ಸಿದ್ದಾಪುರ, ಮೇ ೧೮: ಎಸ್‌ಎನ್‌ಡಿಪಿ ಸಂಘಟನೆಯು ಕರ್ನಾಟಕದ ಬಲಿಷ್ಠ ಸಂಘಟನೆಯಾಗಿ ರೂಪುಗೊಂಡಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದಾಪುರದ ಎಸ್‌ಎನ್‌ಡಿಪಿ ಯೂನಿಯನ್ ವತಿಯಿಂದ ನಿರ್ಮಿಸಲಾಗುವ ಸಮುದಾಯ ಭವನ ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಎಸ್‌ಎನ್‌ಡಿಪಿ ಯೂನಿಯನ್ ಇತ್ತೀಚಿನ ವರ್ಷಗಳಲ್ಲಿ ಹಿಂದೂ ಸಮಾಜಕ್ಕೆ ತನ್ನದೇ ಆದ ಕೊಡುಗೆ ಗಳನ್ನು ನೀಡುವುದರ ಮೂಲಕ ಸಮಾಜ ಬಾಂಧವರ ಏಳಿಗೆಗಾಗಿ ಶ್ರಮಿಸುತ್ತಿರುವುದು ಪ್ರಶಂಸನೀಯ. ಕೊಡಗು ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಎಸ್‌ಎನ್‌ಡಿಪಿ ಘಟಕಗಳನ್ನು ರಚನೆ ಮಾಡುವುದರೊಂದಿಗೆ ಪ್ರತೀ ಗ್ರಾಮದಲ್ಲೂ ಸಮುದಾಯ ಭವನವನ್ನು ಸ್ಥಾಪನೆ ಮಾಡುವ ಮೂಲಕ ಸಂಘಟಿತರನ್ನಾಗಿಸಿದ್ದಾರೆ.

ಅಲ್ಲದೆ ಕೊಡಗು ಜಿಲ್ಲೆಯ ಕೇಂದ್ರ ಸ್ಥಾನವಾದ ಸಿದ್ದಾಪುರದಲ್ಲಿ ರೂ ಒಂದೂವರೆ ಕೋಟಿ ವೆಚ್ಚದಲ್ಲಿ ನೂತನ ಸಮುದಾಯ ಭವನದ ನಿರ್ಮಾಣಕ್ಕೆ ಮುಂದಾಗಿದ್ದು, ಭವನಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದ ಅವರು ಸಮುದಾಯ ಭವನದ ಸದುಪ ಯೋಗವನ್ನು ಸಮಾಜ ಬಾಂಧÀವರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಎಸ್‌ಎನ್‌ಡಿಪಿ ಯೂನಿಯನ್ ಕೊಡಗು ಜಿಲ್ಲಾ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಅಡಿಯಲ್ಲಿ ೫೦ ಬ್ರಾಂಚ್‌ಗಳು ಸಕ್ರೀಯವಾಗಿದ್ದು, ಸಂಘಟನೆಯ ಕೆಲಸಗಳಿಗೆ ವೇಗ ದೊರಕಿದೆ. ಸಿದ್ದಾಪುರದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣ ವಾಗಲಿದೆ. ಮುಂದಿನ ದಿನಗಳಲ್ಲಿ ಸಮುದಾಯ ಭವನದ ಕಾಮಗಾರಿಯು ಪ್ರಾರಂಭಗೊಳ್ಳಲಿದ್ದು, ಎಲ್ಲಾ ಸಮಾಜ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದÀರ್ಭ ಎಸ್‌ಎನ್‌ಡಿಪಿ ಯೂನಿಯನ್ ಉಪಾಧ್ಯಕ್ಷ ಆರ್. ರಾಜನ್, ಕಾರ್ಯದರ್ಶಿ ಪ್ರೇಮಾ ನಂದ, ಯೋಗಂ ನಿರ್ದೇಶಕರುಗಳಾದ ಶಂಕರ್ ನಾರಾಯಣ, ಮೋಹನ್ ದಾಸ್, ಯೂನಿಯನ್ ಕೌನ್ಸಿಲರ್ ಮೋಹನ್ ದಾಸ್, ಶಾಖಾ ಯೂನಿಯನ್ ಪ್ರತಿನಿಧಿ ಟಿ.ಸಿ. ಅಶೋಕ್, ಹಿರಿಯರಾದ ಸಹದೇವ, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಕೆ.ಕೆ. ಶ್ರೀನಿವಾಸ್, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ತುಳಸಿ ಗಣಪತಿ ಇನ್ನಿತರರು ಹಾಜರಿದ್ದರು.