ಕಣಿವೆ, ಮೇ ೧೮: ಕುಶಾಲನಗರ ತಾಲೂಕು ವ್ಯಾಪ್ತಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಹದ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರು ಕೈಗೊಂಡಿರುವ ಶುಂಠಿ ಬೆಳೆ ಒಂದಷ್ಟು ರಂಗು ಪಡೆದಿದೆ. ಇದರಿಂದಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸದ ಕಳೆ ಮೂಡಿದೆ. ಕಳೆದ ಮೂರ್ನಾಲ್ಕು ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮವಾದ ಹದ ಮಳೆಯಾಗಿರುವುದು ಕೃಷಿಕರಿಗೆ ಸಂತಸ ತಂದಿದೆ.

ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಬಿತ್ತನೆಯಾಗಿರುವ ಶುಂಠಿ ಇದೀಗ ಒಂದರಿAದ ಒಂದೂವರೆ ಅಡಿಗಳಷ್ಟು ಮೇಲಕ್ಕೆ ಬೆಳೆಯುತ್ತಿರುವುದು ಒಂದೆಡೆಯಾದರೆ, ಕೆಲವೆಡೆಗಳಲ್ಲಿ ಭೂಮಿಗೆ ಬಿತ್ತನೆ ಮಾಡಿದ ಶುಂಠಿ ಈಗ ಪೂರ್ಣ ಪ್ರಮಾಣದಲ್ಲಿ ಮೊಳಕೆಯೊಡೆದು ಮೇಲೆ ಬರುತ್ತಿದೆ. ಹಾಗಾಗಿ ಶುಂಠಿ ಕೃಷಿಕರು ಇದೀಗ ಶುಂಠಿ ಪಾತಿಗಳಿಗೆ ಮಣ್ಣು ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ.

ಇನ್ನು ಕೆಲವು ಕೃಷಿಕರು ಪಾತಿಯಲ್ಲಿನ ಬೀಜದ ಶುಂಠಿ ಪೂರ್ಣ ಪ್ರಮಾಣದಲ್ಲಿ ಮೇಲೆ ಬರುವುದನ್ನೇ ಕಾಯುತ್ತಾ ಅದರ ಮೇಲೆ ತೆಳ್ಳಗಿನ ಮಣ್ಣು ಅಳವಡಿಸುವಲ್ಲಿ ಮಗ್ನರಾಗಿದ್ದಾರೆ.

ಬೆಲೆ ಆತಂಕ : ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಶುಂಠಿ ಬೆಲೆ ಕ್ಷೀಣಿಸಿದ್ದರಿಂದ ಸಹಜವಾಗಿಯೇ ಬೆಲೆ ಕುಸಿತದ ಭೀತಿ ಅನುಭವಿಸಿದ ಕೃಷಿಕರಲ್ಲಿ ಈ ಬಾರಿಯೂ ಅಂತಹುದೇ ಆತಂಕ ಮನೆ ಮಾಡುತ್ತಿದೆ. ಅಂದರೆ ಈ ಬಾರಿಯ ಶುಂಠಿ ಬಿತ್ತನೆ ಮಾಡಿ ಮೂರು ತಿಂಗಳು ಕಳೆಯುತ್ತಾ ಬಂದರೂ ಕೂಡ ಹಳೆಯ ಶುಂಠಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಾಣದ್ದರಿಂದ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಮಾರುಕಟ್ಟೆಗೆ ಅಣಿಯಾಗುವ ಹೊಸ ಶುಂಠಿಗೆ ಮತ್ತೆ ಎಲ್ಲಿ ಬೆಲೆ ಭೀತಿ ಉಂಟಾಗಲಿದೆಯೋ....ಏನೋ...? ಎಂಬ ಆತಂಕದಲ್ಲಿ ಕೃಷಿ ಕಾಯಕ ಸಾಗಿದೆ.

ಏರಿಕೆಯಾಗದ ಶುಂಠಿ ದರ : ಕಳೆದ ೨೦೨೧ ರ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಶುಂಠಿ ಬಿತ್ತನೆ ಮಾಡಿದ ನೂರಾರು ಮಂದಿ ಬಂಡವಾಳಶಾಹಿ ಕೃಷಿಕರು ತಾವು ಬೆಳೆದ ಹೊಲದ ಮಣ್ಣಿನೊಳಗೆ ಶುಂಠಿಯನ್ನು ಮುಚ್ಚಿಟ್ಟುಕೊಂಡು ಉತ್ತಮ ಧಾರಣೆಯ ನಿರೀಕ್ಷೆಯಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ.

ಆದರೆ ಧಾರಣೆ ಮಾತ್ರ ಮೂರಂಕಿ ಬಿಟ್ಟು ದಾಟುತ್ತಿಲ್ಲ. ಅಂದರೆ ೬೦ ಕೆ.ಜಿ. ತೂಕದ ಶುಂಠಿಗೆ ೯೦೦ ರಿಂದ ೯೫೦ ರೂಗಳು ಇದೆ. ಹಾಗಾಗಿ ಮತ್ತೆ ಇನ್ನೆರಡು ತಿಂಗಳಲ್ಲಿ ಒಂದಷ್ಟು ದರ ಏರಿಕೆಯಾಗಬಹುದಾ ನೋಡೋಣ. ಹೇಗಿದ್ದರೂ ನಷ್ಟಕ್ಕೆ ಸಿಲುಕಿದ್ದೇವೆ. ಮತ್ತೆ ಈ ಶುಂಠಿಯ ಫಸಲಿನಿಂದ ಮತ್ತಷ್ಟು ನಷ್ಟ ಉಂಟಾದರೆ ಮುಂದಿನ ದಿನಗಳಲ್ಲಿ ಶುಂಠಿ ಕೃಷಿಗೆ ವಿದಾಯ ಹೇಳಿಬಿಡೋಣ ಎಂಬ ದುಗುಡ ದುಮ್ಮಾನಗಳಲ್ಲಿ ಕೃಷಿಕರಿದ್ದಾರೆ.

ಏನೇ ಆಗಲಿ, ಈ ಬಾರಿಯ ಮಳೆ ಶುಂಠಿ ಕೃಷಿಕರಿಗೆ ಒಂದಷ್ಟು ವರದಾನವಾಗುತ್ತಿದೆ ಅಷ್ಟೆ.

- ಕೆ.ಎಸ್. ಮೂರ್ತಿ