ಕಣಿವೆ, ಮೇ ೧೮: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ಅಸುನೀಗಿದ ಘಟನೆ ಬುಧವಾರ ಕುಶಾಲನಗರ ಸಮೀಪದ ಕೊಡಗರಹಳ್ಳಿಯಲ್ಲಿ ನಡೆದಿದೆ. ಸುಂಟಿಕೊಪ್ಪದ ನಿವಾಸಿ ಮುಸ್ತಫಾ (೪೭) ಮೃತ ದುರ್ದೈವಿ.

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತಮ್ಮ ಮಗನನ್ನು ಸುಂಟಿಕೊಪ್ಪಕ್ಕೆ ಬಿಟ್ಟು ಕುಶಾಲನಗರಕ್ಕೆ ಹಿಂತಿರುಗುತ್ತಿದ್ದ ಸಂದರ್ಭ ಪ್ರವಾಸಿ ವಾಹನವೊಂದು ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ

(ಮಾರುತಿ ಎಕ್ಸ್ಯುವಿ ಕಾರು) ಹಾಗೂ ಎದುರಿನಿಂದ ಬಂದ ಇನ್ನೋವಾ ಕಾರಿನ ನಡುವೆ ಅಪಘಾತ ಸಂಭವಿಸಿದೆ.

ಮೃತರು ಪತ್ನಿ ಸೇರಿದಂತೆ ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಮೃತರು ಜಾವಮನೆ ಎಸ್ಟೇಟ್‌ನಲ್ಲಿ ವ್ಯವಸ್ಥಾಪಕರಾಗಿದ್ದರು. ಮುಸ್ತಫ ಅವರ ಅಗಲಿಕೆಗೆ ಕುಶಾಲನಗರ ಹಾಗೂ ಸುಂಟಿಕೊಪ್ಪದ ಗೆಳೆಯರ ಬಳಗ ಕಂಬನಿ

ಮಿಡಿದಿದೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.