ಮಡಿಕೇರಿ, ಮೇ ೧೮: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆ - ಚಳಿಯ ವಾತಾವರಣವೇ ಕಂಡುಬರುತ್ತಿದ್ದು, ಇದು ಇನ್ನೂ ಮುಂದುವರಿದಿದೆ. ರಾಜ್ಯಾದ್ಯಂತ ಬಹುತೇಕ ಇದೇ ಪರಿಸ್ಥಿತಿಯಿದ್ದು, ಮಳೆಗಾಲದ ಅವಧಿ ಸಮೀಪವಾಗುತ್ತಿರುವ ಕೊಡಗಿನಲ್ಲಿ ಈಗಿನ ವಾತಾವರಣದ ಅಸಹಜತೆ ಮುಂಗಾರುವಿಗೂ ಜೋಡಣೆ ಯಾಗಲಿದೆಯೇ ಎಂಬAತಾಗಿದೆ.

ಕಳೆದ ೨೪ ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೨ ಇಂಚು ಮಳೆ ದಾಖಲಾಗಿದೆ. ಜನವರಿಯಿಂದ ಈತನಕ ಜಿಲ್ಲೆಯಲ್ಲಿ ೧೨.೭೪ ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಕಳೆದ ಬಾರಿ ಈ ಅವಧಿಯಲ್ಲಿ ೧೬.೫೨ ಇಂಚು ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಕಳೆದ ೨೪ ಗಂಟೆಯಲ್ಲಿ ೨.೦೬, ವೀರಾಜಪೇಟೆ ೧.೫೨ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೨.೩೦ ಇಂಚು ಮಳೆಯಾಗಿದೆ. ಜನವರಿಯಿಂದ ಈ ತನಕ ಮಡಿಕೇರಿ ತಾಲೂಕಿನಲ್ಲಿ ೧೬.೭೦, ವೀರಾಜಪೇಟೆ ೧೧.೯೩ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೯.೬೦ ಇಂಚು ಮಳೆಯಾಗಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕುಶಾಲನಗರ ಹೋಬಳಿಗೆ ೩.೦೫ ಇಂಚಿನಷ್ಟು ಹೆಚ್ಚು ಮಳೆಯಾಗಿದೆ. ಉಳಿದಂತೆ ಮಡಿಕೇರಿ ಕ.ಸ.ಬಾ ೧.೭೯, ನಾಪೋಕ್ಲು ೧.೯೧, ಸಂಪಾಜೆ ೧.೭೬, ಭಾಗಮಂಡಲ ೨.೮೦, ವೀರಾಜಪೇಟೆ ಕ.ಸ.ಬಾ ೨.೧೦, ಹುದಿಕೇರಿ ೧.೦೮, ಶ್ರೀಮಂಗಲ ೧.೯೦, ಪೊನ್ನಂಪೇಟೆ ೧.೪೦, ಅಮ್ಮತ್ತಿ ೧.೩೦, ಬಾಳಲೆಗೆ ೧.೩೪ ಇಂಚು ಮಳೆಯಾಗಿದೆ. ಸೋಮವಾರಪೇಟೆ ಕ.ಸ.ಬಾ ೨.೪೦, ಶನಿವಾರಸಂತೆ ೨.೧೦, ಶಾಂತಳ್ಳಿ ೨.೭೩, ಕೊಡ್ಲಿಪೇಟೆ ೧.೮೪ ಹಾಗೂ ಸುಂಟಿಕೊಪ್ಪ ಹೋಬಳಿಗೆ ೧.೮೦ ಇಂಚು ಸರಾಸರಿ ಮಳೆ ಕಳೆದ ೨೪ ಗಂಟೆಯಲ್ಲಾಗಿದೆ.