*ಗೋಣಿಕೊಪ್ಪ, ಮೇ ೧೮: ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕುಂದ ಅಣೆಕಟ್ಟು ಬದಿಗಳಲ್ಲಿರುವ ಮನೆಗಳ ಏರಿಗಳಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಶಾಸಕ ಕೆ.ಜಿ. ಬೋಪಯ್ಯ ಪರಿಶೀಲಿಸಿದರು. ರೂ. ೯೯ ಲಕ್ಷ ಅನುದಾನದಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಇಂಜಿನಿಯರ್‌ಗಳಿಗೆ ಕಾಮಗಾರಿಯನ್ನು ಉತ್ತಮವಾಗಿ ನಡೆಸುವಂತೆ ಶಾಸಕರು ಈ ಸಂದರ್ಭ ಸೂಚಿಸಿದರು. ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಡಿ. ರಶ್ಮಿ, ಸದಸ್ಯ ಸುಳ್ಳಿಮಾಡ ದೀಪಕ್, ವಿ.ಎಸ್.ಎಸ್.ಎನ್. ಅಧ್ಯಕ್ಷ ಅಳಮೇಂಗಡ ವಿವೇಕ್, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮಾಚಿಮಾಡ ಎನ್. ತಮ್ಮಯ್ಯ, ಮಾಜಿ ಅಧ್ಯಕ್ಷ ಚೆಪುö್ಪಡಿರ ಸೋಮಯ್ಯ, ಪ್ರಮುಖರಾದ ಅಳಮೇಂಗಡ ನವೀನ್, ಸುರೇಶ್, ಕಾಡ್ಯಮಾಡ ಭರತ್ ಮಾಚು, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧುದೇವಯ್ಯ, ಸಣ್ಣ ನೀರಾವರಿ ಇಂಜಿನಿಯರ್ ರಫೀಕ್ ಇದ್ದರು.