನೆ, ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವುದು, ಗ್ರಾಮಗಳಿಗೆ ಸ್ಮಶಾನ ಕಲ್ಪಿಸುವುದು, ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ, ಸಕಾಲ ಯೋಜನೆಯಲ್ಲಿ ಒದಗಿಸುವ ಸೌಲಭ್ಯದ ಬಗ್ಗೆ ಮಾಹಿತಿ, ಜಾಗದ ಹದ್ದುಬಸ್ತು, ಪೋಡಿ ಮುಕ್ತ ಗ್ರಾಮ, ದರಖಾಸ್ತು, ಜಮೀನುಗಳ ದುರಸ್ತಿ ಪೋಡಿ ಮಾಡುವುದು, ಪಡಿತರ ಚೀಟಿಯಲ್ಲಿನ ಸಮಸ್ಯೆಗಳ ಬಗ್ಗೆ ಅಹವಾಲು ಸ್ವೀಕಾರ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.