ಕಣಿವೆ, ಮೇ ೧೮: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆಗೆ ಸಂಪರ್ಕ ಕಲ್ಪಿಸುವ ಕುಶಾಲನಗರ ನಂಜರಾಯಪಟ್ಟಣ ಮಾರ್ಗದ ರಾಜ್ಯ ಹೆದ್ದಾರಿ ನಂಜರಾಯಪಟ್ಟಣ ಹಾಗೂ ಹೊಸ ಪಟ್ಟಣ ವ್ಯಾಪ್ತಿಯ ರಸ್ತೆಗಳಲ್ಲಿ ಬೃಹತ್ ಗುಂಡಿಗಳಾಗಿವೆ.

ಅತ್ಯಂತ ಹೆಚ್ಚಿನ ಪ್ರವಾಸಿಗರ ವಾಹನಗಳು ಧಾವಿಸುವ ಇಲ್ಲಿ ರಸ್ತೆಯ ತುಂಬೆಲ್ಲಾ ಗುಂಡಿಗಳು ನಿರ್ಮಾಣಗೊಂಡಿವೆ. ವಾಹನಗಳ ಬಿಡಿ ಭಾಗಗಳಿಗೂ ಹಾನಿಯಾಗುವುದಲ್ಲದೇ ಪ್ರಯಾಣಿಸುವ ಮಂದಿಗೂ ಸಂಚಕಾರದ ಅಪಾಯವನ್ನು ಆಹ್ವಾನಿಸುತ್ತಿವೆ. ಆದ್ದರಿಂದ ಸಂಬAಧಪಟ್ಟ ಪ್ರಾಧಿಕಾರದ ಅಧಿಕಾರಿಗಳು ಗುಂಡಿ ಮುಚ್ಚುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಬೇಕೆಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಮಾವಾಜಿ ರಕ್ಷಿತ್, ನಿವಾಸಿಗಳಾದ ಪಂಚಾಕ್ಷರಿ, ಷಡಕ್ಷರಿ ಮೊದಲಾದವರು ಆಗ್ರಹಿಸಿದ್ದಾರೆ.