ಕಣಿವೆ-ಕುಶಾಲನಗರ, ಮೇ ೧೮: ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ವ್ಯಾಪ್ತಿಯ ಗಿರಿಜನ ನಿವಾಸಿಗಳಿಗೆ ಕುರಿಗಳನ್ನು ಉಚಿತವಾಗಿ ಶಾಸಕ ಅಪ್ಪಚ್ಚು ರಂಜನ್ ವಿತರಿಸಿದರು.

ಇದುವರೆಗೂ ಪ್ರಸಕ್ತ ಸಾಲಿನಲ್ಲಿ ೨೦೦ ಕುಟುಂಬಗಳಿಗೆ ತಲಾ ೪ ರಂತೆ, ಅಂದರೆ ಮೂರು ಹೆಣ್ಣು ಹಾಗೂ ಒಂದು ಗಂಡು ಮರಿಗಳಂತೆ ಒಟ್ಟು ೮೦೦ ಕುರಿಗಳನ್ನು ವಿತರಿಸಲಾಗಿದೆ. ಗಿರಿಜನರು ಆರ್ಥಿಕವಾಗಿ ಸದೃಢರಾಗಲು ಕುರಿ ಸಾಕಣೆ ಆದಾಯಕರ ಎಂದು ಶಾಸಕ ರಂಜನ್ ಹೇಳಿದರು. ಬಸವನಹಳ್ಳಿಯ ಗಿರಿಜನ ಸಹಕಾರ ಸಂಘ ಗಿರಿಜನರ ಕಲ್ಯಾಣಕ್ಕೆ ಅಗತ್ಯವಾದ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ ಎಂದರು.

ರೂ. ೯.೩ ಲಕ್ಷ ವೆಚ್ಚದಲ್ಲಿ ಹೊಲಿಗೆ ತರಬೇತಿ ಕೇಂದ್ರ, ೩೧.೨ ಲಕ್ಷ ವೆಚ್ಚದಲ್ಲಿ ೪೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಕಣಿವೆ-ಕುಶಾಲನಗರ, ಮೇ ೧೮: ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ವ್ಯಾಪ್ತಿಯ ಗಿರಿಜನ ನಿವಾಸಿಗಳಿಗೆ ಕುರಿಗಳನ್ನು ಉಚಿತವಾಗಿ ಶಾಸಕ ಅಪ್ಪಚ್ಚು ರಂಜನ್ ವಿತರಿಸಿದರು.

ಇದುವರೆಗೂ ಪ್ರಸಕ್ತ ಸಾಲಿನಲ್ಲಿ ೨೦೦ ಕುಟುಂಬಗಳಿಗೆ ತಲಾ ೪ ರಂತೆ, ಅಂದರೆ ಮೂರು ಹೆಣ್ಣು ಹಾಗೂ ಒಂದು ಗಂಡು ಮರಿಗಳಂತೆ ಒಟ್ಟು ೮೦೦ ಕುರಿಗಳನ್ನು ವಿತರಿಸಲಾಗಿದೆ. ಗಿರಿಜನರು ಆರ್ಥಿಕವಾಗಿ ಸದೃಢರಾಗಲು ಕುರಿ ಸಾಕಣೆ ಆದಾಯಕರ ಎಂದು ಶಾಸಕ ರಂಜನ್ ಹೇಳಿದರು. ಬಸವನಹಳ್ಳಿಯ ಗಿರಿಜನ ಸಹಕಾರ ಸಂಘ ಗಿರಿಜನರ ಕಲ್ಯಾಣಕ್ಕೆ ಅಗತ್ಯವಾದ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ ಎಂದರು.

ರೂ. ೯.೩ ಲಕ್ಷ ವೆಚ್ಚದಲ್ಲಿ ಹೊಲಿಗೆ ತರಬೇತಿ ಕೇಂದ್ರ, ೩೧.೨ ಲಕ್ಷ ವೆಚ್ಚದಲ್ಲಿ ೪೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಗಿರಿಜನರು ಯೋಜನೆಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿಯತ್ತ ಸಾಗಬೇಕಿದೆ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳುವ ಕೆಲಸವಾಗ ಬೇಕಾಗಿದೆ ಎಂದು ರಂಜನ್ ಹೇಳಿದರು.

ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು, ಸಂಘದ ಉಪಾಧ್ಯಕ್ಷ ಬಿ.ಎನ್. ಮನು, ನಿರ್ದೇಶಕರಾದ ಅಣ್ಣಯ್ಯ, ಪಂಚಾಯಿತಿ ಸದಸ್ಯ ಮಾದಪ್ಪ, ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಚಂದ್ರಶೇಖರ್ ಇದ್ದರು.